Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹಸಿ ಮೆಣಸಿನಕಾಯಿಯ ಅದ್ಭುತ ರುಚಿ ಚಟ್ನಿ: ನಾಲಿಗೆ ರುಚಿ ಹೆಚ್ಚಿಸೋದೆ ಇದು!
ನೀವು ಹೆಚ್ಚು ಖಾರ ಸವಿಯುವವರಾಗಿದ್ರೆ ಹಾಗೂ ತಿಂಡಿಗೆ ಊಟಕ್ಕೆ ಖಾರ ಚಟ್ನಿ ತಿನ್ನಲು ಇಷ್ಟಪಡುವವರಾಗಿದ್ದರೆ ಆಗಾಗ ಮೆಣಸಿನ ಚಟ್ನಿ ಮಾಡಿ ಸವಿದಿರುತ್ತೀರಿ, ಕೆಂಪು ಚಟ್ನಿ, ಹಸಿ ಮೆಣಸಿನ ಚಟ್ನಿ ಮಾಡಿ ಸವಿದಿರುತ್ತೀರಿ. ನಾಲಿಗೆಗೆ ರುಚಿ ಬಯಸುವವರು ಈ ರೀತಿ ಮೆಣಸಿನ ತೊಕ್ಕು ಅಥವಾ ಚಟ್ನಿಯನ್ನ ಹೆಚ್ಚು ಇಷ್ಟಪಡುತ್ತಾರೆ. ಕೆಲವರು ಹೆಚ್ಚು ಖಾರ ಇಷ್ಟಪಟ್ಟು ಮೆಣಸಿನ ಚಟ್ನಿ ಹಾಕಿಸಿಕೊಂಡು ಸವಿಯುತ್ತಾರೆ.
ಅದರಲ್ಲಿ ನಾವಿಂದು ಹಸಿ ಮೆಣಸಿನ ಚಟ್ನಿ ಮಾಡಿದರೆ ಯಾವೆಲ್ಲಾ ಖಾದ್ಯ ಸವಿಯಬಹುದು ಎಂಬುದನ್ನು ತಿಳಿಯೋಣ. ಮುಖ್ಯವಾಗಿ ಈ ಹಸಿ ಮೆಣಸಿನ ಚಟ್ನಿಯು ಒಂದು. ಈ ಚಟ್ನಿ ನಿಮ್ಮ ನಾಲಿಗೆಗೆ ಅತ್ಯುತ್ತಮ ರುಚಿ ನೀಡಲಿದೆ. ಬೆಳಗ್ಗೆ ಯಾವುದೇ ತಿಂಡಿ ಮಾಡಿರಲಿ ಅದಕ್ಕೆ ಈ ಹಸಿ ಮೆಣಸಿನ ಕಾಯಿ ಚಟ್ನಿ ಅದಕ್ಕೆ ಮತ್ತಷ್ಟು ರುಚಿ ನೀಡಲಿದೆ.

ಈ ಮೆಣಸಿನ ಚಟ್ನಿಯನ್ನ ಒಬ್ಬೊಬ್ಬರು ಒಂದೊಂದು ವಿಧಾನದಲ್ಲಿ ಮಾಡುತ್ತಾರೆ. ಎಲ್ಲಾ ವಿಧಾನದಲ್ಲೂ ಅದರ ರುಚಿ ಅದ್ಭುತವಾಗಿರುತ್ತೆ. ಹಾಗೆ ಬಗೆ ಬಗೆಯ ಮೆಣಸಿನ ಕಾಯಿ ಚಟ್ನಿ ನೀವು ಸಹ ಸವಿದಿರಬಹುದು. ಹೆಚ್ಚಾಗಿ ಆಂಧ್ರ ಮೀಲ್‌ನಲ್ಲಿ ಈ ರೀತಿಯ ಚಟ್ನಿಯನ್ನು ನಾವು ನೋಡಿರುತ್ತೇವೆ. ಈ ಖಾರದ ಚಟ್ನಿ ಊಟ, ತಿಂಡಿಯ ರುಚಿ ಹೆಚ್ಚಿಸುವುದರಿಂದ ಈ ಖಾದ್ಯಕ್ಕೆ ನಾವು ಫಿದಾ ಆಗುತ್ತೇವೆ. ಆದ್ರೆ ಇದನ್ನು ಮಾಡುವುದಾದರು ಹೇಗೆ?
