Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಸಿಂಪಲ್ ರೆಸಿಪಿ ಸಖತ್ ರುಚಿಯ ಹೀರೆಕಾಯಿ ಚಟ್ನಿ..!
ಊಟ ತಿಂಡಿ ಯಾವುದಕ್ಕೆ ಆಗಿರಲಿ ಅದರ ಜೊತೆ ಯಾವುದಾದರೊಂದು ಚಟ್ನಿ ಇದ್ದರೆ ಅದರ ರುಚಿಯೇ ಬೇರೆ. ಊಟ, ತಿಂಡಿ ಚೆನ್ನಾಗಿ ಸೇರಬೇಕು ಅಂದ್ರೆ ಚಟ್ನಿ ಇರಬೇಕು. ಎಲ್ಲಾ ಚಟ್ನಿಗಳು ರುಚಿ ಎಲ್ಲರಿಗೂ ಇಷ್ಟವಾಗುತ್ತವೆ ಅಥವಾ ರುಚಿ ನೀಡುತ್ತವೆ ಎಂದು ಹೇಳಲಾಗದು. ಕೆಲವೊಂದು ಚಟ್ನಿ ಮಾತ್ರ ಎಲ್ಲರಿಗೂ ಇಷ್ಟವಾಗುತ್ತದೆ.
ಹೀಗಾಗಿ ನಾವಿಂದು ಹೀರೇಕಾಯಿ ಚಟ್ನಿ ಮಾಡುವ ಕುರಿತು ಹೇಳಲಿದ್ದವೆ. ಈ ಹೀರೆಕಾಯಿ ಆರೋಗ್ಯದ ದೃಷ್ಟಿಯಿಂದ ತುಂಬಾನೆ ಒಳ್ಳೆಯ ತರಕಾರಿಯಾಗಿದೆ. ನಿಮಗೆ ಕಣ್ಣಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ನಿಮ್ಮ ಆಹಾರದಲ್ಲಿ ಹೀರೆಕಾಯಿಯನ್ನು ತಪ್ಪದೇ ಸೇವಿಸಿದರೆ ಅದು ದೂರಾಗಲಿದೆ ಎಂದು ಹೇಳಲಾಗಿದೆ. ಹೀರೆಕಾಯಿಯಲ್ಲಿ ವಿಟಮಿನ್ ಎ ಪೂರಕ ಅಂಶಗಳಿದ್ದ ಕೂಡಿದ್ದು ಹೀಗಾಗಿ ಆರೋಗ್ಯಕ್ಕೆ ಇದು ಬಹಳ ಉತ್ತಮ.

ಇತ್ತ ಹೀರೆಕಾಯಿ ಚಟ್ನಿ ಸಿಕ್ಕಾಪಟ್ಟೆ ರುಚಿ ನೀಡುವ ಕಾರಣ ಎಲ್ಲರಿಗೂ ಇಷ್ಟವಾಗುತ್ತೆ. ಒಮ್ಮೆ ತಿಂದವರು ಮತ್ತೆ ಹೀರೆಕಾಯಿ ನೋಡಿದರೆ ಅದರ ಚಟ್ನಿ ನೆನಪಿಸುತ್ತಾರೆ. ಹಾಗಾದ್ರೆ ಈ ಹೀರೆಕಾಯಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹೀರೆಕಾಯಿ ಚಟ್ನಿ ಮಾಡುವುದು ಹೇಗೆ?
