Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮದ್ದೂರು ವಡೆ ಹಿಂದಿರುವ ಸ್ವಾರಸ್ಯಕರ ಕತೆ ಗೊತ್ತೇ? ಏನು ಮಾಡಬೇಕು ಎಂದು ಗೊತ್ತಾಗದೆ ಮಾಡಿದ ಸ್ನ್ಯಾಕ್ಸ್ ಇದು
ನೀವು ಮಂಡ್ಯ-ಮದ್ದೂರು ಕಡೆ ಹೋದರೆ ಅಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಸ್ನ್ಯಾಕ್ಸ್ ಅಂದರೆ ಮದ್ದೂರು ವಡೆ. ಅಲ್ಲಿ ಹೋಟೆಲ್‌ಗಳಲ್ಲಿ , ಬಸ್‌ಸ್ಟ್ಯಾಂಡ್‌ನಲ್ಲಿ ಈ ಮದ್ದೂರು ವಡೆ ಮಾರುವವರನ್ನು ಕಾಣುತ್ತೇವೆ. ಕೆಲವರು 10 ರೂಪಾಯಿಗೆ ಒಂದು ಕೊಟ್ಟರೆ, ಸ್ವಲ್ಪ ದೊಡ್ಡ ಗಾತ್ರದ ವಡೆಗೆ 20 ರುಪಾಯಿ ಇರುತ್ತದೆ. ಆ ವಡೆ ನೋಡುವಾಗ ಯಾರಿಗಾದರು ಅದರ ಟೇಸ್ಟ್ ನೋಡಬೇಕೆನಿಸುತ್ತದೆ, ತಿಂದಾಗ ರುಚಿಯಾಗಿರುವುದರಿಂದ ಇಷ್ಟವಾಗುವುದು.

ಆದರೆ ಈ ಮದ್ದೂರು ವಡೆ ಹುಟ್ಟಿಕೊಂಡಿದ್ದು ಹೇಗೆ? ಇದನ್ನು ಮೊದಲು ತಯಾರಿಸಿದ್ದು ಹೇಗೆ ಎಂಬುವುದು ಗೊತ್ತೇ? ಇದು ಪ್ಲ್ಯಾನ್ ಮಾಡಿ ತಯಾರಿಸಿದ ರೆಸಿಪಿ ಅಲ್ಲ, ಆಕಸ್ಮಿಕವಾಗಿ ತಯಾರಿಸಿದ್ದು, ಮದ್ದೂರು ವಡೆ ತಯಾರಾದ ಇಂಟೆರೆಸ್ಟಿಂಗ್ ಕತೆ ನೋಡುವುದಾದರೆ...
1917ರಲ್ಲಿ ರಾಮಚಂದ್ರ ಬುದ್ಧಯ್ಯ ಎಂಬುವವರು ಮದ್ದೂರು ರೈಲ್ವೆ ಸ್ಟೆಷನ್ ಬಳಿ ವೆಜ್ ಹೋಟೆಲ್ ನಡೆಸುತ್ತಿದ್ದರು. ಪ್ರತಿನಿತ್ಯ ನೂರಾರು ಜನರು ಆ ಹೋಟೆಲ್‌ಗೆ ಬರುತ್ತಿದ್ದರು. ಕೆಲಸದಿಂದ ಮರಳುತ್ತಿರುವವರು ರಾಮಚಂದ್ರರವರ ಹೋಟೆಲ್‌ಗೆ ಬಂದು ತಿಂಡಿ ತಿಂದು ಹೋಗುತ್ತಿದ್ದರು. ಇಡ್ಲಿ, ವಡೆ, ಸಾಂಬಾರ್, ಪಕೋಡಾ ಈ ಬಗೆಯ ತಿಂಡಿಗಳನ್ನು ಮಾರುತ್ತಿದ್ದರು.
ಮದ್ದೂರು ವಡೆ ತಯಾರಾದ ಕತೆ
ಹೀಗಿರುವಾಗ ಏಪ್ರಿಲ್ ತಿಂಗಳಿನ ಒಂದು ದಿನ ವಡೆ ತಯಾರಿಗೆ ಸಾಮಗ್ರಿ, ಬಂದ ಸಿದ್ಧಪಡಿಸಲು ಸ್ವಲ್ಪ ತಡವಾಗುತ್ತೆ, ತನ್ನ ಗ್ರಾಹಕರಿಗೆ ಏನಾದರೂ ಮಾಡಿ ಕೊಡಲೇಬೇಕು ಎಂದು ಪಕೋಡಾ ಸಾಮಗ್ರಿ ಜೊತೆ ಮತ್ತಿತರ ಸಾಮಗ್ರಿ ಸೇರುಸು ಮಿಶ್ರ ಮಾಡಿ ತಟ್ಟಿ ಏನೋ ಒಂದು ತಯಾರಿಸಿ ಎಣ್ಣೆಯಲ್ಲಿ ಫ್ರೈ ಮಾಡುತ್ತಾರೆ, ನೋಡಿದರೆ ರುಚಿ ತುಂಬಾನೇ ಚೆನ್ನಾಗಿರುತ್ತದೆ, ಗ್ರಾಹಕರಿಗೆ ತುಂಬಾನೇ ಇಷ್ಟವಾಗುವುದು, ನಿಧಾನಕ್ಕೆ ಡಿಮ್ಯಾಂಡ್ ಹೆಚ್ಚಾಗುವುದು, ಹೀಗೆ ಮದ್ದೂರು ವಡೆ ಪ್ರಸಿದ್ಧಿಯನ್ನು ಪಡೆಯಿತು.
