Latest Updates
-
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
Headline for Deeplink -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ರೆಸಿಪಿ: ಆರೋಗ್ಯದ ಗಣಿ ಗರಿಗರಿ ಹಲಸಿನ ಬೀಜದ ಪೂರಿ
ಪೂರಿ ಅಂದಾಕ್ಷಣ ಎಣ್ಣೆತಿಂಡಿ ಎಂದು ಮೂಗು ಮುರಿಯುವವರೇ ಹೆಚ್ಚು. ಆದರೆ ಪೂರಿಯನ್ನೂ ಕೂಡ ಆರೋಗ್ಯಕಾರಿಯಾಗಿ ಮಾಡುವುದಕ್ಕೆ ಸಾಧ್ಯವಿದೆ ಎಂದರೆ ನೀವು ನಂಬುತ್ತೀರಾ? ಹೌದು ಸಿಂಪಲ್ ಆಗಿ ಪೂರಿ ಮಾಡುವುದಕ್ಕಿಂತ ವಿಶೇಷ ಪೂರಿಯನ್ನು ತಯಾರಿಸಿ ಸವಿದರೆ ಆರೋಗ್ಯಕ್ಕೂ ಹಿತ. ಅದಕ್ಕಾಗಿ ನಾವಿಲ್ಲಿ ಹಲಸಿನ ಬೀಜದಿಂದ ಪೂರಿ ತಯಾರಿಸುವುದು ಹೇಗೆ ಎಂಬ ಬಗೆಯನ್ನು ಹೇಳುತ್ತಿದ್ದೇವೆ.

ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಹಲಸಿನ ಹಣ್ಣು ತಿಂದ ನಂತರ ಬೀಜವನ್ನು ಶೇಖರಿಸಿ ಇಡುತ್ತಿದ್ದರು. ಬೇಸಿಗೆ ಮುಗಿದ ನಂತರ ಮಳೆಗಾಲದಲ್ಲಿ ಅಡುಗೆಗೆ ಅವುಗಳ ಬಳಕೆ ಮಾಡಲಾಗುತ್ತಿತ್ತು. ಮಳೆಗಾಲದಲ್ಲಿ ಸ್ವಲ್ಪ ಕರುಂಕುರುಂ ಅಡುಗೆಗಳು ಬೇಕೆನಿಸುತ್ತದೆ. ಎಣ್ಣೆ ತಿಂಡಿಗಳಿಗೆ ಮಳೆಗಾಲದಲ್ಲಿ ಸ್ವಲ್ಪ ಬೇಡಿಕೆ ಹೆಚ್ಚು. ಅಂತಹ ಸಮಯದಲ್ಲಿ ನೀವು ಈ ತಿಂಡಿ ತಯಾರಿಸುವುದರಿಂದ ನಾಲಗೆಗೂ ರುಚಿ ಅನ್ನಿಸುತ್ತದೆ. ಆರೋಗ್ಯಕ್ಕೂ ಹಿತವಾಗುತ್ತದೆ.
ಹಾಗಾದ್ರೆ ಹಲಸಿನ ಬೀಜಗಳಿಂದ ಪೂರಿ ತಯಾರಿಸುವ ಬಗೆ ಹೇಗೆ ನೋಡೋಣ ಬನ್ನಿ.
Recipe By: Sushma
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
. ಹಲಸಿನ ಬೀಜಗಳು -20
. ಗೋಧಿ ಹಿಟ್ಟು - 300 ಗ್ರಾಂ
. ಉಪ್ಪು - ರುಚಿಗೆ ತಕ್ಕಷ್ಟು
. ತೆಂಗಿನ ತುರಿ - ಅರ್ಧ ಕಪ್ ( optional)
. ಅಡುಗೆ ಎಣ್ಣೆ - ಅರ್ಧ ಲೀಟರ್
. ಸಕ್ಕರೆ - ಎರಡು ಸ್ಪೂನ್
-
ಮಾಡುವ ವಿಧಾನ -
. ಮೊದಲಿಗೆ ಹಲಸಿನ ಬೀಜಗಳ ಬಿಳಿಬಿಳಿಯಾಗಿರುವ ಸಿಪ್ಪೆಯನ್ನು ತೆಗೆಯಿರಿ
. ಕುಕ್ಕರ್ ನಲ್ಲಿ ಹಲಸಿನ ಬೀಜಕ್ಕೆ ಒಂದೆರಡು ಲೋಟ ನೀರು ಮತ್ತು ಉಪ್ಪು ಸೇರಿಸಿ ಬೇಯಿಸಿಕೊಳ್ಳಿ. ಮೂರರಿಂದ ನಾಲ್ಕು ವಿಷಿಲ್ ಕೂಗಿದರೆ ಒಳ್ಳೆಯದು.
