Latest Updates
-
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ!
ಸುಟ್ಟ ಬದನೆಗಿಂತ ರುಚಿಕರ ಚಟ್ನಿ ಯಾವುದಿದೆ..! ನೀವು ಸಹ ಮಾಡಿ ನೋಡಿ..!
ಬೆಳಗ್ಗೆ ತಿಂಡಿಗೆ ಒಂದು ಚಟ್ನಿ ಇದ್ದರೆ ಅದರ ರುಚಿಗೆ ಬೆಳಗ್ಗೆಯ ಖಾದ್ಯ ಮತ್ತಷ್ಟು ರುಚಿ ನೀಡಲಿದೆ. ಸಾಮಾನ್ಯವಾಗಿ ನಾವು ಎಲ್ಲಾ ಖಾದ್ಯಕ್ಕೂ ತೆಂಗಿನಕಾಯಿ ತುರಿಯ ಚಟ್ನಿ ಮಾಡುತ್ತೇವೆ. ಇಲ್ಲವೆ ಕಡಲೆ ಬೀಜ, ಹುರಿಗಡಲೆ ಚಟ್ನಿ ಮಾಡಿ ಸವಿಯುತ್ತೇವೆ. ಅಪರೂಪಕ್ಕೆ ಟೊಮೆಟೋ, ಈರುಳ್ಳಿ, ಮೆಣಸಿನಕಾಯಿ ಚಟ್ನಿ ಮಾಡಿ ಸವಿಯುತ್ತೇವೆ.
ಹಾಗೆ ನಾವಿಂದು ಸುಟ್ಟ ಬದನೆಕಾಯಿಯ ಚಟ್ನಿಯನ್ನು ಮಾಡುವ ಕುರಿತು ತಿಳಿದುಕೊಳ್ಳೋಣ. ಬದನೆಕಾಯಿಯನ್ನು ನೇರವಾಗಿ ಬೆಂಕಿಯಲ್ಲಿ ಸುಟ್ಟು ಬಳಿಕ ಮಾಡುವ ಚಟ್ನಿ ಸಿಕ್ಕಾಪಟ್ಟೆ ರುಚಿ ನೀಡಲಿದೆ. ಇದರ ರುಚಿಗೆ ಯಾವುದೇ ಖಾದ್ಯ ಮಾಡಿದರೂ ಕೂಡ ಅದರ ರುಚಿಗೆ ನೀವು ಫಿದಾ ಆಗೋದು ಪಕ್ಕಾ. ಈ ಚಟ್ನಿಯನ್ನ ಹಿಂದಿನಿಂದಲೂ ಮಾಡುತ್ತಾ ಬರಲಾಗಿದೆ. ಬೆಂಕಿಯಲ್ಲಿ ಸುಟ್ಟಿರುವ ಬದನೆಕಾಯಿಯ ಸುವಾಸನೆಯಿಂದಲೇ ಎಲ್ಲರ ಬಾಯಲ್ಲಿ ನೀರು ತರಿಸುತ್ತೆ.

ನಾವಿಂದು ರುಚಿ ರುಚಿಯ ಈ ಸುಟ್ಟ ಬದನೆಕಾಯಿಯ ಚಟ್ನಿ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಅದರಲ್ಲೂ ಬದನೆಕಾಯಿಯ ಈ ಚಟ್ನಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವಾಗ ಎಷ್ಟು ಸಮಯ ಹಿಡಿಯಲಿದೆ, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸುಟ್ಟ ಬದನೆಕಾಯಿ ಚಟ್ನಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಬದನೆಕಾಯಿ- 2
- ಈರುಳ್ಳಿ - 1
- ಟೊಮೆಟೋ- 1
- ಖಾರದ ಪುಡಿ
- ಅರಿಶಿನ ಪುಡಿ
- ಕೊತ್ತಂಬರಿ ಪುಡಿ
- ಗರಂ ಮಸಾಲಾ
- ಜೀರಿಗೆ
- ಸಾಸಿವೆ
- ಉದ್ದಿನ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಉಪ್ಪು ಎಣ್ಣೆ
ಸುಟ್ಟ ಬದನೆಕಾಯಿ ಚಟ್ನಿ ಮಾಡುವುದು ಹೇಗೆ?
