Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬಿಸಿ ಅನ್ನದ ಜೊತೆಗೆ ಅದ್ಭುತ ರುಚಿಯ ಚಟ್ನಿ ಇದು..!! ನೀವೆಂದು ಮಾಡಿರೋದಿಲ್ಲ!!
ಊಟ-ತಿಂಡಿಗೆ ಒಂದು ಬಗೆಯ ಚಟ್ನಿ ಇದ್ದರೆ ಎಷ್ಟು ಚೆನ್ನಾಗಿರುತ್ತದೆ. ಹೀಗಾಗಿ ಊಟಕ್ಕೆ ಹಾಗೂ ತಿಂಡಿಗೆ ಒಂದು ಮಸಾಲೆ ಭರಿತ ಚಟ್ನಿ ಮಾಡಿ ಸವಿಯುವುದು ನೋಡುತ್ತೇವೆ. ಮಸಾಲೆ ಚಟ್ನಿ ಎಂದ ಕೂಡಲೆ ನಮಗೆ ಈರುಳ್ಳಿ, ಟೊಮೆಟೋ ಹಾಕಿ ಮಾಡುವಂತಹ ಚಟ್ನಿ ನೆನಪಾಗಬಹುದು. ಹುರಿಗಡಲೆಗೆ ಮಸಾಲೆ ಹಾಕಿ ಮಾಡುವಂತಹ ಚಟ್ನಿ ಕೂಡ ಅದ್ಭುತವಾಗಿರುತ್ತೆ.
ಆದ್ರೆ ಯಾವಾಗಲು ಒಂದೇ ರೀತಿಯ ಚಟ್ನಿ ಮಾಡಿ ಸವಿದು ನಿಮಗೂ ಬೇಸರವಾಗಿರುತ್ತೆ. ಹಾಗಾದ್ರೆ ಹೊಸದಾಗಿ ಯಾವ ಚಟ್ನಿ ಮಾಡಬಹುದು? ನಾವಿಂದು ಟೊಮೆಟೋ, ಹಸಿ ಮೆಣಸು ಬಳಸಿ ಮಾಡುವಂತಹ ವಿಶೇಷ ರುಚಿಯ ಈ ಚಟ್ನಿಯು ಊಟ ತಿಂಡಿಗೆ ಫಸ್ಟ್ ಕ್ಲಾಸ್ ರುಚಿ ನೀಡಲಿದೆ. ಹೀಗಾಗಿ ನಾವು ಇಂದು ಟೊಮೆಟೋ-ಹಸಿ ಮೆಣಸಿನ ಅದ್ಭುತ ರುಚಿಯ ಚಟ್ನಿ ಮಾಡುವುದನ್ನು ತಿಳಿದುಕೊಳ್ಳೋಣ.

ನಾವು ಟೊಮೆಟೋ-ಹಸಿ ಮೆಣಸಿನ ಕಾಯಿಯಲ್ಲಿ ಮಾಡುವಂತಹ ಚಟ್ನಿ ಮಾಡುವುದು ಹೇಗೆ ತಿಳಿದುಕೊಳ್ಳೋಣ. ಟೊಮೆಟೋ, ಹಸಿ ಮೆಣಸಿನ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳೇನು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಟೊಮೆಟೋ ಹಸಿಮೆಣಸಿನ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಟೊಮೆಟೋ
- ಹಸಿರು ಮೆಣಸಿನಕಾಯಿ
- ಹುಣಸೆಹಣ್ಣು
- ಕೊತ್ತಂಬರಿ ಸೊಪ್ಪು
- ಪುದೀನ ಎಲೆಗಳು
- ಬೆಲ್ಲ
- ಕರಿಬೇವಿನ ಎಲೆಗಳು
- ಜೀರಿಗೆ
- ಸಾಸಿವೆ
- ಉದ್ದಿನ ಬೇಳೆ
- ಕಡಲೆ ಬೇಳೆ
- ಎಣ್ಣೆ
- ಉಪ್ಪು
ಟೊಮೆಟೋ ಹಸಿಮೆಣಸಿನ ಚಟ್ನಿ ಮಾಡುವ ವಿಧಾನವೇನು?
