Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ದೇಹಕ್ಕೆ ತಂಪು ನಾಲಿಗೆ ರುಚಿ ಹೆಚ್ಚಿಸುವ ಬಸಳೆ ಸಾಂಬಾರ್: ಸಖತ್ ಟೇಸ್ಟ್, ಸುಲಭದ ರೆಸಿಪಿ
ಊಟದೊಂದಿಗೆ ರುಚಿಕರ ಸಾಂಬಾರ್ ಎಲ್ಲರಿಗೂ ಬೇಕಾಗಿರುವ ಖಾದ್ಯ. ಅದ್ರಲ್ಲೂ ಸೊಪ್ಪು ತರಕಾರಿಗಳಿಂದ ಮಾಡಲಾದ ಸಾಂಬಾರ್ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ಅದ್ರಲ್ಲೂ ಬಸಲೆ ಅಥವಾ ಬಸಳೆ ಸೊಪ್ಪು ತರಕಾರಿಯ ಸಾಂಬಾರ್ ಬಹಳ ರುಚಿಕರವಾಗಿರುತ್ತೆ. ಆದ್ರಲ್ಲು ಆರೋಗ್ಯದ ದೃಷ್ಟಿಯಿಂದ ಹಾಗೆ ಬೇಸಿಗೆಯಲ್ಲಿ ನಿಮ್ಮ ದೇಹ ತಂಪಾಗಿಸುವಂತಹ ಬಸಲೆ ಸಾಂಬಾರ್ ಮಾಡಿದ್ರೆ ಊಟದ ರುಚಿ ದುಪ್ಪಟ್ಟಾಗುತ್ತೆ.
ಬಸಳೆಯಲ್ಲಿನ ತಂಪಾದ ಅಂಶ ನಿಮ್ಮ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡಲಿದೆ. ಹಾಗೆ ದೇಹಕ್ಕೆ ತಂಪು ತರಲಿದೆ. ಊಟದೊಂದಿಗೆ ಸೇರಿದಂತೆ ಯಾವುದೇ ಖಾದ್ಯದೊಂದಿಗೆ ಈ ಸಾಂಬಾರ್ ಸವಿಯಬಹುದು. ಹಾಗೆ ನಿಮ್ಮ ದೇಹ ಉಷ್ಣತೆ ಹೆಚ್ಚಾಗಿದ್ದರೆ ಈ ಸಮಯದಲ್ಲಿ ನಿಮ್ಮ ದೇಹಕ್ಕೆ ಬಹಳ ಉತ್ತಮ ಆಗಿರಲಿದೆ.

ಹಾಗೆ ಈ ಬಸಳೆ ಸೊಪ್ಪಿನ ಚಟ್ನಿ, ಪಲ್ಯ ಸಹ ಮಾಡುತ್ತಾರೆ. ತಿಂಡಿಯನ್ನು ಕೂಡ ಮಾಡುವುದು ನೋಡಬಹುದು. ಈ ಹಸಿರು ತರಕಾರಿಯಲ್ಲಿ ವಿಟಮಿನ್‌ಗಳು ತುಂಬಿವೆ. ವಿಟಮಿನ್ ಎ, ಸಿ, ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಪೊಟ್ಯಾಸಿಯಂ ಸಹ ಇದೆ. ರಕ್ತದೊತ್ತಡದಿಂದ ಹಿಡಿದು ಕಣ್ಣಿನ ಆರೋಗ್ಯಕ್ಕೂ ಕೂಡ ಈ ಬಸಳೆ ಸೊಪ್ಪು ಬಹಳ ಉಪಯೋಗಕಾರಿ.
ಸದ್ಯ ಈ ಬಿಸಿಲಿನ ಸಮಯದಲ್ಲಿ ನಾವಿಂದು ಮನೆಯಲ್ಲೇ ರುಚಿ ರುಚಿಯಾದ ಈ ಬಸಳೆ ಸೊಪ್ಪು ಮಾಡುವ ಕುರಿತು ತಿಳಿದುಕೊಳ್ಳೋಣ. ಬಸಳೆ ಸೊಪ್ಪು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಬಸಳೆ ಸೊಪ್ಪಿನ ಸಾಂಬಾರ್ ಮಾಡಲು ಯಾವೆಲ್ಲಾ ವಸ್ತುಗಳು
ಬೇಕು?
