For Quick Alerts
ALLOW NOTIFICATIONS  
For Daily Alerts

ಮಳೆಗಾಲದ ಹಣ್ಣು: ಹಲಸಿನ ಹಣ್ಣಿನ ಹಲ್ವ ರೆಸಿಪಿ

Posted By:
|

ಕರಾವಳಿಯ ಆಟಿ ತಿಂಗಳ ಅಥವಾ ಆಷಾಢ ತಿಂಗಳ ಸಂಪ್ರದಾಯ ಖಾದ್ಯ, ಆಚರಣೆಯ ಎಲ್ಲವೂ ವಿಶೇಷ. ಈ ಸಮಯದ ಆಚರಣೆಯ ಜೊತೆಗೆ ಖಾದ್ಯಗಳಿಗೂ ಮಹತ್ವವಿದೆ. ಅಂತಹುದರಲ್ಲಿ ಒಂದು ಹಲಸಿನ ಹಣ್ಣಿನ ಹಲ್ವ. ಹಲಸಿನ ಕಾಲವಾಗಿರುವುದರಿಂದ ಈ ಹಲ್ವವನ್ನು ಸುಲಭವಾಗಿ ಪ್ರಯತ್ನಿಸಬಹುದು. ಹಲ್ವಾ ಪ್ರಿಯರಿಗೆ ಹಲಸಿನ ಹಣ್ಣಿನ ಹಲ್ವಾವು ಇಷ್ಟವಾಗದಿರಲು ಸಾಧ್ಯವಿಲ್ಲ. ಹಲಸಿನ ಹಣ್ಣಿನ ಹಲ್ವ ಮಾಡಲು ಸ್ವಲ್ಪ ಸಮಯ ಹಿಡಿಯಬಹುದು ಆದರೆ ಬಹು ರುಚಿ.

Jackfruit Halwa Recipe in Kannada | Chakka Halwa Recipe
ಮಳೆಗಾಲದ ಹಣ್ಣು: ಹಲಸಿನ ಹಣ್ಣಿನ ಹಲ್ವ ರೆಸಿಪಿ
ಮಳೆಗಾಲದ ಹಣ್ಣು: ಹಲಸಿನ ಹಣ್ಣಿನ ಹಲ್ವ ರೆಸಿಪಿ
Prep Time
5 Mins
Cook Time
30M
Total Time
35 Mins

Recipe By: Shreeraksha

Recipe Type: Vegetarian

Serves: 3

Ingredients
  • ಬೇಕಾಗುವ ಪದಾರ್ಥಗಳು:

    ಹಲಸಿನ ಹಣ್ಣು- 4ಕಪ್, ಬೀಜ ತೆಗೆದು ಕತ್ತರಿಸಿದ್ದು

    ಬೆಲ್ಲ- 2 ಕಪ್

    ತುಪ್ಪ- ಅರ್ಧ ಕಪ್

    ಬೇಕಿದ್ದಲ್ಲಿ ಏಲಕ್ಕಿ ಹಾಗೂ ಗೋಡಂಬಿ ಪುಡಿ

Red Rice Kanda Poha
How to Prepare
  • ತಯಾರಿಸುವ ವಿಧಾನ:

    • ಮೊದಲು ಬೀಜ ತೆಗೆದ ಹಲಸಿನ ಹಣ್ಣನ್ನು ನೀರು ಸೇರಿಸದೆ ರುಬ್ಬಿಕೊಳ್ಳಬೇಕು.
    • ರುಬ್ಬಿಕೊಂಡ ಮಿಶ್ರಣವನ್ನು ಬಿಸಿ ಬಾಣಲೆಗೆ ಹಾಕಬೇಕು. ಹಣ್ಣಿನ ಪ್ರಮಾಣಕ್ಕೆ ಸರಿದೂಗುವಂತೆ ಬೆಲ್ಲವನ್ನು ಹಾಕಬೇಕು.
    • ಈ ಮಿಶ್ರಣವನ್ನು ಕುದಿಸುತ್ತಾ, ಕೈಯಾಡಿಸುತ್ತಿರಬೇಕು. ಇದು ಮೂವತ್ತು ಅಥವಾ ಅದಕ್ಕಿಂತ ಹೆಚ್ಚು ಸಮಯವೂ ತೆಗೆದುಕೊಳ್ಳಬಹುದು.
    • ಬಣ್ಣ ಬದಲಾಗುತ್ತಾ ಬರುತ್ತದೆ. ಮೊದಲು ಕಂದು ಬಣ್ಣ, ನಂತರ ಸ್ವಲ್ಪ ಕಪ್ಪು ಬಣ್ಣಕ್ಕೆ ಬದಲಾಗುತ್ತದೆ. ಮಿಶ್ರಣ ಗಟ್ಟಿ ಹದಕ್ಕೆ ಬಂದ ನಂತರ ತುಪ್ಪವನ್ನು ಸೇರಿಸಿ, ತುಪ್ಪ ಒಮ್ಮೆಲೆ ಹಾಕಬೇಡಿ, ಸ್ವಲ್ಪ ಸ್ವಲ್ಪ ಹಾಕುತ್ತಾ ಕೈಯಾಡಿಸಿ.
    • ಬೇಕಿದ್ದಲ್ಲಿ ಈಗ ಏಲಕ್ಕಿ ಪುಡಿ ಮತ್ತು ಗೋಡಂಬಿ ತುಂಡುಗಳನ್ನು ಸೇರಿಸಿ.
    • ಹಲ್ವ ಪಾತ್ರೆಯ ಬದಿಗಳನ್ನು ಬಿಡಲು ಪ್ರಾರಂಭಿಸಿದಾಗ ಅದನ್ನು ತೆಗೆದು, ಅದನ್ನು ತುಪ್ಪ ಹಚ್ಚಿದ ಬಟ್ಟಲು ಅಥವಾ ಗ್ರೀಸ್ ಪ್ಯಾನ್ ಗೆ ವರ್ಗಾಯಿಸಿ, ತಣಿಯಲು ಬಿಡಿ.
    • ಸುಮಾರು ಒಂದು ಗಂಟೆಗಳ ನಂತರ, ಹಲಸಿನ ಹಣ್ಣಿನ ಹಲ್ವ ಸವಿಯಲು ಸಿದ್ಧ.
Instructions
Nutritional Information
  • People - 3
  • ಪ್ರೋಟೀನ್ - 2.42ಗ್ರಾ
  • ಕಾರ್ಬೋಹೈಡ್ರೇಟ್ - 82.4ಗ್ರಾ
  • ಫೈಬರ್ - 2.26ಗ್ರಾ
[ 3.5 of 5 - 94 Users]
Story first published: Wednesday, July 28, 2021, 15:15 [IST]
X
Desktop Bottom Promotion