Just In
Don't Miss
- Movies
ಬಿಗ್ಬಾಸ್: ಕಿಚ್ಚನ ಮೆಚ್ಚಿನ ಸೀಸನ್ ಯಾವುದು? ಮೆಚ್ಚಿನ ಸ್ಪರ್ಧಿ ಯಾರು?
- News
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ,6 ಮಂದಿ ದುರ್ಮರಣ
- Sports
ಭಾರತ vs ಇಂಗ್ಲೆಂಡ್: 4 ಬೃಹತ್ ದಾಖಲೆ ಬರೆದ ಅಕ್ಷರ್ ಪಟೇಲ್
- Automobiles
ಹೀರೋ ಎಕ್ಸ್ಪಲ್ಸ್ 200 ಬೈಕಿನ ಮೇಲೆ ಭರ್ಜರಿ ಆಫರ್
- Education
CSIR UGC NET June 2020 Results: ಅಭ್ಯರ್ಥಿಗಳು ಫಲಿತಾಂಶ ವೀಕ್ಷಿಸುವುದು ಹೇಗೆ?
- Finance
ನೀರವ್ ಮೋದಿಯನ್ನು ಹಸ್ತಾಂತರಿಸಲು ಬ್ರಿಟನ್ ನ್ಯಾಯಾಲಯ ಅನುಮೋದನೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಯಿ ಚಪ್ಪರಿಸೋ ರುಚಿ ಈ ಗೊಜ್ಜವಲಕ್ಕಿಯಲ್ಲಿದೆ
ಕರ್ನಾಟಕದ ಜನಪ್ರಿಯ ರೆಸಿಪಿಗಳಲ್ಲಿ ಗೊಜ್ಜು ಅವಲಕ್ಕಿ ಕೂಡ ಒಂದು. ಪುಡಿ ಅವಲಕ್ಕಿಯನ್ನು ಅಥವಾ ದಪ್ಪ ಅವಲಕ್ಕಿಯನ್ನು ಬಳಸಿ ತಯಾರಿಸುವ ಗೊಜ್ಜವಲಕ್ಕಿಯು ಉಪವಾಸದ ಸಂದರ್ಭ ಅದ್ಭುತವಾದ ಆಯ್ಕೆಯಾಗಿದೆ. ಇದು ದೇಹಕ್ಕೆ ಶಕ್ತಿ ನೀಡುವುದಲ್ಲದೇ, ಆರೋಗ್ಯಕ್ಕೂ ಒಳ್ಳೆಯದು. ವಿಭಿನ್ನ ರುಚಿಯೊಂದಿಗೆ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುವ ಪಾಕವಿಧಾನ ಗೊಜ್ಜವಲಕ್ಕಿ. ವಿಶೇಷ ಮಸಾಲ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಈ ಪಾಕವಿಧಾನದಲ್ಲಿ ಹುಳಿ ಮತ್ತು ಖಾರವು ಇದ್ದು, ನಾಲಿಗೆ ಮತ್ತೆ ಮತ್ತೆ ಚಪ್ಪರಿಸಲು ಬಯಸುವಂತೆ ಮಾಡುತ್ತದೆ. ಅವಲಕ್ಕಿಯಿಂದ ತಯಾರಿಸಲಾಗುವ ಈ ಖಾದ್ಯವನ್ನು ಮುಂಜಾನೆಯ ಉಪಹಾರಕ್ಕೆ, ಮಧ್ಯಾಹ್ನದ ಊಟಕ್ಕೆ ಅಥವಾ ಸಾಯಂಕಾಲದ ಲಘು ತಿಂಡಿಯನ್ನಾಗಿ ಸೇವಿಸಬಹುದು. ರುಚಿಕರವಾದ ಈ ತಿಂಡಿಯನ್ನು ನೀವು ಮನೆಯಲ್ಲಿ ಸರಳ ಹಾಗೂ ಸುಲಭವಾಗಿ ತಯಾರಿಸಿ, ನಿಮ್ಮವರಿಗೂ ನೀಡಿ.
