For Quick Alerts
ALLOW NOTIFICATIONS  
For Daily Alerts

ರೆಸಿಪಿ: ಬಾಣಂತಿಯರ ಆರೋಗ್ಯ ವೃದ್ಧಿಸುವ ಕಿಸುಕಾರೆ ಹೂವಿನ ತಂಬಳಿ

Posted By:
|

ಕಿಸುಕಾರೆ ಅಥವಾ ಹೊಳೆ ದಾಸವಾಳ ಎಂದು ಕರೆಯಲ್ಪಡುವ ಹೂವು ಗುಡ್ಡಗಾಡುಗಳಲ್ಲಿ ಸಾಮಾನ್ಯವಾಗಿ ಸಹಜವಾಗಿಯೇ ಬೆಳೆದಿರುತ್ತದೆ. ಇದರ ಸಸ್ಯಶಾಸ್ತ್ರೀಯ ಹೆಸರು ಇಕ್ಸೋರ ಕೊಸಿನಿಯಾ(ಲಿನ್) ಎನ್ನಲಾಗುತ್ತದೆ. ಇಂಗ್ಲೀಷಿನಲ್ಲಿ ಇದನ್ನು ಜಂಗಲ್ ಫ್ಲೇಮ್ ಎಂದು ಗುರುತಿಸಲಾಗುತ್ತದೆ. ರುಬಿಯಾಸಿಯೇ ಕುಟುಂಬಕ್ಕೆ ಸೇರಿದ ಹೂವು ಇದು. ಕನ್ನಡದಲ್ಲೂ ಬೇರೆಬೇರೆ ಪ್ರದೇಶಗಳಲ್ಲಿ ಈ ಹೂವಿಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಕುಸುಮಾಲೆ, ಕೇಪಳ, ಕಿಸುಕಾರೆ, ಹೊಳೆ ದಾಸವಾಳ ಇತ್ಯಾದಿ ಹೆಸರುಗಳು ಕೂಡ ಇದೆ.

ixora flower soup

ಹಲವು ಬಣ್ಣಗಳಲ್ಲಿ ಈ ಹೂವನ್ನು ನೀವು ಕಾಣಬಹುದು. ಕೆಂಪು, ಬಿಳಿ, ಹಳದಿ, ತುಪ್ಪದ ವರ್ಣ, ಗುಲಾಬಿ ವರ್ಣ ಸೇರಿದಂತೆ ಹಲವು ಬಣ್ಣಗಳ ಹೂವು ಗೊಂಚಲು ಗೊಂಚಲಾಗಿ ಬಿಟ್ಟರೆ ನೋಡಲು ಬಲು ಸುಂದರ. ಕಣ್ಣಿಗೆ ಆಹ್ಲಾದ ನೀಡುವ ಈ ಹೂವುಗಳು ಕೇವಲ ಸೌಂದರ್ಯಕ್ಕಷ್ಟೇ ಸೀಮಿತವಲ್ಲ ಬದಲಾಗಿ ಇದೊಂದು ಔಷಧೀಯ ಸಸ್ಯವೂ ಹೌದು.
ಈ ಹೂವುಗಳಿಂದ ಖಾಧ್ಯಗಳನ್ನೂ ಕೂಡ ತಯಾರಿಸಬಹುದು. ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವ ಸಾಮರ್ಥ್ಯವನ್ನು ಈ ಹೂವುಗಳು ಹೊಂದಿದೆ. ನಾವಿಂದು ಇಲ್ಲಿ ಹಳದಿ ಬಣ್ಣದ ಕಿಸುಕಾರೆ ಹೂವುಗಳನ್ನು ಬಳಸಿ ತಂಬಳಿ ಮಾಡುವುದು ಹೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.

Ixora Flower Soup Recipe ಕಿಸುಕಾರೆ ಹೂವಿನ ತಂಬಳಿ
Ixora Flower Soup Recipe ಕಿಸುಕಾರೆ ಹೂವಿನ ತಂಬಳಿ
Prep Time
5 Mins
Cook Time
5M
Total Time
10 Mins

Recipe By: Sushma chatra

Recipe Type: Veg

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    • ಕಿಸುಕಾರೆ ಹೂವು - ಮೂರರಿಂದ ನಾಲ್ಕು ಗೊಂಚಲು

    • ಜೀರಿಗೆ - ಅರ್ಧ ಟೀ ಸ್ಪೂನ್

    • ಉಪ್ಪು - ರುಚಿಗೆ ತಕ್ಕಷ್ಟು

    • ಮಜ್ಜಿಗೆ - ಕಾಲು ಲೀಟರ್

    • ಕಾಳುಮೆಣಸು - ಎರಡರಿಂದ ಮೂರು

    • ಬೆಲ್ಲ - ರುಚಿಗೆ ತಕ್ಕಷ್ಟು( ಖಾರ ಇಷ್ಟಪಡುವವರು ಹಾಕದೆಯೂ ಇರಬಹುದು)

    • ತುಪ್ಪ - ಒಂದು ಚಮಚ

Red Rice Kanda Poha
How to Prepare
  • ಮಾಡುವ ವಿಧಾನ

    • ಮೊದಲಿಗೆ ಹೂವುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಳ್ಳಿ.

    • ಕಾಲು ಟೀ ಸ್ಪೂನ್ ಜೀರಿಗೆ ಮತ್ತು ಕಾಳುಮೆಣಸಿನ ಜೊತೆಗೆ ಹೂವುಗಳನ್ನು ಹುರಿದುಕೊಳ್ಳಿ.

