Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ತರಕಾರಿ ಇಲ್ಲದೆ ಬೊಂಬಾಟ್ ಗ್ರೇವಿ ಮಾಡಿ..! ಇಲ್ಲಿದೆ ವಿಧಾನ!
ಯಾವುದಾರು ತಿಂಡಿ ಅಥವಾ ಅನ್ನ ಮಾಡಿದಾಗ ಅದಕ್ಕೊಂದು ತರಕಾತಿ ಗ್ರೇವಿ ಇದ್ದರೆ ರುಚಿ ಹೆಚ್ಚಾಗುತ್ತದೆ. ರುಚಿಗಾಗಿಯೇ ನಾವು ಹೆಚ್ಚು ಹೆಚ್ಚು ತರಕಾರಿಯ ಗ್ರೇವಿ ಮಾಡಿ ಸವಿಯುತ್ತೇವೆ. ಅದರಲ್ಲೂ ತರಕಾರಿ, ಸೊಪ್ಪಿನ ಗ್ರೇವಿ ಮಾಡಿ ಸವಿಯುವುದು ಅದ್ಭುತ ರುಚಿ ನೀಡಲಿದೆ. ಗ್ರೇವಿ ಅಂದರೆ ತರಕಾರಿ ಇರಲೇಬೇಕು. ಹೀಗಾಗಿ ಹೆಚ್ಚು ಸೊಪ್ಪು ತರಕಾರಿ ಬಳಸಿ ಗ್ರೇವಿ ಮಾಡುವುದು ನಾವು ನೋಡಿದ್ದೇವೆ.
ಈ ಗ್ರೇವಿ ಊಟ, ತಿಂಡಿಗೆ ಹೇಳಿ ಮಾಡಿಸಿದ ಸೈಡ್ ಡಿಶ್ ಆಗಿರುತ್ತೆ. ಹಾಗೆ ಲಾಲಕ್ ಗ್ರೇವಿ, ಕ್ಯಾಪ್ಸಿಕಂ ಗ್ರೇವಿ ಸೇರಿ ಹಲವು ರೀತಿಯ ವಿಶೇಷ ರುಚಿಯ ಗ್ರೇವಿಯನ್ನು ನಾವು ಈ ಮೊದಲು ಇಲ್ಲಿ ತಿಳಿಸಿದ್ದೆವು. ಈಗ ತರಕಾರಿಯೇ ಹಾಕದೆ ಗ್ರೇವಿ ಮಾಡುವ ಕುರಿತು ನಾವಿಂದು ತಿಳಿಸುತ್ತಿದ್ದೇವೆ. ಹೌದು ಒಂದು ತರಕಾರಿ ಇಲ್ಲದೆ ಗ್ರೇವಿ ಹೇಗೆ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಈ ತರಕಾರಿ ಲೆಸ್ ಗ್ರೇವಿಯನ್ನು ನೀವು ಯಾವುದೇ ತಿಂಡಿಯ ಜೊತೆಗೆ ಊಟಕ್ಕೆ ಬಳಸಬಹುದು. ಇದರ ರುಚಿಯ ಮುಂದೆ ಯಾವುದೇ ತರಕಾರಿ ಗ್ರೇವಿಯೂ ಇಲ್ಲ ಎನಿಸದೆ ಇರದು. ಹಾಗಾದ್ರೆ ನಾವಿಂದು ತರಕಾರಿ ಇಲ್ಲದ ಗ್ರೇವಿ ಮಾಡುವುದು ಹೇಗೆ? ಮಾಡುವ ವಿಧಾನವೇನು? ಮಾಡಲು ಏನೆಲ್ಲಾ ಬೇಕು? ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತರಕಾರಿಯೇ ಇಲ್ಲದೆ ಮಾಡುವ ಗ್ರೇವಿಗೆ ಯಾವೆಲ್ಲಾ ವಸ್ತುಗಳು ಬೇಕು?
- ಈರುಳ್ಳಿ -2
- ದನಿಯಾ ಕಾಳು
- ಕಡಲೆ ಬೇಳೆ
- ಉದ್ದಿನಬೇಳೆ
- ಕರಿಬೇವಿನ ಸೊಪ್ಪು
- ಬ್ಯಾಡಗಿ ಮೆಣಸಿನಕಾಯಿ
- ಒಣ ಮೆಣಸು
- ಒಣ ಕೊಬ್ಬರಿ ತುರಿ
- ಕಾಳು ಮೆಣಸು
- ಜೀರಿಗೆ
- ಹುಣಸೆಹಣ್ಣು
- ಕೊತ್ತಂಬರಿ ಸೊಪ್ಪು
- ಸಾಸಿವೆ
- ಇಂಗು
- ಸಾರಿನ ಪುಡಿ
- ಅರಿಶಿನದ ಪುಡಿ
- ಉಪ್ಪು 1
- ಎಣ್ಣೆ
ತರಕಾರಿಯೇ ಇಲ್ಲದೆ ಗ್ರೇವಿ ಮಾಡುವುದು ಹೇಗೆ?
ಒಂದು ಬಾಣಲೆ ಒಲೆ ಮೇಲೆ ಇಟ್ಟು ಧನಿಯಾ ಕಾಳು, ಕಡಲೆ ಬೇಳೆ, ಉದ್ದಿನ ಬೇಳೆ, ಕಾಳು ಮೆಣಸು, ಜೀರಿಗೆ, ಒಣ ಮೆಣಸು, ಬ್ಯಾಡಗಿ ಮೆಣಸು 2, ಕರಿಬೇವು ಹಾಕಿಕೊಂಡಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಹುರಿದುಕೊಳ್ಳಿ. 5 ನಿಮಿಷದ ಬಳಿಕ ಒಣ ಕೊಬ್ಬರಿ ಹಾಕಿ ಒಲೆ ಆಫ್ ಮಾಡಿಕೊಂಡು ಕೆಳಗೆ ಇಳಿಸಿಕೊಳ್ಳಿ. ಈ ಪದಾರ್ಥಗಳನ್ನು ತಣ್ಣಗಾಗಲು ಬಿಡಿ.
ಎಲ್ಲಾ ವಸ್ತುಗಳು ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಈ ಎಲ್ಲಾ ವಸ್ತುಗಳನ್ನು ಹಾಕಿಕೊಂಡು ಅದಕ್ಕೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಒಂದು ಸುತ್ತು ರುಬ್ಬಿದ ಬಳಿಕ ಇದಕ್ಕೆ ಹುಣಸೆ ಹಣ್ಣನ್ನು ನೀರಿನಲ್ಲಿ ಹಾಕಿ ಹುಣಸೆ ಹಣ್ಣಿನ ಸಮೇತ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡು ಮಸಾಲೆಯನ್ನು ತೆಗೆದಿಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿ ಮಾಡಲು ಬಿಡಿ. ಬಳಿಕ ಇದಕ್ಕೆ ಸಾಸಿವೆ, ಇಂಗು, ಈರುಳ್ಳಿ ಹಾಕಿ 4 ನಿಮಿಷ ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಸಾಂಬಾರ್ ಪುಡಿ, ಅರಶಿನ ಪುಡಿ ಹಾಕಿ ಬಿಸಿ ಮಾಡಿಕೊಳ್ಳಿ. ಈಗ ಮಿಕ್ಸಿ ಜಾರ್‌ನಲ್ಲಿ ರುಬ್ಬಿದ ಮಸಾಲೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. 2 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಸ್ವಲ್ಪ ನೀರು ಹಾಕಿ ಮಿಶ್ರಣ ಮಾಡಿಕೊಳ್ಳಿ.
ನೀರು ಹಾಕಿದ ಬಳಿಕ ಮುಚ್ಚಳ ಮುಚ್ಚಿ 10 ನಿಮಿಷ ಕುದಿಯಲು ಬಿಡಿ. 10 ನಿಮಿಷದ ಬಳಿಕ ಕೊನೆಯದಾಗಿ ಕೊತ್ತಂಬರಿ ಸೊಪ್ಪು ಉದುರಿಸಿಕೊಂಡು ಚೆನ್ನಾಗಿ ತಿರುಗಿಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ತರಕಾರಿ ಇಲ್ಲದ ಗ್ರೇವಿ ರೆಡಿಯಾಗುತ್ತದೆ. ಇದನ್ನು ನೀವು ತಿಂಡಿ, ಊಟದೊಂದಿಗೆ ಸವಿಯಲು ನೀಡಬಹುದು.



Click it and Unblock the Notifications