Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಏಕಾದಶಿ ಮತ್ತಿರ ಪೂಜೆಗೆ ನೈವೇದ್ಯವಾಗಿ ಇಡಲು ಹಯಗ್ರೀವ ಮಡ್ಡಿ ಪ್ರಸಾದ: ಈ ಪಾಯಸ ಮಾಡುವುದು ಸುಲಭ
ಹಯಗ್ರೀವ ಮಡ್ಡಿ ದೇವರಿಗೆ ಪ್ರಸಾದವನ್ನಾಗಿ ಅರ್ಪಿಸಲಾಗುವುದು. ಇದು ಕಡ್ಲೆಬೇಳೆ ಪಾಯಸವಾಗಿದ್ದು ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇದಕ್ಕೆ ನೀವು ಗೋಡಂಬಿ, ದ್ರಾಕ್ಷಿ ಕೂಡ ಸೇರಿಸಿದರೆ ಈ ಪ್ರಸಾದ ಇನ್ನಷ್ಟು ಸ್ವಾದಿಷ್ಟಕರವಾಗಿರುತ್ತದೆ. ಈ ನೈವೇದ್ಯ ಅಥವಾ ಪ್ರಸಾದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
ಕಡ್ಲೆಬೇಳೆ 1ಕಪ್
ಅರಿಶಿಣ ಪುಡಿ 1/4 ಚಮಚ
4 ಕಪ್
ಬೆಲ್ಲ ಅರ್ಧ ಕಪ್(ಸಿಹಿ ಬೇಕೆಂದರೆ ಇನ್ನೂ ಸ್ವಲ್ಪ ಸೇರಿಸಬಹುದು)
ತುಪ್ಪ 2 ಚಮಚ
ಗಸೆಗಸೆ 2 ಚಮಚ
ಸಾಬುದಾನ 1/2 ಕಪ್
ಲವಂಗ 3-4
ತೆಂಗಿನಕಾಯಿ ತುಂಡು (ಅರ್ಧ ತೆಂಗಿನಕಾಯಿ ಚಿಕ್ಕ-ಚಿಕ್ಕ ತುಂಡುಗಳಾಗಿ
ಕತ್ತರಿಸಿ)
ಒಣದ್ರಾಕ್ಷಿ ಸ್ವಲ್ಪ
ಗೋಡಂಬಿ 2-3 ಚಮಚ
ಏಲಕ್ಕಿ ಪುಡಿ 1/2 ಚಮಚ
ಮಾಡುವ ವಿಧಾನ
ಕಡ್ಲೆಬೇಳೆಗೆ ಸ್ವಲ್ಪ ಅರಿಶಿಣ ಸೇರಿಸಿ, ನೀರು ಸೇರಿಸಿ ಬೇಯಿಸಿ.
ಈಗ ಬೆಲ್ಲದ ಪಾಕ ಮಾಡಿ
ಅದರಲ್ಲಿ ಬೇಯಿಸಿದ ಕಡ್ಲೆಬೇಳೆ ಸೇರಿಸಿ, ಗಸೆಗಸೆ ಸೇರಿಸಿ ಕುದಿಸಿ.
ಕಡ್ಲೆಬೇಳೆ ಬೆಲ್ಲದ ಪಾಕ ಸೇರಿಸಿ.
ಈಗ ಬಾಣಲೆಗೆ ತುಪ್ಪ ಹಾಕಿ, ಅದರಲ್ಲಿ ತೆಂಗಿನತುಂಡು ಹಾಕಿ ಫ್ರೈ ಮಾಡಿ ಇದನ್ನು
ಪಾಯಸಕ್ಕೆ ಸೇರಿಸಿ, ನಂತರ ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಉರಿಯಿಂದ
ಇಳಿಸಿ.
ನಂತರ ಇದನ್ನು ದೇವರಿಗೆ ನೈವೇದ್ಯ ಅರ್ಪಿಸಿ
- ಏಕಾದಶಿ, ಮತ್ತಿತರ ಪೂಜಾ ಕಾರ್ಯಕ್ರಮದಲ್ಲಿ ಇದನ್ನು ನೀವು ಪ್ರಸಾದವನ್ನಾಗಿ ಬಳಸಬಹುದು.
- ಸಾಬುದಾನ ಕೂಡ ಬಳಸುವುದರಿಂದ ಈ ಪ್ರಸಾದ ತುಂಬಾನೇ ರುಚಿ ಅನಿಸುವುದು.