ಈ ಮೆಣಸಿನ ಕಾಯಿ ಚಟ್ನಿಯನ್ನ ಕೆಲವರು ಮಾಡಲು ಪ್ರಯತ್ನಿಸಿ ವಿಫಲರಾಗಿರುತ್ತಾರೆ. ಅದರ ರುಚಿ ಬಾರದೆ ಅಥವಾ ಸಿಕ್ಕಾಪಟ್ಟೆ ಖಾರವಾಗಿ ರುಚಿ ಹಾಳಾಗುತ್ತವೆ ಇಲ್ಲವೆ ಹೆಚ್ಚು ಖಾರದಿಂದ ಸವಿಯಲು ಆಗದೆ ಎಸೆಯುತ್ತಾರೆ. ಆದ್ರೆ ನಾವಿಂದು ಅದ್ಭುತ ರುಚಿಯಲ್ಲಿ ಈ ಹಸಿಮೆಣಸಿನ ಕಾಯಿ ಚಟ್ನಿ ಮಾಡುವುದನ್ನು ತಿಳಿದುಕೊಳ್ಳೋಣ.
ಮಸಾಲೆ ದೋಸೆಗೆ ಹಾಕುವ ಈ ಚಟ್ನಿ ಮಾಡುವುದು ಹೇಗೆ?: 5 ನಿಮಿಷದಲ್ಲಿ ಮಾಡಬಹುದು
ಹಸಿ ಮೆಣಸಿನಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು ಯಾವುದು? ಈ ಚಟ್ನಿ ಮಾಡುವುದು ಹೇಗೆ? ಮಾಡಲು ಎಷ್ಟು ಸಮಯ ಬೇಕಾಗುತ್ತದೆ? ಯಾವೆಲ್ಲಾ ತಯಾರಿ ಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಸಿ ಮೆಣಸಿನಕಾಯಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಹಸಿರು ಮೆಣಸಿನಕಾಯಿ - 250 ಗ್ರಾಂ
- ಹುಣಸೆಹಣ್ಣು
- ಬೆಳ್ಳುಳ್ಳಿ
- ಜೀರಿಗೆ
- ಕರಿಬೇವು
- ಕೊತ್ತಂಬರಿ ಸೊಪ್ಪು - 1/4 ಕಪ್
- ಎಣ್ಣೆ
- ರುಚಿಗೆ ಉಪ್ಪು
ಹಸಿ ಮೆಣಸಿನಕಾಯಿ ಚಟ್ನಿ ಮಾಡುವುದು ಹೇಗೆ?
ಮೊದಲು ಹಸಿ ಮೆಣಸು ತೆಗೆದುಕೊಂಡು ಚೆನ್ನಾಗಿ ತೊಳೆದು ತೊಟ್ಟು ತೆಗೆದುಬಿಡಿ. ನಂತರ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ, ನಂತರ ಇಡಿ ಹಸಿ ಮೆಣಸು ತೆಗೆದುಕೊಂಡು ಈ ಬಾಣಲೆಗೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 3 ನಿಮಿಷದ ಬಳಿಕ ಇದಕ್ಕೆ ಜೀರಿಗೆ ಹಾಗೂ ಬೆಳ್ಳುಳ್ಳಿಯನ್ನು ಹಾಕಿಕೊಂಡು ಮಿಕ್ಸ ಮಾಡಿಕೊಂಡು ಫ್ರೈ ಮಾಡಿ.
ಈಗ ಕರಿಬೇವು, ಕೊತ್ತಂಬರಿ ಸೊಪ್ಪು ಸಹ ಹಾಕಿ ಮತ್ತೆ 2 ನಿಮಿಷ ಫ್ರೈ ಮಾಡಿಕೊಳ್ಳಿ. ಹಾಗೆ ಹುಣಸೆ ಹಣ್ಣನ್ನು ನೇರವಾಗಿ ಇದಕ್ಕೆ ಹಾಕಿಕೊಂಡು 1 ನಿಮಿಷ ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ನಂತರ ಇದನ್ನು ತಣ್ಣಗಾಗಲು ಬಿಡಿ. ಸಂಪೂರ್ಣ ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಉಪ್ಪು ಹಾಕಿಕೊಂಡು ರುಬ್ಬಿಕೊಳ್ಳಿ.
ರುಬ್ಬಿಕೊಳ್ಳುವಾಗ ನೀರು ಹಾಕಿಕೊಳ್ಳಬೇಡಿ. ನಿಮಗೆ ಸ್ವಲ್ಪ ಚಟ್ನಿ ಸ್ವಲ್ಪ ನೀರಾಗಿರಬೇಕು ಎಂದಾದರೆ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಮಿಕ್ಸಿಗೆ ಹಾಕಿಕೊಂಡು ರುಬ್ಬಿಕೊಳ್ಳಿ. ರುಬ್ಬಿಕೊಂಡ ಬಳಿಕ ಒಂದು ಬೌಲ್‌ಗೆ ಹಾಕಿಕೊಂಡು ಸವಿಯಲು ನೀಡಿ. ಇಷ್ಟಾದರೆ ನಿಮ್ಮ ಮುಂದೆ ಈ ಹಸಿ ಮೆಣಸಿನ ಕಾಯಿ ಚಟ್ನಿ ರೆಡಿಯಾಗಿರುತ್ತೆ. ನೀವು ಸಹ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