. ಚೆನ್ನಾಗಿ ಬೆಂದ ಹಲಸಿನ ಬೀಜಗಳನ್ನು ತಣಿಯಲು ಬಿಡಿ. ನೀರನ್ನು ಸೋಸಿಕೊಂಡು ಬೀಜಗಳನ್ನು ಮಿಕ್ಸಿ ಮಾಡಿಕೊಳ್ಳಿ. ಗಟ್ಟಿ ಹಿಟ್ಟಿನಂತೆ ಮಾಡಿಕೊಳ್ಳಬೇಕು,
. ಮಿಕ್ಸಿ ಮಾಡಿಕೊಂಡ ಹಲಸಿನ ಬೀಜಕ್ಕೆ ಗೋಧಿಹಿಟ್ಟು, ಸಕ್ಕರೆ, ಅಗತ್ಯವಿದ್ದರೆ ಇನ್ನಷ್ಟು ಉಪ್ಪು ಸೇರಿಸಿ ಕಲಸಿಕೊಳ್ಳಿ.
. ತೆಂಗಿನ ತುರಿ ಇಷ್ಟಪಡುವವರು ಬೇಕಿದ್ದರೆ ತೆಂಗಿನ ತುರಿಯನ್ನು ನುಣ್ಣಗೆ ರುಬ್ಬಿಕೊಂಡು ಮೇಲಿನ ಹಿಟ್ಟಿಗೆ ಸೇರಿಸಿಕೊಳ್ಳಬಹುದು. ತೆಂಗಿನ ತುರಿ ಸೇರಿಸುವುದರಿಂದ ಪೂರಿ ಮೃದುವಾಗಿ ಬರುತ್ತದೆ ಮತ್ತು ಸ್ವಲ್ಪ ಸಿಹಿಯಾಗುತ್ತದೆ.
. ಗಟ್ಟಿಯಾಗಿ ಕಲಸಿಕೊಂಡ ಹಿಟ್ಟನ್ನು ಉಂಡೆಕಟ್ಟಿ ವೃತ್ತಾಕಾರಕ್ಕೆ ತಟ್ಟಿ ಕಾದ ಅಡುಗೆ ಎಣ್ಣೆಯಲ್ಲಿ ಕರಿದರೆ ಪೂರಿ ಸಿದ್ಧವಾಗುತ್ತದೆ.
.ಚಟ್ನಿ, ಸಾಂಬಾರ್ ಅಥವಾ ಕೂಟ್ ಜೊತೆಗೆ ಈ ಪೂರಿ ಸವಿಯುವುದಕ್ಕೆ ಬಹಳ ರುಚಿಯಾಗಿರುತ್ತದೆ.
- ಹಲಸಿನ ಬೀಜ ತಿನ್ನುವುದರಿಂದಾಗಿ ಕಣ್ಣು ಮತ್ತು ಕೂದಲಿನ ಆರೋಗ್ಯ ಹೆಚ್ಚಾಗುತ್ತದೆ .ಮಾಂಸಖಂಡಗಳ ಶಕ್ತಿ ಹೆಚ್ಚಳಕ್ಕೆ ಈ ಹಲಸಿನ ಬೀಜಗಳು ಸಹಕಾರಿ. .ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸುವುದಕ್ಕೆ ಇದು ನೆರವಾಗುತ್ತದೆ. .ಮಾನಸಿಕ ಒತ್ತಡ ಮತ್ತು ಚರ್ಮದ ಕಾಯಿಲೆಯ ನಿವಾರಣೆಗೆ ಉಪಯೋಗವಾಗುತ್ತದೆ. .ಇದರಲ್ಲಿ ಪ್ರೊಟೀನ್,ಆಂಟಿಆಕ್ಸಿಡೆಂಟ್ ಗಳು,ರೆಸಿಸ್ಟೆಂಟ್ ಸ್ಟಾರ್ಚ್ ಇತ್ಯಾದಿ ಅಧಿಕವಾಗಿರುತ್ತದೆ.
- ಕ್ಯಾಲೋರಿ - 53
- ಕೊಬ್ಬು - 0
- ಪ್ರೋಟಿನ್ - 2 ಗ್ರಾಂ
- ಕಾರ್ಬ್ಸ್ - 11 ಗ್ರಾಂ
- ಸಕ್ಕರೆ - 2 ಗ್ರಾಂ
- ಫೈಬರ್ - 0.5



Click it and Unblock the Notifications