Recipe By: Shreeraksha
Recipe Type: Vegetarian
Serves: 2
-
ಪ್ರಮುಖ ಸಾಮಗ್ರಿಗಳು:
1 ಕಪ್ ಪುಡಿ ಅವಲಕ್ಕಿ
1 ಮುಷ್ಟಿಯಷ್ಟು ತೆಂಗಿನಕಾಯಿ
1/4 ಕಪ್ ಬೆಲ್ಲ
4 ಚಮಚ ಹುಣಸೆಹಣ್ಣಿನ ರಸ
1 ಚಮಚ ನೀರು
3 ಚಮಚ ಸಂಸ್ಕರಿಸಿದ ಎಣ್ಣೆ
1 ಚಮಚ ಹುರಿದ ಎಳ್ಳು
2 1/2 ಚಮಚ ರಸಂ ಪುಡಿ
ಅಗತ್ಯಕ್ಕೆ ತಕ್ಕಷ್ಟು ಉಪ್ಪು
1 ಚಿಟಿಕೆಯಷ್ಟು ಅರಿಶಿಣ
1 ಚಮಚ ಸಾಸಿವೆ
1 ಚಮಚ ಹಸಿ ನೆಲಗಡಲೆ
1 ಚಮಚ ಹುರಿದ ಜೀರಿಗೆ
ಅಗತ್ಯಕ್ಕೆ ತಕ್ಕಷ್ಟು ಮೆಂತ್ಯೆ ಬೀಜ
ಅಗತ್ಯಕ್ಕೆ ತಕ್ಕಷ್ಟು ಕರಿಬೇವು
ಅಗತ್ಯಕ್ಕೆ ತಕ್ಕಷ್ಟು ಇಂಗು
4 - ಕೆಂಪು ಮೆಣಸು
1 ಚಮಚ ಉದ್ದಿನ ಬೇಳೆ
1 ಚಮಚ ಕಡಲೆ ಬೇಳೆ
-
ತಯಾರಿಸುವ ವಿಧಾನ:
- ಒಂದು ಪಾತ್ರೆಯಲ್ಲಿ ಪುಡಿ ಅವಲಕ್ಕಿ, ಹುಣಸೆ ರಸ, ಉಪ್ಪು ಮತ್ತು ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಮಿಶ್ರಗೊಳಿಸಿ. ಮಿಶ್ರಣದ ಸ್ಥಿರತೆ ದಪ್ಪವಾಗಿದ್ದರೆ ಸ್ವಲ್ಪ ನೀರನ್ನು ಸೇರಿಸಿ, ಪುನಃ ಮಿಶ್ರಗೊಳಿಸಿ.
- ಪ್ರತ್ಯೇಕ ಬಾಣಲೆಯಲ್ಲಿ ಎಣ್ಣೆಯನ್ನು ಸೇರಿಸಿ, ಬಿಸಿ ಮಾಡಿ. ಎಣ್ಣೆ ಬಿಸಿಯಾದ ಬಳಿಕ ಸಾಸಿವೆ, ಕಡ್ಲೇ ಬೇಳೆ, ಉದ್ದಿನ ಬೇಳೆ ಮತ್ತು ನೆಲಗಡಲೆ/ ಶೇಂಗಾ ಸೇರಿಸಿ, 2-3 ನಿಮಿಷಗಳ ಕಾಲ ಹುರಿಯಿರಿ.
- ಇದಕ್ಕೆ ಕೆಂಪು ಮೆಣಸಿನಕಾಯನ್ನು ಸೇರಿಸಿ ಅದನ್ನು 2 ನಿಮಿಷಗಳ ಕಾಲ ಬೇಯಿಸಿ.- ಬಳಿಕ ತೆಂಗಿನ ತುರಿ, ಅರಿಶಿನ ಮತ್ತು ಉಪ್ಪನ್ನು ಸೇರಿಸಿ. ರಸಂ ಪುಡಿ ಮತ್ತು ಬೆಲ್ಲದ ಪುಡಿಯನ್ನು ಸೇರಿಸಿ 3-4 ನಿಮಿಷಗಳ ಕಾಲ ಬೇಯಿಸಿ.
- ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆಯನ್ನು ಸೇರಿಸಿ ಬಿಸಿ ಮಾಡಿ. ಬಿಸಿಯಾದ ಎಣ್ಣೆಗೆ ಪುಡಿಯಾದ ಅವಲಕ್ಕಿಯ ಮಿಶ್ರಣವನ್ನು ಸೇರಿಸಿ, 2 ನಿಮಿಷಗಳ ಕಾಲ ಬೇಯಿಸಿ. ಸಿದ್ಧವಾದ ಗೊಜ್ಜವಲಕ್ಕಿಯನ್ನು ನಿಮ್ಮ ಆಯ್ಕೆಗೆ ಅನುಗುಣವಾಗಿ ಬಿಸಿ ಇರುವಾಗ ಅಥವಾ ತಣ್ಣಗಾದ ಬಳಿಕ ಸವಿಯಬಹುದು.
- ಕರ್ನಾಟಕದ ಜನಪ್ರಿಯ ರೆಸಿಪಿಗಳಲ್ಲಿ ಗೊಜ್ಜು ಅವಲಕ್ಕಿ ಕೂಡ ಒಂದು. ಪುಡಿ ಅವಲಕ್ಕಿಯನ್ನು ಅಥವಾ ದಪ್ಪ ಅವಲಕ್ಕಿಯನ್ನು ಬಳಸಿ ತಯಾರಿಸುವ ಗೊಜ್ಜವಲಕ್ಕಿಯು ಉಪವಾಸದ ಸಂದರ್ಭ ಅದ್ಭುತವಾದ ಆಯ್ಕೆಯಾಗಿದೆ.
- People - 2
- ಕೊಬ್ಬು - ೫ಗ್ರಾ
- ಪ್ರೋಟೀನ್ - ೩ಗ್ರಾ
- ಕಾರ್ಬ್ಸ್ - ೨೭ಗ್ರಾ
- ಫೈಬರ್ - ೧ಗ್ರಾ