Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
20 ದಿನ ಇಟ್ಟು ಸವಿಯಬಹುದು ಈ ಮೂಲಂಗಿ ಚಟ್ನಿ! ಮಾಡೋದು ಹೇಗೆ?
ಊಟ ತಿಂಡಿ ಯಾವುದಕ್ಕೆ ಆಗಿರಲಿ ಅದರ ಜೊತೆ ಯಾವುದಾದರೊಂದು ಚಟ್ನಿ ಇದ್ದರೆ ಅದರ ರುಚಿಯೇ ಬೇರೆ. ನಾವು ಈ ಮೊದಲು ಹತ್ತಾರು ರೀತಿಯ ಚಟ್ನಿ ರೆಸಿಪಿಯನ್ನು ನಿಮ್ಮ ಮುಂದಿಟ್ಟಿದ್ದೆವು. ಊಟ, ತಿಂಡಿ ಚೆನ್ನಾಗಿ ಸೇರಬೇಕು ಅಂದ್ರೆ ಚಟ್ನಿ ಇರಬೇಕು. ಎಲ್ಲಾ ಚಟ್ನಿಗಳು ರುಚಿ ಎಲ್ಲರಿಗೂ ಇಷ್ಟವಾಗುತ್ತವೆ ಅಥವಾ ರುಚಿ ನೀಡುತ್ತವೆ ಎಂದು ಹೇಳಲಾಗದು. ಕೆಲವೊಂದು ಚಟ್ನಿ ಮಾತ್ರ ಎಲ್ಲರಿಗೂ ಇಷ್ಟವಾಗುತ್ತದೆ.
ಹಾಗೆ ತರಕಾರಿಗಳಲ್ಲಿ ಮಾಡುವ ಚಟ್ಜಿ ರುಚಿಯ ಜೊತೆಗೆ ಆರೋಗ್ಯಕ್ಕೂ ಬಹಳ ಉತ್ತಮ. ಹೀಗಿರುವಾಗ ನಾವಿಂದು ಮೂಲಂಗಿ ಚಟ್ನಿ ಮಾಡುವ ಕುರಿತು ತಿಳಿದುಕೊಳ್ಳೋಣ. ಮೂಲಂಗಿ ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ತರಕಾರಿಯಾಗಿದೆ.

ಮೂಲಂಗಿಯಲ್ಲಿ ವಿಟಮಿನ್ ಸಿ ಹಾಗೂ ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿಯಾಗಿದೆ. ಇದು ಫೈಬರ್ ಹಾಗೂ ಫೋಲೇಟ್ ಸಹ ಒಳಗೊಂಡಿದೆ. ಹೀಗಾಗಿ ಇದನ್ನು ಅನಾರೋಗ್ಯ ಇದ್ದವರು ಸಹ ಸವಿಯಬಹುದು. ಮಲಬದ್ಧತೆಗೆ ಮೂಲಂಗಿ ಹೇಳಿ ಮಾಡಿಸಿದ ಮನೆ ಔಷಧ ಎನ್ನಲಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಅಂಶ ತನ್ನಲ್ಲಿಟ್ಟುಕೊಂಡಿರುವ ಈ ಮೂಲಂಗಿ ಚಟ್ನಿ ಕೂರಿತು ನಾವಿಂದು ತಿಳಿಯೋಣ.
ಹಾಗಾದ್ರೆ ರುಚಿಕರ ಮೂಲಂಗಿ ಚಟ್ನಿ ಮಾಡುವುದು ಹೇಗೆ? ಮೂಲಂಗಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು ಎಂದಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೂಲಂಗಿ ಚಟ್ನಿ ಮಾಡಲು ಬೇಕಾಗುವ ಪದಾರ್ಥಗಳು
- ಮೂಲಂಗಿ
- ಒಣ ಮೆಣಸು
- ಜೀರಿಗೆ
- ಸಾಸಿವೆ
- ಅರಶಿಣ
- ಹುಣಸೆ ಹುಳಿ
- ತೆಂಗಿನ ಕಾಯಿ
- ಕೊತ್ತಂಬರಿ ಕಾಳು
- ಇಂಗು
- ಉಪ್ಪು
- ಎಣ್ಣೆ
ಮೂಲಂಗಿ ಚಟ್ನಿ ಮಾಡುವ ವಿಧಾನ
ಒಲೆ ಮೇಲೆ ಒಂದು ಪಾತ್ರೆಯಿಟ್ಟು ಅದಕ್ಕೆ ಎಣ್ಣೆ ಹಾಕಿ. ಬಳಿಕ ಕತ್ತರಿಸಿಕೊಂಡ ಮೂಲಂಗಿಯನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಅದರ ನೀರಿನ ಅಂಶ ಹೋಗುವಂತೆ ಫ್ರೈ ಮಾಡಿಕೊಳ್ಳಿ. ಮೂಲಂಗಿ ಬಣ್ಣ ಸ್ವಲ್ಪ ಬದಲಾದಾಗ ಅದಕ್ಕೆ ಈರುಳ್ಳಿ, ಕರಬೇವು ಹಾಕಿಕೊಳ್ಳಿ.