ರಾಮಚಂದ್ರರ ನಂತರ ಅವರ ಮಕ್ಕಳು ಕೂಡ ಮದ್ದೂರು ವಡೆ ಮಾಡಲಾರಂಭಿಸಿದರು, ಈಗ ನಿಮಗೆ ಎಲ್ಲಾ ಕಡೆ ಮದ್ದೂರು ವಡೆ ಸಿಗುತ್ತದೆ.
Recipe By: Reena TK
Recipe Type: Snacks
Serves: 4
-
ಬೇಕಾಗುವ ಸಾಮಗ್ರಿ
ಅಕ್ಕಿ ಹಿಟ್ಟು 3/4 ಕಪ್
ಸೂಜಿ ರವೆ 2 ಚಮಚ
ಮೈದಾ 1 ಚಮಚ
ಕಡಲೆ ಹಿಟ್ಟು 2 ಚಮಚ
ಜೀರಿಗೆ 1/2 ಚಮಚ
ಕೊತ್ತಂಬರಿ ಸೊಪ್ಪು 1ಕಪ್
ಹಸಿಮೆಣಸು 1
ಈರುಳ್ಳಿ 1 ಕಪ್
ರುಚಿಗೆ ತಕ್ಕ ಉಪ್ಪು
ಚಿಟಿಕೆಯಷ್ಟು ಇಂಗು
ಎಣ್ಣೆ (ಫ್ರೈ ಮಾಡಲು)
1/2 ಲೋಟಕ್ಕಿಂತ ಕಡಿಮೆ ನೀರು (ಕಲೆಸುವಾಗ ನೋಡಿ ಹಾಕಿ ಹಿಟ್ಟು ನೀರು ನೀರಾಗಬಾರದು)
-
ತಯಾರಿಸುವುದು ಹೇಗೆ?
* ಒಂದು ಬೌಲ್‌ನಲ್ಲಿ ಮೈದಾ ಹಿಟ್ಟು, ಸೂಜಿ ರವೆ, ಅಕ್ಕಿ ಹಿಟ್ಟು, ಜೀರಿಗೆ ಹಾಕಿ.
* ಕತ್ತರಿಸಿ ಕೊತ್ತಂಬರಿ ಸೊಪ್ಪು, ಹಸಿ ಮೆಣಸು, ಈರುಳ್ಳಿ, ರುಚಿಗೆ ತಕ್ಕ ಉಪ್ಪು ಹಾಕಿ, ಸೇರಿಸಿ ಮಿಕ್ಸ್ ಮಾಡಿ.
* ಈಗ ಪ್ಯಾನ್‌ಗೆ 2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಇಂಗು ಹಾಕಿ, ನಂತರ ಮಿಶ್ರಣ ಹಾಕಿ, ಸ್ವಲ್ಪ-ಸ್ವಲ್ಪ ನೀರು ಸೇರಿಸಿ ಮಿಕ್ಸ್ ಮಾಡಿ. ಗ್ಯಾಸ್ ಆಫ್ ಮಾಡಿ ಮಿಶ್ರಣವನ್ನು ಮೃದುವಾಗಿ ಮಿಕ್ಸ್ ಮಾಡಿ.
* ಈಗ ಎಣ್ಣೆಯನ್ನು ಕಾಯಿಸಿ.
* ಈಗ ಮಿಶ್ರಣದಿಂದ ಚಿಕ್ಕ-ಚಿಕ್ಕ ಉಂಡೆ ಮಾಡಿ, ತಟ್ಟಿ ಎಣ್ಣೆಯಲ್ಲಿ ಹಾಕಿ ಫ್ರೈ
- ನೀವು ಮದ್ದೂರು ವಡೆ ಮಾಡಿಟ್ಟು ಒಮದು ವಾರದವರೆಗೆ ಬಳಸಬಹುದು, ಸ್ನಾಕ್ಸ್‌ಗೆ ರುಚಿ ರುಚಿಯಾದ ತಿಂಡಿ ಇದಾಗಿದೆ.



Click it and Unblock the Notifications
