Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಸ್ನ್ಯಾಕ್ ಟೈಮ್ಗೆ ಹೇಳಿ ಮಾಡಿಸಿದ್ದು, ಈ ಇಡ್ಲಿ ಮಂಚೂರಿಯನ್ ರೆಸಿಪಿ
ಸಂಜೆಯ ತಂಪಾದ ವಾತಾವರಣಕ್ಕೆ ಏನಾದರೂ ಬಿಸಿಬಿಸಿ ಹಾಗೂ ಟೇಸ್ಟೀ ಖಾದ್ಯ ತಿನ್ನಲಿದ್ದರೆ ಬಹಳ ಚೆನ್ನಾಗಿತ್ತು ಎಂದು ಹೆಚ್ಚಿನವರಿಗೆ ಅನಿಸುವುದುಂಟು. ಆದರೆ, ಅದೇ ಬಜ್ಜಿ, ಬೋಂಡಾ ತಿಂದು ಬೇಜಾರಾಗಿದ್ದರೆ, ಈ ರೆಸಿಪಿ ಟ್ರೈ ಮಾಡಬಹುದು. ಗೋಬಿ ಮಂಚೂರಿಯನ್ ಇಷ್ಟ ಪಡುವವರು, ಈ ರೆಸಿಪಿಯನ್ನು ಬೇಡ ಅನ್ನಲಾರರು. ಗೋಬಿ ಸಿಗದ ವೇಳೆ, ಇದನ್ನ ಬೆಳಗ್ಗೆ ತಿಂಡಿಗೆಂದು ಮಾಡಿದ ಉಳಿದ ಇಡ್ಲಿಯಿಂದ ಬಹಳ ಸುಲಭವಾಗಿ ತಯಾರಿಸಬಹುದು. ಅದೇ ಇಡ್ಲಿ ಮಂಚೂರಿಯನ್.. ಹಾಗಾದ್ರೆ ಬನ್ನಿ ಇನ್ನೇಕೆ ತಡ, ಈ ರೆಸಿಪಿ ಮಾಡುವುದು ಹೇಗೆ ಎಂಬುದನ್ನು ನೋಡಿಕೊಂಡು ಬರೋಣ.

ಇಡ್ಲಿ ಮಂಚೂರಿಯನ್ ಮಾಡುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
Recipe By: Shreeraksha
Recipe Type: Vegetarian
Serves: 2
-
ಬೇಕಾಗುವ ಸಾಮಾಗ್ರಿಗಳು:
5 ಇಡ್ಲಿಗಳು
½ ಕಪ್ ಮೈದಾ
¼ ಕಪ್ ಕಾರ್ನ್ ಫ್ಲೋರ್
ರುಚಿಗೆ ಉಪ್ಪು
1ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
¼ ಚಮಚ ಕರಿಮೆಣಸಿನ ಹುಡಿ
1 ಟೀಸ್ಪೂನ್ ಸೋಯಾ ಸಾಸ್
ಹುರಿಯಲು ಎಣ್ಣೆ
½ ಈರುಳ್ಳಿ (ಸಣ್ಣದಾಗಿ ಕೊಚ್ಚಿದ)
1 ಇಂಚಿನ ಶುಂಠಿ (ಸಣ್ಣದಾಗಿ ಕೊಚ್ಚಿದ)
3 ಬೆಳ್ಳುಳ್ಳಿ ಲವಂಗ (ಸಣ್ಣದಾಗಿ ಕೊಚ್ಚಿದ)
½ ಕ್ಯಾಪ್ಸಿಕಂ
¼ ಕಪ್ ಟೊಮೆಟೊ ಸಾಸ್
1 ಚಮಚ ಚಿಲ್ಲಿ ಸಾಸ್ (ಐಚ್ಛಿಕ)
2 ಚಮಚ ವಿನೆಗರ್
2 ಚಮಚ ಸೋಯಾ ಸಾಸ್
ಸ್ಪ್ರಿಂಗ್ ಆನಿಯನ್
-
ತಯಾರಿಸುವ ವಿಧಾನ:
- ಮೊದಲಿಗೆ ಇಡ್ಲಿಗಳನ್ನು 4 ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
- ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕಾಶ್ಮೀರಿ ಕೆಂಪು ಮೆಣಸಿನ ಪುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ, ಒಟ್ಟಿಗೆ ಮಿಶ್ರಣ ಮಾಡಿ.
- ಈಗ ಇದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಯವಾದ ಹಿಟ್ಟನ್ನು ಮಾಡಿ. ಹಿಟ್ಟು ಬೀಳುವ ಸ್ಥಿರತೆಯನ್ನು ಹೊಂದಿರಬೇಕು.
- ಇಡ್ಲಿ ತುಂಡುಗಳನ್ನು ಹಿಟ್ಟಿನಲ್ಲಿ ಅದ್ದಿ, ಚೆನ್ನಾಗಿ ಕೋಟ್ ಮಾಡಿ ಮತ್ತು ಡೀಪ್ ಫ್ರೈ ಮಾಡಿ.
- ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ, ತೆಗೆದಿಟ್ಟುಕೊಳ್ಳಿ.
- ದೊಡ್ಡ ಕಡಾಯಿಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಸೇರಿಸಿ ಕತ್ತರಿಸಿದ ಈರುಳ್ಳಿ ಸೇರಿಸಿ. ಒಂದು ನಿಮಿಷ ಹುರಿಯಿರಿ.
- ಈಗ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ ಸೇರಿಸಿ, ಒಂದು ನಿಮಿಷ ಹುರಿಯಿರಿ, ಬೇಕಿದ್ದಲ್ಲಿ ಹಸಿರು ಮೆಣಸಿನಕಾಯಿಯನ್ನು ಸೇರಿಸಬಹುದು.
- ನಂತರ, ಕ್ಯಾಪ್ಸಿಕಂ ಹಾಕಿ ಫ್ರೈ ಮಾಡಿ, ಅದಕ್ಕೆ ಟೊಮೆಟೊ ಸಾಸ್, ಚಿಲ್ಲಿ ಸಾಸ್, ರುಚಿಗೆ ಉಪ್ಪು ಸೇರಿಸಿ.
- ತದನಂತರ, 2 ಟೀಸ್ಪೂನ್ ಸೋಯಾ ಸಾಸ್ ಮತ್ತು ವಿನೆಗರ್ ಸೇರಿಸಿ, ಚೆನ್ನಾಗಿ ಬೆರೆಸಿ, ಒಂದು ನಿಮಿಷ ಬೇಯಿಸಿ.
- ಈಗ ಹುರಿದ ಇಡ್ಲಿಗಳನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.
- ಕೊನೆಯದಾಗಿ ಸ್ವಲ್ಪ ಕತ್ತರಿಸಿದ ಸ್ಪ್ರಿಂಗ್ ಆನಿಯನ್ ಗ್ರೀನ್ಸ್ ಸೇರಿಸಿ ಮತ್ತು ಮಿಶ್ರಣ ಮಾಡಿ.
- ಈಗ ಸಂಜೆಯ ಸ್ನ್ಯಾಕ್ ಇಡ್ಲಿ ಮಂಚೂರಿಯನ್ ಸವಿಯಲು ಸಿದ್ಧ.
- People - 2
- ಕೊಬ್ಬು - 114g
- ಪ್ರೋಟೀನ್ - 10g
- ಕಾರ್ಬ್ಸ್ - 88kcl



Click it and Unblock the Notifications