- ಬಸಳೆ ಸೊಪ್ಪು
- ಜೀರಿಗೆ
- ಟೊಮೆಟೋ
- ಅರಶಿಣ ಪುಡಿ
- ಎಣ್ಣೆ
- ಹೆಸರು ಬೇಳೆ
- ಇಂಗು
- ತೆಂಗಿನಕಾಯಿ
- ಉಪ್ಪು
- ಬೆಲ್ಲ
ಬಸಳೆ ಸೊಪ್ಪಿನ ಸಾಂಬಾರ್ ಮಾಡುವ ವಿಧಾನವೇನು?
- ಮೊದಲು ಈ ಬಸಳೆ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಹೆಚ್ಚಿಟ್ಟುಕೊಳ್ಳಿ. ದಂಟುಗಳನ್ನು ದೊಡ್ಡದಾಗಿ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಮೊದಲು ಕುಕ್ಕರ್‌ನಲ್ಲಿ ಅರ್ಧ ಕಪ್ ಹೆಸರು ಬೇಳೆಯನ್ನು ಹಾಕಿ ತೊಳೆದುಕೊಳ್ಳಿ. ನಂತರ ನೀರು ಹಾಕಿ ಹೆಚ್ಚಿಕೊಂಡಿರುವ ಟೊಮೆಟೋ, ಅರಶಿಣ ಪುಡಿ, ಎಣ್ಣೆ ಹಾಕಿಕೊಂಡು 2 ಸೀಟಿ ಹೊಡೆಯಲು ಬಿಡಿ.
- ನಂತರ ಕುಕ್ಕರ್ ಮುಚ್ಚಳ ತೆಗೆದು ತೊಳೆದುಕೊಂಡಿರು ಬಸಳೆ ಸೊಪ್ಪನ್ನು ಹಾಕಿಕೊಂಡು ನೀರು ಹಾಕಿ, ಹಾಗೆ ಉಪ್ಪು, ಬೆಲ್ಲ, ಸ್ವಲ್ಪ ನೀರು ಸಹ ಹಾಕಿಕೊಂಡು ಕುದಿಬರಲು ಬಿಡಿ.
- ಇನ್ನೊಂದು ಕಡೆ ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಧನಿಯಾ ಕಾಳು, ಜೀರಿಗೆ, ಅರ್ಧ ಚಮಚ ಇಂಗು, ಬ್ಯಾಡಗಿ ಮೆಣಸು, ಕರಿಬೇವು, ಸಹ ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಹಾಗೆ 2 ನಿಮಿಷ ಬಿಟ್ಟು ಇದಕ್ಕೆ ತೆಂಗಿನಕಾಯಿ ತುರಿ ಅರ್ಧ ಕಪ್ ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿ.
- ಈಗ ಮಿಕ್ಸರ್ ಜಾರ್ ತೆಗೆದುಕೊಂಡು ಹುರಿದ ಎಲ್ಲಾ ಪದಾರ್ಥ ಹಾಕಿ, ನೆನೆಸಿಟ್ಟ ಹುಣಸೆ ಹುಳಿ, ನೀರು ಹಾಕಿಕೊಂಡು ನುಣ್ಣಗೆ ಖಾರ ಮಾಡಿಕೊಳ್ಳಿ. ಈಗ ಕುಕ್ಕರ್‌ನಲ್ಲಿ ಕುದಿಯುತ್ತಿರುವ ಬಸಳೆ ಬೆಂದಿದೆ ಎಂದಾದರೆ ಅದಕ್ಕೆ ಈ ಖಾರ ಹಾಕಿಕೊಂಡು ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ.
- ಹೀಗೆ ಚೆನ್ನಾಗಿ ಕುದಿಬರಲು ಬಿಡಿ. ಅನಂತರ ಉಪ್ಪು, ಹುಳಿಯ ರುಚಿ ನೋಡಿಕೊಳ್ಳಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಇಳಿಸಿಕೊಳ್ಳಿ. ಬೇಕಿದ್ದರೆ ಇದಕ್ಕೆ ಒಗ್ಗರಣೆ ಹಾಕಿಕೊಳ್ಳಿ. ಬೇಡವೆಂದರೂ ನಡೆಯುತ್ತದೆ.



Click it and Unblock the Notifications