Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕಡ್ಲೆ ಹಾಕಿ ಮಾಡುವ ಕಣಲೆ ಸಾರಿನ ರೆಸಿಪಿ
ಕಳಲೆ ಅಥವಾ ಕಣಲೆ ಎಂದು ಕರೆಯಲ್ಪಡುವ ಬಿದಿರಿನ ಮೊಳಕೆ ಅಥವಾ ಎಳೆ ಬಿದಿರು ಆನೆಗೂ ಪ್ರಿಯವಾದ ಆಹಾರ, ಮನುಷ್ಯನಿಗೂ ಪ್ರಿಯವಾದ ಆಹಾರ. ಈ ಕಳಲ ಅಥವಾ ಕಣಲೆ ಮಳೆಗಾಲದಲ್ಲಿ ಹೆಚ್ಚಾಗಿ ಸಿಗುತ್ತದ. ಇದನ್ನು ತಿನ್ನಲು ತುಂಬಾನೇ ರುಚಿ, ಕೆಲವರು ಇದರಿಂದ ಉಪ್ಪಿನಕಾಯಿ ಕೂಡ ಮಾಡಿಡುತ್ತಾರೆ. ಬೆಂಗಳೂರಿನವರಿಗೆ ಈ ಕಣಲೆ ಸಿಗುವುದು ಅಪರೂಪ, ಕೆಲವೊಂದು ಶಾಪ್ಗಳಲ್ಲಿ ಸಿಕ್ಕರೆ ಸಿಗಬಹುದು, ಆದರೆ ಮಲೆನಾಡಿನ ಕಡೆ, ಕೊಡಗಿನ ಕಡೆ ಮಳೆಗಾಲದ ಪ್ರಮುಖ ಆಹಾರ.

ಮಳೆಗಾಲದಲ್ಲಿ ಇದನ್ನು ತಿನ್ನುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ಹಾಗಾಗಿ ಮಳೆಗಾಲದಲ್ಲಿ ಇದನ್ನು ಮಾಡಿ ಸವಿಯಲಾಗುವುದು. ನಾವಿಲ್ಲಿ ಕಣಲೆ ಹಾಗೂ ಕಡ್ಲೆ ಹಾಕಿ ಮಾಡಿದ ಸಾರಿನ ರೆಸಿಪಿ ನೀಡಿದ್ದೇವೆ.
ಕಣಲೆ ತಂದ ತಕ್ಷಣ ಕತ್ತರಿಸಿ ತಿನ್ನುವಂತಿಲ್ಲ: ಕಣಲೆ ತಂದು ಅದನ್ನು ಚಿಕ್ಕದಾಗಿ ಕತ್ತರಿಸಿ 3-4 ದಿನ ನೀರಿನಲ್ಲಿ ಹಾಕಿಡುತ್ತಾರೆ, ಪ್ರತಿದಿನ ಇದರ ನೀರು ಬದಲಾಯಿಸಬೇಕು, ಅಲ್ಲದೆ ಣಲೆ ನೆನೆ ಹಾಕಿದ್ದ ನೀರನ್ನು ತುಂಬಾನೇ ದೂರ ಬಿಸಾಡಬೇಕು, ಹಸು, ನಾಯಿ ಆ ನೀರು ಕುಡಿದರೆ ಸತ್ತೇ ಹೋಗುತ್ತದೆ ಹಾಗಾಗಿ ಜಾಗ್ರತೆವಹಿಸಿ. 3-4 ದಿನ ನೀರಿನಲ್ಲಿ ಹಾಕಿ ಬೇಯಿಸಿ ತಿಂದರೆ ಹೆದರ ಬೇಕಾಗಿಲ್ಲ, ಆರೋಗ್ಯಕ್ಕೆ ಯಾವ ತೊಂದರೆಯೂ ಆಗಲ್ಲ.
ಬೇಕಾಗುವ ಸಾಮಗ್ರಿ
ಕಣಲೆ
ಒಂದು ಮುಷ್ಠಿಯಷ್ಟು
ಕಡಲೆ 1 ಕಪ್( 8 ಗಂಟೆ ನೀರಿನಲ್ಲಿ ನೆನೆ ಹಾಕಿದ್ದು)
1 ಕಪ್ ತೆಂಗಿನ ತುರಿ
2 ಹಸಿ ಮೆಣಸು
1 ಈರುಳ್ಳಿ
2 ಟೊಮೆಟೊ
ಖಾರಡಿ 1/2 ಚ ಚಮಚ
ಕೊತ್ತಂಬರಿ ಪುಡಿ 1 ಚಮಚ
1/2 ಚಮಚ ಗರಂ ಮಸಾಲ
1/2 ಚಮಚ ಅರಶಿಣ ಪುಡಿ
ಉಪ್ಪು 1 ಚಮಚ
ಮಾಡುವ ವಿಧಾನ
- ಕಣಲೆ ಅಥವಾ ಕಳಲೆ, ಕಡಲೆ, ಹಸಿ ಮೆಣಸು,ಟೊಮೆಟೊ, ಈರುಳ್ಳಿ, ಹಸಿ ಮೆಣಸು, ಟೊಮೆಟೊ ಹಾಕಿ 2 ಕಪ್ ನೀರು ಹಾಕಿ, ಉಪ್ಪು ಸೇರಿಸಿ 3 ವಿಶಲ್ ಬರುವವರೆಗೆ ಬೇಯಿಸಿ.
- ಇದೇ ಸಮಯದಲ್ಲಿ ತೆಂಗಿನಕಾಯಿ ತುರಿದು ಬಾಣಲೆಗೆ ಹಾಕಿ 1 ಚಮಚ ಎಣ್ಣೆ ಹಾಕಿ ಸಾಧಾರಣ ಉರಿಯಲ್ಲಿ ಹುರಿಯಿರಿ, ತೆಂಗಿನ ತುರಿ ಕೆಂಪು ಬಣ್ಣಕ್ಕೆ ಬರುವವಷ್ಟು ಹೊತ್ತು ಹುರಿಯಿರಿ, ನಮತರ ಖಾರದ ಪುಡಿ, ಗಂ ಸಾಲಪುಡಿ (ಇದರ ಬದಲಿಗೆ ಚಕ್ಕೆ, ಲವಂಗ ಹಾಕಬಹುದು), ಕೊತ್ತಂಬರಿ ಪುಡಿ ಸೇರಿಸಿ ಹುರಿಯಿರಿ.
- ತೆಂಗಿನ ತುರಿ ಕಂದು ಬಣ್ಣಕ್ಕೆ ಬಂದಾಗ ಉರಿಯಿಂದ ತೆಗೆಯಿರಿ, ನಂತರ ಗ್ರೈಂಡ್ ಮಾಡಿ
ಈಗ ಸಾರು ಪಾತ್ರೆ ಬಿಸಿ ಮಾಡಿ ಎಣ್ಣೆ ಹಾಕಿ, ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಕರಿಬೇವಿನ ಎಲೆ ಹಾಕಿ ನಂತರ ಬೇಯಿಸಿದ ಸಾಮಗ್ರಿ ಹಾಕಿ, ಮಸಾಲೆ ಸೇರಿಸಿ ಕುದಿಸಿ, ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿ, ಇಷ್ಟು ಮಾಡಿದರೆ ಸವಿರುಚಿಯ ಕಳೆಲೆ ಸಾರು ರೆಡಿ, ಇದನ್ನು ರೊಟ್ಟಿ, ಚಪಾತಿ, ಬಿಸಿ ಅನ್ನದ ಜೊತೆ ಸವಿಯಲು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications
