Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಸದಳ ರುಚಿಯನ್ನು ನೀಡುವ ಬೇಬಿ ಕಾರ್ನ್ ಗೋಡಂಬಿ ಗ್ರೇವಿ
ಯಾವಾಗಲೂ ಒಂದೇ ಬಗೆಯ ಸ್ವಾದವನ್ನು ಸವಿಯುವುದೆಂದರೆ ಯಾವಾಗಲೂ ಅದು ಬೇಸರವೇ. ಅದಕ್ಕಿಂತ ಬೇರೆಯಾಗಿರುವ ನಿಮ್ಮ ರುಚಿಯ ಪ್ರಮಾಣವನ್ನು ದುಪ್ಪಟ್ಟಾಗಿಸುವ ವಿಶೇಷ ಖಾದ್ಯವನ್ನು ಈ ಲೇಖನದಲ್ಲಿ ನಾವು ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮ ನಾಲಿಗೆಯ ರುಚಿಯನ್ನು ತಣಿಸುವ ಈ ಬೇಬಿ ಕಾರ್ನ್ ಗೋಡಂಬಿ ಖಾದ್ಯ ಹೆಸರಿಗೆ ತಕ್ಕಂತೆ ಹಿತಮಿತವಾಗಿದೆ. ತಯಾರಿಸಲು ಅತ್ಯಂತ ಸುಲಭ ಮತ್ತು ರುಚಿಯಲ್ಲಿ ಅಸದಳ ಸ್ವಾದವನ್ನು ದುಪ್ಪಟ್ಟಾಗಿಸುವ ಈ ಖಾದ್ಯ ನಿಜಕ್ಕೂ ವಿಶೇಷವಾಗಿದೆ.
ಇಂದಿನ ಲೇಖನದಲ್ಲಿ ಅತ್ಯಂತ ಸುಲಭವಾಗಿ ತಯಾರಿಸಬಹುದಾದ ಬೇಬಿ ಕಾರ್ನ್ ಗೋಡಂಬಿ ರೆಸಿಪಿಯನ್ನು ಇಲ್ಲಿ ನೀಡುತ್ತಿದ್ದೇವೆ. ದಸರಾ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಈ ಬೇಬಿ ಕಾರ್ನ್ ಗೋಡಂಬಿ ಖಾದ್ಯ ನಿಮ್ಮಲ್ಲಿ ತಿನ್ನುವ ಉತ್ಕಟತೆಯನ್ನು ಹೆಚ್ಚಿಸುತ್ತದೆ ಮತ್ತು ಅದನ್ನು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.
ಬೆಬಿ ಕಾರ್ನ್ ಮತ್ತು ಗೋಡಂಬಿಯೊಂದಿಗೆ ಇತರ ಮಸಾಲಾ ಸಾಮಾಗ್ರಿಗಳಾದ ಪಿಸ್ತಾ ಬಾದಾಮಿ ಜೊತೆಯಾಗಿ ಕೂಡಿಕೊಂಡು ಈ ಅದ್ಭುತ ಸವಿಯನ್ನು ನಿಮ್ಮ ಬಾಯಲ್ಲಿ ಉಳಿಯುವಂತೆ ಮಾಡುತ್ತದೆ. ಚಪಾತಿ, ಪೂರಿಯೊಂದಿಗೆ ಸವಿಯಬಹುದಾದ ಈ ರುಚಿಕರ ಬೇಬಿ ಕಾರ್ನ್ ಗ್ರೇವಿ ನಿಮ್ಮಲ್ಲಿ ಸವಿಯ ಮಜವನ್ನು ಹೆಚ್ಚಿಸುವುದು ಖಂಡಿತ.