ಬಳಿಕ ಇದಕ್ಕೆ ತೆಂಗಿನಕಾಯಿ, ಅರಶಿಣ, ಹುಣಸೆ ಹುಳಿ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಗ್ಯಾಸ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಅದನ್ನು ತೆಗೆದು ಮತ್ತೊಂದು ಪಾತ್ರೆಗೆ ಹಾಕಿಡಿ. ಇತ್ತ ಅದೇ ಪಾತ್ರೆಗೆ ಮತ್ತೆ ಸ್ವಲ್ಪ ಎಣ್ಣೆ ಹಾಕಿ.
ನಿಮಿಷದಲ್ಲಿ ಮಾಡಿ ಅವಲಕ್ಕಿ ಮಸಾಲ ಇಡ್ಲಿ..! ತಿಂದರೆ ಫಿದಾ ಆಗ್ತಿರಾ.!
ಈ ಎಣ್ಣೆಗೆ ಜೀರಿಗೆ, ಕೊತ್ತಂಬರಿ ಕಾಳು, ಒಣ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಇದನ್ನು ತೆಗೆದು ಒಂದು ಮಿಕ್ಸಿ ಜಾರ್ಗೆ ಹಾಕಿ ಅದಕ್ಕೆ ಉಪ್ಪು ಹಾಕಿಕೊಂಡು ಪುಡಿ ಮಾಡಿಕೊಳ್ಳಿ. ತರಿ ತರಿಯಾಗಿ ಪುಡಿಯಾದ ಬಳಿಕ ಅದೇ ಜಾರ್ಗೆ ಮೊದಲು ಮಾಡಿಟ್ಟ ಮೂಲಂಗಿ ಹಾಕಿ ರುಬ್ಬಿಕೊಳ್ಳಿ. ತರಿ ತರಿಯಾಗಿ ರುಬ್ಬಿಕೊಳ್ಳಿ.
ಈಗ ಮತ್ತೆ ಪಾತ್ರೆಗೆ ಎಣ್ಣೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಅದಕ್ಕೆ ಜೀರಿಗೆ, ಸಾಸಿವೆ, ಕರಿಬೇವು, ಒಣ ಮೆಣಸು, ಇಂಗು ಹಾಕಿ ಒಗ್ಗರಣೆ ಮಾಡಿ. ಈ ಒಗ್ಗರಣೆಯನ್ನ ಚಟ್ನಿಗೆ ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಮೂಲಂಗಿ ಚಟ್ನಿ ರೆಡಿಯಾಗಿರುತ್ತೆ. ಇದನ್ನು ಫ್ರಿಡ್ಜ್ನಲ್ಲಿಟ್ಟರೆ 20 ದಿನ ಇಟ್ಟು ಸವಿಯಬಹುದು.
ಸಿಂಪಲ್ ರೆಸಿಪಿ ಸಖತ್ ರುಚಿಯ ಹೀರೆಕಾಯಿ ಚಟ್ನಿ..!
ಈ ಚಟ್ನಿಯನ್ನು ಊಟ, ತಿಂಡಿಗೆ ಬಳಸಿದರೆ ರುಚಿ ಅದ್ಭುತ, ನೀವು ಯಾವ ತಿಂಡಿಗೆ ಬೇಕಾದ್ರು ಈ ಚಟ್ನಿ ಬಳಸಬಹುದು. ಇನ್ನು ಮೂಲಂಗಿ ಆರೋಗ್ಯಕ್ಕೆ ಉತ್ತಮ ಆಗಿರೋದ್ರಿಂದ ಎಲ್ಲಾ ವರ್ಗದ ಮಂದಿ ಸವಿಯಬಹುದು. ಮಲಬದ್ಧತೆ, ವಾಯು, ಗ್ಯಾಸ್ಟ್ರಿಕ್ನಂತಹ ಸಮಸ್ಯೆ ಇದ್ದವರು ಸಹ ಈ ಮೂಲಂಗಿ ಸವಿಯಬಹುದು.



Click it and Unblock the Notifications
