Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಆಹಾ! ಹಲಸಿನ ಪಾಯಸ ಬಲು ರುಚಿ
ಇದು ಹಲಸಿನ ಸೀಸನ್. ಹಲಸಿನ ಹಣ್ಣು ಎಂದರೆ ಖಂಡಿತ ಎಲ್ಲರ ಬಾಯಲ್ಲೂ ನೀರೂರುತ್ತದೆ. ತಿಂದಷ್ಟೂ ರುಚಿ ಅನ್ನಿಸೋ ಹಣ್ಣು ಇದು. ಹಸಿದು ಹಲಸು,ಉಂಡು ಮಾವು ಅನ್ನೋ ಗಾದೆ ಮಾತೇ ಇದೆ.

ಹಲಸಿನ ಹಣ್ಣುಗಳಿಂದ ಅನೇಕ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಕಡುಬು, ಮುಳ್ಕ ಭಾರೀ ಫೇಮಸ್. ಅದರ ಜೊತೆಗೆ ಹಲಸಿನ ಹಣ್ಣಿನ ಪಾಯಸ ನಿಜಕ್ಕೂ ಬೊಂಬಾಟ್ ಅನ್ನಿಸುವ ರೆಸಿಪಿ. ನಿಮಗೆ ಹಲಸಿನ ಹಣ್ಣಿನಿಂದ ಪಾಯಸ ತಯಾರಿಸುವುದು ಹೇಗೆ ಎಂಬುದು ತಿಳಿಯದೇ ಇದ್ದಲ್ಲಿ ಈ ಲೇಖನ ಓದಿ. ನಿಮ್ಮ ಅಡುಗೆ ಪ್ರಯೋಗ ಶಾಲೆಯಲ್ಲಿ ಖಂಡಿತ ಪ್ರಯತ್ನಿಸಬಹುದು.
Recipe By: Sushma
Recipe Type: veg
Serves: 4
-
ಬೇಕಾಗುವ ಸಾಮಗ್ರಿಗಳು-
ಹಲಸಿನ ಹಣ್ಣು- ನಾಲ್ಕು ಬೌಲ್
ಕಡಲೆಬೇಳೆ - ಒಂದು ಬೌಲ್
ಬೆಲ್ಲ - ಒಂದು ಬೌಲ್
ತೆಂಗಿನ ಹಾಲು - ಮಧ್ಯಮ ಗಾತ್ರದ ಒಂದು ತೆಂಗಿನ ಕಾಯಿ
ಏಲಕ್ಕಿ ಪುಡಿ- ಚಿಟಿಕೆ
ಉಪ್ಪು- ಚಿಟಿಕೆ
-
ಮಾಡುವ ವಿಧಾನ-
ಕಡಲೆಬೇಳೆಯನ್ನು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ.ಕುಕ್ಕರ್ ನಲ್ಲಿ ಬೇಯಿಸಿದರೆ ಬೇಗನೆ ಕಡಲೆಬೇಳೆ ಬೇಯುತ್ತದೆ. ಮೂರು ವಿಷಿಲ್ ಬೇಕಾಗಬಹುದು.
ಹಲಸಿನ ಹಣ್ಣನ್ನ ಸಣ್ಣಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ.
ಹಲಸಿನ ಹಣ್ಣಿಗೆ ಬೆಲ್ಲ ಹಾಕಿ ಒಂದು ಕುದಿ ಬರುವವರೆಗೆ ಬೇಯಿಸಿಕೊಳ್ಳಿ.
ಇದಕ್ಕೆ ತೆಂಗಿನ ಕಾಯಿಯನ್ನು ರುಬ್ಬಿಕೊಂಡು ಅದರ ಹಾಲನ್ನು ತೆಗೆದು ಸೇರಿಸಿ.
ನಂತರ ಬೇಯಿಸಿಕೊಂಡ ಕಡಲೆಬೇಳೆ ಸೇರಿಸಿ, ಚಿಟಿಕೆ ಉಪ್ಪು ಹಾಕಿ ಕುದಿಸಿ.
ಪಾಯಸದ ಘಮಕ್ಕೆ ಏಲಕ್ಕಿ ಪುಡಿ ಹಾಕಿದರೆ ಬಿಸಿಬಿಸಿ ಹಲಸಿನ ಹಣ್ಣಿನ ಪಾಯಸ ಸವಿಯಲು ಸಿದ್ಧವಾಗುತ್ತದೆ.
- ಹಲಸಿನ ಹಣ್ಣಿನ ಸೇವನೆಯಿಂದ ಹಲವು ಲಾಭಗಳಿವೆ. ಸೀಸನಲ್ ಫ್ರೂಟ್ ಆಗಿರುವ ಇದು ವಿವಿಧ ಖಾದ್ಯಗಳ ತಯಾರಿಕೆಗೆ ಸಹಕಾರಿ ಹಲಸಿನಲ್ಲಿ ಗಾಯ ಗುಣಮುಖಗೊಳಿಸುವ ಗುಣಗಳಿವೆ.ಚರ್ಮ, ಮೂಳೆ,ಸೇರಿದಂತೆ ದೇಹದ ಹಲವು ಅಂಗಗಳಿಗೆ ಇದು ಹೆಚ್ಚಿನ ಆರೋಗ್ಯ ಒದಗಿಸುವುದಕ್ಕೆ ನೆರವಾಗುತ್ತದೆ.
- ಕಾರ್ಬೋಹೈಡ್ರೇಟ್ಸ್ - 38.36 g
- ಡಯಟರಿ ಫೈಬರ್ - 2.5 g
- ಸಕ್ಕರೆ - 31.48 g
- ಕ್ಯಾಲೋರಿಗಳು - 157
- ಮೆಗ್ನೇಷಿಯಂ - 48 mg
- ವಿಟಮಿನ್ ಸಿ - 22.6 mg



Click it and Unblock the Notifications