ಪ್ರಮಾಣ: 4
*ಸಿದ್ಧತಾ ಸಮಯ: 1/2 ಗಂಟೆ
*ಅಡುಗೆಗೆ ಬೇಕಾದ ಸಮಯ: 1/2 ಗಂಟೆ
ಸಾಮಾಗ್ರಿಗಳು:
*ಬೇಬಿಕಾರ್ನ್ - 10
*ಈರುಳ್ಳಿ - 2
*ಬೆಳ್ಳುಳ್ಳಿ - ಸ್ವಲ್ಪ
*ಗೋಡಂಬಿ - 8
*ಮೆಣಸಿನ ಹುಡಿ - ರುಚಿಗೆ ತಕ್ಕಷ್ಟು
*ಉಪ್ಪು - ರುಚಿಗೆ ತಕ್ಕಷ್ಟು
*ಜೀರಿಗೆ - ಸ್ವಲ್ಪ
*ಕೊತ್ತಂಬರಿ ಸೊಪ್ಪು - ಸ್ವಲ್ಪ
*ಎಣ್ಣೆ - 50 ಗ್ರಾಮ್
*ಶುಂಠಿ - 1 ತುಂಡು
*ಬಾದಾಮಿ - 10
*ಪಿಸ್ತಾ - 10
*ಧನಿಯಾ - ರುಚಿಗೆ ತಕ್ಕಷ್ಟು
*ಅರಿಶಿನ - ಚಿಟಿಕೆಯಷ್ಟು
ಮಾಡುವ ವಿಧಾನ
*ಬೇಬಿ ಕಾರ್ನ್ ಎಳೆಯದಾಗಿದ್ದು ಮೊದಲಿಗೆ ಇವುಗಳನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ.
*ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದೊಡನೆ, ಬೇಬಿ ಕಾರ್ನ್ ತುಂಡುಗಳನ್ನು ಹಾಕಿ ಕರಿಯಿರಿ. ಈ ಕರಿದ ತುಂಡುಗಳನ್ನು ಪ್ರತ್ಯೇಕವಾಗಿ ತೆಗೆದಿಡಿ.
*ಉಳಿದ ಎಣ್ಣೆಗೆ ಸಣ್ಣದಾಗಿ ಹೆಚ್ಚಿರುವ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಶುಂಠಿ ಪೇಸ್ಟ್ ಹಾಕಿ ಕೆಂಪಗೆ ಹುರಿದುಕೊಳ್ಳಿ.
*ರುಚಿಗೆ ಬೇಕಾದಷ್ಟು ಹಸಿರು ಮೆಣಸಿನ ಕಾಯಿಯನ್ನು ಉದ್ದಕೆ ಸೀಳಿ ಸೇರಿಸಿ. ಮಿಶ್ರಣವನ್ನು ಚೆನ್ನಾಗಿ ಕಲಸಿಕೊಳ್ಳಿ.
*ಈಗ ಸಮಪ್ರಮಾಣದಲ್ಲಿ ಬಾದಾಮಿ, ಪಿಸ್ತಾ, ಗೋಡಂಬಿಯನ್ನು ತೆಗೆದುಕೊಂಡು ಸ್ವಲ್ಪ ನೀರು ಹಾಕಿ ಇವುಗಳನ್ನು ನುಣ್ಣಗೆ ಪೇಸ್ಟ್‌ನಂತೆ ತಯಾರಿಸಿಕೊಳ್ಳಿ. ನಂತರ ಗ್ಯಾಸ್ ಮೇಲಿರುವ ಗ್ರೇವಿಗೆ ಈ ಪೇಸ್ಟ್ ಅನ್ನು ಸೇರಿಸಿ.
*ಅರಶಿನ, ಧನಿಯಾ ಮತ್ತು ಜೀರಿಗೆ ಪುಡಿಯನ್ನು ಹಾಕಿ ಸ್ವಲ್ಪ ನೀರನ್ನು ಸೇರಿಸಿ.
*ಇದಾದ ನಂತರ ಈಗಾಗಲೇ ಹುರಿದಿಟ್ಟಿರುವ ಬೇಬಿ ಕಾರ್ನ್ ತುಂಡುಗಳನ್ನು ಇದಕ್ಕೆ ಸೇರಿಸಿ ನಾಲ್ಕು ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
*ನೀರು ಸೇರಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣವನ್ನು ಚೆನ್ನಾಗಿ ಕುದಿಸಿ. ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಗ್ರೇವಿಗೆ ಸೇರಿಸಿಕೊಳ್ಳಿ.
ನಿಮ್ಮ ಬೇಬಿ ಕಾರ್ನ್ ಗೋಡಂಬಿ ಗ್ರೇವಿ ಕರಿ ಖಾದ್ಯ ಸವಿಯಲು ಸಿದ್ಧವಾಗಿದೆ. ಫ್ರೈಡ್ ರೈಸ್, ಚಪಾತಿ ಪೂರಿಯೊಂದಿಗೆ ಈ ಗ್ರೇವಿಯನ್ನು ನಿಮಗೆ ಸೇವಿಸಬಹುದು.



Click it and Unblock the Notifications
