Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರೆಸಿಪಿ: ಎಗ್ ದಿಲ್ರುಬಾ ಟ್ರೈ ಮಾಡಿದ್ದೀರಾ? ಮಾಡುವುದು ಸುಲಭ, ಟೇಸ್ಟ್ ಸೂಪರ್
ಎಗ್ ದಿಲ್ರುಬಾ ಟ್ರೈ ಮಾಡಿದ್ದೀರಾ? ಇದು ಮೊಟ್ಟೆಯ ಸ್ನ್ಯಾಕ್ಸ್ ಆಗಿದ್ದು ತಿನ್ನಲು ತುಂಬಾನೇ ರುಚಿಯಾಗಿರುತ್ತದೆ, ಎಗ್ಬೋಂಡಾಗಿಂತಲೂ ಇದು ತುಂಬಾ ರುಚಿಯಾಗಿರುತ್ತದೆ, ಖಾರವಾಗಿರುವ ಈ ದಿಲ್ರುಬಾ ಸಂಜೆ ಸ್ನ್ಯಾಕ್ಸ್ ಆಗಿ ಸವಿಯಬಹುದು.
ಮನೆಗೆ ಯಾರಾದರೂ ಗೆಸ್ಟ್ ಬಂದಾಗ ಸ್ಪೆಷಲ್ ಸ್ನ್ಯಾಕ್ಸ್ ಆಗಿ ನೀವು ಇದನ್ನು ತಯಾರಿಸಬಹುದು, ಇದನ್ನು ಮಾಡುವುದು ತುಂಬಾ ಸುಲಭ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಅರ್ಧ ಕಪ್ ಚಿಕನ್ ಕೈಮಾ( ಬೋನ್ಲೆಸ್ ಚಿಕನ್ ಬೇಯಿಸಿ ಸ್ಮ್ಯಾಶ್ ಮಾಡಿ)
ಬೇಯಿಸಿದ ಆಲೂಗಟ್ಟೆ 1
ಬೇಯಿಸಿದ ಮೊಟ್ಟೆ 4
ಬೆಳ್ಳುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು 1 ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಹಸಿ ಮೆಣಸು 1 ಚಮಚ
1 ಚಮಚ ಕೊತ್ತಂಬರಿ ಪುಡಿ
1 ಚಮಚ ಅರಿಶಿಣ ಪುಡಿ
ಅರ್ಧ ಕಪ್ ಬ್ರೆಡ್ ಚೂರುಗಳು
ಕಾರ್ನ್ಫ್ಲೋರ್ 1 ಚಮಚ
ರುಚಿಗೆ ತಕ್ಕ ಉಪ್ಪು
4 ಚಮಚ ಎಣ್ಣೆ
ಮಾಡುವ ವಿಧಾನ'
* ಬೋನ್ಲೆಸ್ ಚಿಕನ್ ಅನ್ನು ಚಿಟಿಕೆಯಷ್ಟು ಉಪ್ಪು ಸೇರಿಸಿ ಬೇಯಿಸಿ.
* ನಂತರ ಪ್ಯಾನ್ಗೆ ಎಣ್ಣೆ ಹಾಕಿ ಬಿಸಿ ಮಾಡಿ ಕೈಮಾ ಹಾಕಿ ಫ್ರೈ ಮಾಡಿ. ನಂತರ
ಎಲ್ಲಾ ಮಸಾಲೆ ಹಾಕಿ ಫ್ರೈ ಮಾಡಿ, ನಂತರ ಬೇಯಿಸಿದ ಆಲೂಗಡ್ಡೆ ಹಾಕಿ ಮಿಕ್ಸ್
ಮಾಡಿ.
* ಈಗ ಬೇಯಿಸಿದ ಮೊಟ್ಟೆಗೆ ಈ ಚಿಕನ್ ಮಸಾಲೆಯನ್ನು ಅದರ ಮೇಲ್ಭಾಗದಲ್ಲಿ ಹಾಕಿ , ಮೆಲ್ಲನೆ ತಟ್ಟಿ, ನಂತರ ಕಾರ್ನ್ಫ್ಲೋರ್ ಹಿಟ್ಟಿನಲ್ಲಿ ಮೆಲ್ಲನೆ ಅದ್ದಿ ನಂತರ ಬ್ರೆಡ್ ಚೂರುಗಳಲ್ಲಿ ಹೊರಳಾಡಿಸಿ ನಂತರ ಎಣ್ಣೆಯಲ್ಲಿ ಫ್ರೈ ಮಾಡಿದರೆ ಎಗ್ ದಿಲ್ರುಬಾ ರೆಡಿ. ಇದನ್ನು ಸೌತೆ ಕತ್ತರಿಸಿ, ಲೆಟ್ಯೂಸೆ ಎಲೆಯಿದ್ದರೆ ಅದನ್ನು ಇಟ್ಟು ಸರ್ವ್ ಮಾಡಿ.
ರೆಸಿಪಿ: ಆಹಾ! ಯಾರಿಗೆ ತಾನೆ ಇಷ್ಟವಾಗಲ್ಲ ಸುಟ್ಟ ಬದನೆಕಾಯಿ ಗೊಜ್ಜು
ಚಿಕನ್ ಕೈಮಾ ಮಿಶ್ರಣ ನೀರು ನೀರಾಗಿ ಇರಬಾರದು ಮೊಟ್ಟೆ ಮೇಲೆ ಹಾಕಿ ಮೆಲ್ಲನೆ
ಅಂಟಿಕೊಳ್ಳಬೇಕು, ಇಲ್ಲದಿದ್ದರೆ ಈ ಮಸಾಲೆ ತೆಗೆದು ಅದರೊಳಗೆ ಮೊಟ್ಟೆ ಹಾಕಿ
ಮೆಲ್ಲನೆ ಪ್ರೆಸ್ ಮಾಡಿದರೆ ಸಾಕು.
* ಬರೀ ಸ್ನ್ಯಾಕ್ಸ್ ಆಗಿ ಮಾತ್ರವಲ್ಲ ಸೈಡ್ ಡಿಶ್ ಆಗಿಯೂ ಇದನ್ನು ಬಳಸಬಹುದು
ನೋಡಿ.



Click it and Unblock the Notifications