- ಹೀರೆಕಾಯಿ
- ಈರುಳ್ಳಿ
- ಹಸಿ ಮೆಣಸು
- ಶೇಂಗಾ ಬೀಜ (2 ಸ್ಪೂನ್ ಅಷ್ಟು ಹುರಿದುಕೊಳ್ಳಿ)
- ಅರಶಿಣ
- ಹುಣಸೆ ಹುಳಿ
- ಉಪ್ಪು
- ಎಣ್ಣೆ
- ಕೊತ್ತಂಬರಿ
- ಕರಿಬೇವು
- ಜೀರಿಗೆ
ಹೀರೆಕಾಯಿ ಚಟ್ನಿ ಮಾಡುವುದು ಹೇಗೆ
ಮೊದಲು ಹೀರೆಕಾಯಿ ತೆಗೆದುಕೊಂಡು ಅದರ ಸಿಪ್ಪೆ ತೆಗೆದುಕೊಳ್ಳಬೇಕು. ಹೀರೆಕಾಯಿಯ ಮೇಲ್ಮೇಲಿನ ಸಿಪ್ಪೆಯನ್ನು ಸಣ್ಣದಾಗಿ ತೆಗೆದುಕೊಳ್ಳಿ. ಹೀರೆಕಾಯಿ ಗೆರೆಗಳು ಹೋಗುವಷ್ಟು ಸಿಪ್ಪೆ ತೆಗೆಯಿರಿ. ಬಳಿಕ ಹೀರೆಕಾಯಿಯನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
ಇದಾದ ಬಳಿಕ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಹೆಚ್ಚಿಕೊಂಡಿರುವ ಹೀರೆಕಾಯಿಯನ್ನು ಹಾಕಿ ಕೊಂಡು ಫ್ರೈ ಮಾಡಬೇಕು. ಸುಮಾರು 3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಹಸಿಮೆಣಸು ಹಾಕಿಕೊಳ್ಳಿ. 3 ನಿಮಿಷ ಬಿಟ್ಟಿ ಅದಕ್ಕೆ ಈರುಳ್ಳಿ ಹಾಕಿ ಫ್ರೈ ಮಾಡಿ.
2 ನಿಮಿಷ ಫ್ರೈ ಮಾಡಿದ ಬಳಿಕ ಅದಕ್ಕೆ ಬೆಳ್ಳುಳ್ಳಿ. ಕರಿಬೇವು, ಜೀರಿಗೆ, ಅರಶಿಣ, ಹುಣಸೆ ಹುಳಿ ಹಾಕಿ ಫ್ರೈ ಮಾಡಿ. ಒಟ್ಟು 5 ನಿಮಿಷ ಫ್ರೈ ಆದರೆ ಸಾಕು. ಎಲ್ಲಾ ಫ್ರೈ ಆದ ಬಳಿಕ ಅದಕ್ಕೆ ಕೊತ್ತಂಬರಿ ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಬಳಿಕ ಇದನ್ನು ತಣ್ಣಗಾಗಲು ಬಿಡಿ.
ಇದು ತಣ್ಣಗಾದ ಬಳಿಕ ಅದನ್ನೆಲ್ಲಾ ತೆಗೆದುಕೊಂಡು ಅದನ್ನು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ. ಈ ವೇಳೆ ಮೊದಲೆ ಹುರಿದುಕೊಂಡಿರುವ ಶೇಂಗಾ ಬೀಜ ಹಾಗೂ ಉಪ್ಪು ಹಾಕಿಕೊಂಡು ನೀರು ಹಾಕಿಕೊಳ್ಳದೆ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಳ್ಳುವ ಬದಲು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಇಷ್ಟಾದರೆ ನಿಮ್ಮ ಮುಂದೆ ಹೀರೆಕಾಯಿ ಚಟ್ನಿ ರೆಡಿಯಾಗಿರುತ್ತದೆ.
ಇದು ಅನ್ನ, ಚಪಾತಿ, ಇಡ್ಲಿ, ದೋಸೆಗೆ ಸಿಕ್ಕಾಪಟ್ಟೆ ರುಚಿ ನೀಡಲಿದೆ. ಜೊತೆಗೆ ಇದಕ್ಕೆ ನೀರು ಹಾಕದೆ ಮಾಡುವುದರಿಂದ ಹಲವು ದಿನಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು ಸವಿಯಬಹುದು. ಜೊತೆಗೆ ಹೀರೆಕಾಯಿ ಕಫ ಮತ್ತು ಪಿತ್ತವನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಹೀರೆಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಉದರಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.



Click it and Unblock the Notifications