ಮೊದಲು ಎರಡು ಬದನೆಕಾಯಿಯನ್ನು ತೊಳೆದು ಮಧ್ಯದಲ್ಲಿ ಕತ್ತರಿಸಿಕೊಳ್ಳಿ. ನಾಲ್ಕು ಭಾಗದಲ್ಲಿ ಕತ್ತರಿಸಿಕೊಂಡರೆ ಒಳಗಡೆಯೂ ಚೆನ್ನಾಗಿ ಬೇಯುತ್ತದೆ. ಈಗ ಬದನೆಕಾಯಿಗೆ ಸ್ವಲ್ಪ ಎಣ್ಣೆ ಹಚ್ಚಿ ನೇರವಾಗಿ ಗ್ಯಾಸ್ ಮೇಲೆ ಇಟ್ಟು ಸುಟ್ಟುಕೊಳ್ಳಬೇಕು. ಕಪ್ಪು ಬಣ್ಣಕ್ಕೆ ತಿರುಗಿದರು ಸಮಸ್ಯೆಯಿಲ್ಲ ಚೆನ್ನಾಗಿ ಸುಟ್ಟುಕೊಳ್ಳಬೇಕು.
ಥಟ್ ಅಂತ 5 ನಿಮಿಷದಲ್ಲಿ ಕಡಲೆ ಉಸ್ಲಿ ಮಾಡಿ..! ಮಾಡೋದು ಹೇಗೆ ಗೊತ್ತಾ?
ನಂತರ ಬದನೆಕಾಯಿಯ ಸಿಪ್ಪೆಯನ್ನ ನಿಧಾನವಾಗಿ ಬಿಸಿಸಿಕೊಳ್ಳಿ. ಚೆನ್ನಾಗಿ ಸುಟ್ಟರೆ ಬದನೆಕಾಯಿ ಚಿಪ್ಪೆ ಚೆನ್ನಾಗಿ ಬರುತ್ತದೆ, ಈಗ ಎರಡು ಬದನೆಕಾಯಿಯನ್ನು ಒಂದು ಬೌಲ್ಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ಸ್ಪೂನ್ನಿಂದ ಒತ್ತಿದರೆ ಅದರು ಪುಡಿಯಾಗುತ್ತದೆ. ಇದನ್ನು ಒಂದು ಬೌಲ್ಗೆ ಹಾಕಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಇದಕ್ಕೆ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಕರುಬೇವಿನ ಸೊಪ್ಪು, ಹೆಚ್ಚಿಕೊಂಡಿರುವ ಈರುಳ್ಳಿ ಹಾಕಿ ಫ್ರೈ ಮಾಡಿಕೊಳ್ಳಿ. 4 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಒಂದು ಟೊಮೆಟೋ ಹಾಕಿ ಫ್ರೈ ಮಾಡಿ. 2 ನಿಮಿಷ ಫ್ರೈ ಮಾಡಿದ ಬಳಿಕ ಇದಕ್ಕೆ ಗರಂ ಮಸಾಲ, ಅರಶಿಣ, ಖಾರದ ಪುಡಿ, ಧನಿಯಾ ಪುಡಿ, ಉಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ತರಕಾರಿ ಇಲ್ಲದೆ ಬೊಂಬಾಟ್ ಗ್ರೇವಿ ಮಾಡಿ..! ಇಲ್ಲಿದೆ ವಿಧಾನ!
2 ನಿಮಿಷ ಫ್ರೈ ಮಾಡಿದ ಬಳಿಕ ಸುಟ್ಟಿರುವ ಬದನೆಕಾಯಿಯನ್ನು ಹಾಕಿಕೊಳ್ಳಿ. ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ. ಎಲ್ಲಾ ಮಸಾಲೆ ಹಿಡಿಯುವಂತೆ ಮಿಕ್ಸ್ ಮಾಡುತ್ತಾ ಇರಿ. ಅಂತಿಮವಾಗಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿಕೊಂಡು ಪಾತ್ರೆಯ ಮುಚ್ಚಳ ಮುಚ್ಚಿ 2 ನಿಮಿಷ ಸಣ್ಣ ಉರಿಯಲ್ಲಿ ಬೇಯಲು ಬಿಡಿ. ನಂತರ ಮುಚ್ಚಳ ತೆಗೆದರೆ ನಿಮ್ಮ ಮುಂದೆ ಸುಟ್ಟ ಬದನೆಕಾಯಿ ಚಟ್ನಿ ರೆಡಿಯಾಗಿರುತ್ತೆ.



Click it and Unblock the Notifications