    • ಈ ಮಿಶ್ರಣವನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

    • ಮಿಕ್ಸಿ ಮಾಡಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

    • ಮಜ್ಜಿಗೆ ಮತ್ತು ಬೆಲ್ಲವನ್ನು ಸೇರಿಸಿ.

    • ತುಪ್ಪದೊಂದಿಗೆ ಜೀರಿಗೆ ಹುರಿದು ಒಗ್ಗರಣೆ ಮಾಡಿದರೆ ರುಚಿರುಚಿಯಾದ ಕಿಸುಕಾರೆ ಹೂವಿನ ತಂಬಳಿ ಸವಿಯಲು ಸಿದ್ಧ.

Instructions
  • ಜ್ವರ ಬಂದಾಗ ಬಾಯಿ ರುಚಿ ಇಲ್ಲದೆ ಇರುವವರು ಈ ತಂಬಳಿ ಸೇವನೆ ಮಾಡುವುದರಿಂದಾಗಿ ಜ್ವರ ಸಮಸ್ಯೆ ನಿವಾರಣೆಯಾಗಿ ಬಾಯಿ ರುಚಿಯೂ ಕೂಡ ಅಧಿಕವಾಗುತ್ತದೆ. ಸೂಪ್ ನಂತೆ ಊಟಕ್ಕೂ ಮುನ್ನ ಕುಡಿಯಲೂಬಹುದು ಅಥವಾ ಅನ್ನದೊಂದಿಗೆ ಕಲಸಿ ಸೇವಿಸುವುದಕ್ಕೂ ಕೂಡ ಅಧ್ಬುತವಾಗಿರುತ್ತದೆ.
Nutritional Information

ಮಾಡುವ ಹಂತ-ಹಂತದ ವಿಧಾನ

• ಮೊದಲಿಗೆ ಹೂವುಗಳನ್ನು ಚೆನ್ನಾಗಿ ತೊಳೆದು ಸ್ವಚ್ಛ ಮಾಡಿಕೊಳ್ಳಿ.

ixora flower soup

• ಕಾಲು ಟೀ ಸ್ಪೂನ್ ಜೀರಿಗೆ ಮತ್ತು ಕಾಳುಮೆಣಸಿನ ಜೊತೆಗೆ ಹೂವುಗಳನ್ನು ಹುರಿದುಕೊಳ್ಳಿ.

• ಈ ಮಿಶ್ರಣವನ್ನು ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

ixora flower soup

• ಮಿಕ್ಸಿ ಮಾಡಿದ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

ixora flower soup

• ಮಜ್ಜಿಗೆ ಮತ್ತು ಬೆಲ್ಲವನ್ನು ಸೇರಿಸಿ.

ixora flower soup
ixora flower soup

• ತುಪ್ಪದೊಂದಿಗೆ ಜೀರಿಗೆ ಹುರಿದು ಒಗ್ಗರಣೆ ಮಾಡಿದರೆ ರುಚಿರುಚಿಯಾದ ಕಿಸುಕಾರೆ ಹೂವಿನ ತಂಬಳಿ ಸವಿಯಲು ಸಿದ್ಧ.

ixora flower soup
ixora flower soup

ಆರೋಗ್ಯ ಲಾಭಗಳು
• ಬಾಣಂತಿಯರು ಈ ತಂಬಳಿ ಸೇವಿಸುವುದರಿಂದಾಗಿ ತಾಯಿ ಮತ್ತು ಮಗುವಿಗೆ ಆಗುವ ಚವಿ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು
• ಈ ಹೂವುಗಳು ನೋವು ನಿವಾರಕ ಸಾಮರ್ಥ್ಯವನ್ನು ಹೊಂದಿರುವುದರಿಂದಾಗಿ ನಿಮಗೆ ದೇಹದ ಯಾವುದೇ ಭಾಗದಲ್ಲಿ ನೋವು ಇದ್ದಲ್ಲಿ ಈ ತಂಬಳಿ ಸೇವನೆ ನಿಮ್ಮ ನೋವನ್ನು ನಿವಾರಿಸುತ್ತದೆ.
• ತಲೆ ನೋವು ಸಮಸ್ಯೆಯಿಂದ ಆಗಾಗ ಬಳಲುತ್ತಿರುವವರು ವಾರಕ್ಕೊಮ್ಮೆ ಈ ತಂಬಳಿ ಸೇವನೆ ಮಾಡಿದರೆ ಒಳ್ಳೆಯದು.
• ಹೊಟ್ಟೆಯ ಸಮಸ್ಯೆ ಎದುರಿಸುತ್ತಿರುವವರು ಕಿಸುಕಾರೆ ತಂಬಳಿಯನ್ನು ಕುಡಿಯಬಹದು ಅಥವಾ ಮೆತ್ತನೆಯ ಅನ್ನದ ಜೊತೆಗೆ ಕಲಸಿಯೂ ಸೇವಿಸಬಹುದು.
• ಅತಿಸಾರ ಸಮಸ್ಯೆಯಿಂದ ಬಳಲುತ್ತಿರುವವರು ಈ ತಂಬಳಿ ಸೇವಿಸುವುದು ಒಳ್ಳೆಯದು.

[ 4 of 5 - 14 Users]
X
Desktop Bottom Promotion