- ಈ ಪಾಯಸ ಒಂದು ಬೌಲ್ ತಿಂದರೂ ಸಾಕು ಅನಿಸಲ್ಲ, ಅಷ್ಟೊಂದು ರುಚಿಯಾಗಿರುತ್ತದೆ.
- ಪೂಜೆಯಲ್ಲಿ ನೈವೇದ್ಯ ಅರ್ಪಿಸುವುದು ಏಕೆ?
ದೇವರಿಗೆ ನೈವೇದ್ಯ ಇಟ್ಟಾಗ ದೇವರಿಗೆ ನಾವು ಅದನ್ನು ಸಮರ್ಪಿಸಿದ್ದೇವೆ ಎಂಬ ಭಾವನೆ ಮೂಡುತ್ತದೆ, ಸಮರ್ಪಣೆ ಭಾವನೆ ಮನುಷ್ಯನಲ್ಲಿರಬೇಕು. ದೇವರಿಗೆ ಸಾತ್ವಿಕ ಆಹಾರವನ್ನು ನೈವೇದ್ಯವನ್ನಾಗಿ ಅರ್ಪಿಸಲಾಗುವುದು. ಅಕ್ಕಿಯಿಂದ ಮಾಡಿದ ಪಾಯಸ, ಬೇಳೆಯಿಂದ ಮಾಡಿದ ಪಾಯಸ, ಬಾಳೆಹಣ್ಣು, ಅನ್ನ,ಮೊಸರನ್ನ, ಮೊಸರು ಇವುಗಳನ್ನು ನೈವೇದ್ಯವಾಗಿ ಅರ್ಪಿಸಲಾಗುವುದು.
ಪಾಯಸವನ್ನು ನಾವು ಶುದ್ಧವಾದ ಪಾತ್ರೆಯಲ್ಲಿ ದೇವರೊಗೆ ಅರ್ಪಿಸಬೇಕು. ತಾಮ್ರ ಅಥವಾ ಕಂಚಿನ ಪಾತ್ರೆಯಲ್ಲಿ ನೈವೇದ್ಯ ಮಾಡಿ ಅರ್ಪಿಸಲಾಗುವುದು. ಕಮಲದ ಎಲೆ, ಬಾಳೆಯಲ್ಲಿಯೂ ನೈವೇದ್ಯ ಅರ್ಪಿಸುತ್ತಾರೆ. ಮಣ್ಣಿನ ಪಾತ್ರೆಯಲ್ಲಿಯೂ ನೈವೇದ್ಯ ಅರ್ಪಿಸಬೇಕು.
ನೈವೇದ್ಯ ಮಾಡುವಾಗ ಅದರ ರುಚಿ ನೋಡದೆ ಮಾಡಬೇಕು. ಎಲ್ಲಾ ಸಾಮಗ್ರಿ ಅಂದಾಜಿನ ಪ್ರಕಾರ ಹಾಕಿ ನೈವೇದ್ಯ ಅರ್ಪಿಸಬೇಕು. ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕವಷ್ಟೇ ಆ ಆಹಾರವನ್ನು ಬಡಿಸಲಾಗುವುದು.
ನೈವೇದ್ಯ ಎಂಬುವುದು ಶ್ರೇಷ್ಠ ಆಹಾರವಾಗಿದೆ. ಈ ಆಹಾರ ಸೇವನೆ ಮನುಷ್ಯನ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು, ಹಾಗಾಗಿ ದೇವರಿಗೆ ಇಟ್ಟ ಆಹಾರ ಸೇವಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ನೀವು ಹಯಗ್ರೀವ ಮಡ್ಡಿಯನ್ನು ನೇವೇದ್ಯವಾಗಿ ಮಾತ್ರವಲ್ಲ, ಹಬ್ಬಗಳ ಸಡಗರದಲ್ಲಿಯೂ ತಯಾರಿಸಿ ಸವಿಯಬಹುದಾಗಿದೆ. ಈ ಪಾಯಸ ನೀರು-ನೀರಾಗಿ ಇರುವುದಕ್ಕಿಂತ ಗಟ್ಟಿಯಾಗಿದ್ದರೆ ಚೆನ್ನಾಗಿರುತ್ತದೆ.



Click it and Unblock the Notifications