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ದೊಡ್ಡದಾಗಿ ಹೆಚ್ಚಿರುವ ಟೊಮೆಟೋಗಳನ್ನು ಹಾಕಿ. ಸುಮಾರು 6 ಟೊಮೆಟೋ ತೆಗೆದುಕೊಳ್ಳಿ. ಸ್ವಲ್ಪ ಸಮಯ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 15 ಹಸಿ ಮೆಣಸನ್ನು ಸಿಗಿದು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಸುಟ್ಟ ಬದನೆಗಿಂತ ರುಚಿಕರ ಚಟ್ನಿ ಯಾವುದಿದೆ..! ನೀವು ಸಹ ಮಾಡಿ ನೋಡಿ..!
ನಂತರ ಇದಕ್ಕೆ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳುತ್ತಾ ಮತ್ತೆ ಫ್ರೈ ಮಾಡಿಕೊಳ್ಳಿ. ಮುಚ್ಚಳ ಮುಚ್ಚಿ 2 ನಿಮಿಷ ಬೇಯಿಸಿಕೊಳ್ಳಿ. ಟೊಮೆಟೋ ಮೆಣಸು ಚೆನ್ನಾಗಿ ಮೆದುವಾಗಿರುತ್ತದೆ. ಈ ವೇಳೆ ಇದಕ್ಕೆ ಹುಣಸೆ ಹಣ್ಣು, ಕೊತ್ತಂಬರಿ ಸೊಪ್ಪು, ಪುದಿನ ಎಲೆಗಳು ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಂಡು ಮತ್ತೆ 3 ನಿಮಿಷ ಬೇಯಿಸಿಕೊಳ್ಳಿ. ಇದು ಮೆತ್ತಗಾಗಿ ಬೆಂದಿರುತ್ತದೆ.
ಈಗ ಒಲೆ ಆಫ್ ಮಾಡಿಕೊಂಡು ಎಲ್ಲಾ ಪದಾರ್ಥ ತಣ್ಣಗಾಗಲು ಬಿಡಬೇಕು. ಇದು ತಣ್ಣಗಾದ ಬಳಿಕ ಬೇಯಿಸಿಕೊಂಡ ಈ ವಸ್ತುಗಳನ್ನು ಒಂದು ಮಿಕ್ಸಿ ಜಾರ್ಗೆ ಹಾಕಿಕೊಳ್ಳಬೇಕು. ಹಾಗೆ ಸ್ವಲ್ಪ ಬೆಳ್ಳುಳ್ಳಿ, ಒಂದೂ ಸ್ಪೂನ್ ಬೆಲ್ಲ, ಜೀರಿಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಈ ಸಮಯದಲ್ಲಿ ನೀರು ಹಾಕಿ ರುಬ್ಬಬಾರದು.
ಹಸಿ ಮೆಣಸಿನಕಾಯಿಯ ಅದ್ಭುತ ರುಚಿ ಚಟ್ನಿ: ನಾಲಿಗೆ ರುಚಿ ಹೆಚ್ಚಿಸೋದೆ ಇದು!
ಹೀಗೆ ರುಬ್ಬಿದ ಬಳಿಕ ಚಟ್ನಿಯನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಕಡಲೆ ಬೇಳೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಒಣ ಮೆಣಸು ಸಹ ಹಾಕಿಕೊಂಡು ಬಿಸಿ ಮಾಡಿಕೊಂಡು ಈ ಚಟ್ನಿಯ ಮೇಲೆ ಹಾಕಿ ಒಮ್ಮೆ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಅದ್ಭುತ ರುಚಿಯ ಚಟ್ನಿ ರೆಡಿಯಾಗುತ್ತದೆ. ಇದನ್ನು ಮನೆಯಲ್ಲಿ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಇದರ ರುಚಿಗೆ ನೀವು ಫಿದಾ ಆಗುತ್ತೀರಿ. ಅದರಲ್ಲೂ ಬಿಸಿ ಅನ್ನದ ಜೊತೆಗೆ ಈ ಚಟ್ನಿ ಇದ್ದರೆ ಅದ್ಭುತ ರುಚಿ ನೀಡಲಿದೆ.



Click it and Unblock the Notifications
