Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬ್ರಾಹ್ಮಣರ ಶೈಲಿಯ ಹಾಗಲಕಾಯಿ ಗೊಜ್ಜು..! ಸಖತ್ ಟೇಸ್ಟಿ, ಸಿಂಪಲ್ ರೆಸಿಪಿ
ನೀವು ಹಾಗಲಕಾಯಿಯಿಂದ ಮಾಡುವಂತಹ ಹಲವು ರೀತಿಯ ಖಾದ್ಯಗಳ ಸವಿದಿರುತ್ತೀರಿ. ಹಾಗಲಕಾಯಿ ಆರೋಗ್ಯಕ್ಕೆ ಬಹಳ ಉತ್ತಮವಾದ ಖಾದ್ಯ. ಹಾಗಲಕಾಯಿ ಕಹಿ ಆದರೂ ಕೂಡ ಆರೋಗ್ಯಕ್ಕೆ ಬಹಳ ಉತ್ತಮ. ಹಾಗಲಕಾಯಿ ಪಲ್ಯ, ಹಾಗಲಕಾಯಿ ಫ್ರೈ ಅಂದ್ರೆ ಇಷ್ಟವಿರುವುದಿಲ್ಲ ಅದರ ಕಹಿ ಗುಣದಿಂದ ಮಕ್ಕಳಂತೂ ಮಾರುದ್ದ ಓಡುತ್ತಾರೆ. ದೇಹದ ತೂಕ ಕಡಿಮೆ ಮಾಡುವಲ್ಲಿ ಹಾಗಲಕಾಯಿ ಅತ್ಯಂತ ಉಪಯುಕ್ತ ತರಕಾರಿ.
ಮೊಡವೆ ದೂರವಿಡುವುದು ಮಾತ್ರವಲ್ಲದೆ, ಬೊಕ್ಕೆ, ಶಿಲೀಂಧ್ರ ಸೋಂಕು ಇತ್ಯಾದಿಗಳಿಂದಲೂ ಹಾಗಲಕಾಯಿ ರಕ್ಷಣೆ ನೀಡಲಿದೆ. ನಿಮ್ಮ ಅಜೀರ್ಣ ಸಮಸ್ಯೆಗೂ, ಸಕ್ಕರೆ ಪ್ರಮಾಣ ನಿಯಂತ್ರಣಕ್ಕೂ ಕೂಡ ಹಾಗಲಕಾಯಿಯ ಉಪಯುಕ್ತತೆ ಇದೆ. ಹಾಗಲಕಾಯಿ ಸೇವನೆ ಮಾಡಿದರೆ ರಕ್ತ ಶುದ್ಧೀಕಣಕ್ಕೆ ಸಹಕಾರಿಯಾಗಲಿದೆ. ಹೀಗಾಗಿ ಎಲ್ಲಾ ವಯಸ್ಸಿನವರು, ಎಲ್ಲಾ ಸಮಯದಲ್ಲೂ ಈ ಹಾಗಲಕಾಯಿ ಖಾದ್ಯ ಸವಿಯಬಹುದು.

ನಾವು ಈ ಹಿಂದೆ ಮಕ್ಕಳು ಕೂಡ ಕುಳಿತು ಸವಿಯುವಂತಹ ಹಾಗಲಕಾಯಿ ಫ್ರೈ ರೋಸ್ಟ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿದ್ದೆವು. ಇಂದು ನಾವು ಹಾಗಲಕಾಯಿಯ ಗೊಜ್ಜು ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಬ್ರಾಹ್ಮಣರ ಮನೆಯಲ್ಲಿ ಮಾಡುವಂತಹ ವಿಶೇಷವಾದ ರುಚಿಯ ಈ ಹಾಗಲಕಾಯಿ ಗೊಜ್ಜು ಮಾಡುವುದು ಹೇಗೆ ನೋಡೋಣ.
ಈ ಹಾಗಲಕಾಯಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕಾಗುತ್ತದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಗಲಕಾಯಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು
- ಹಾಗಲಕಾಯಿ- 2
- ತೆಂಗಿನ ಕಾಯಿ ತುರಿ - 1 ಕಪ್
- ಹುಣಸೆಹಣ್ಣು - 1 ನಿಂಬೆ ಗಾತ್ರದ್ದು
- ಬ್ಯಾಡಗಿ ಕೆಂಪು ಮೆಣಸಿನಕಾಯಿ - 3
- ಜೀರಿಗೆ - 1/2 ಟೀಸ್ಪೂನ್
- ಬೆಲ್ಲ - 4 ಚಮಚ
- ಎಣ್ಣೆ
- ಸಾಸಿವೆ
- ಉದ್ದಿನ ಬೇಳೆ
- ಕರಿಬೇವು
- ಅರಶಿಣ
- ಕೊತ್ತಂಬರಿ ಸೊಪ್ಪು
- ಉಪ್ಪು
ಹಾಗಲಕಾಯಿ ಗೊಜ್ಜು ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್ಗೆ ತೆಂಗಿನ ಕಾಯಿ ತುರಿ, ಜೀರಿಗೆ, ಒಣ ಮೆಣಸು ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈ ರುಬ್ಬಿದ ಮಸಾಲೆಯನ್ನು ಒಂದು ಬೌಲ್ಗೆ ಹಾಕಿಡಿ. ನಂತರ ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ, ಉದ್ದಿನ ಬೇಳೆ ಹಾಕಿ ಜೊತೆಗೆ ಕರಿಬೇವು ಕೂಡ ಹಾಕಿ.
ನಂತರ ಸಣ್ಣ ಸಣ್ಣದಾಗಿ ಹೆಚ್ಚಿಕೊಂಡಿರುವ ಹಾಗಲಕಾಯಿಯನ್ನು ಹಾಕಿಕೊಳ್ಳಿ. ಅದರ ಮೇಲೆ ಅರಶಿಣ ಪುಡಿ ಹಾಕಿ ಮಿಕ್ಸ್ ಮಾಡಿ. 2 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಇದಾದ ಬಳಿಕ ಸ್ವಲ್ಪ ಹುಣಸೆ ಹುಳಿಯನ್ನು ಇದಕ್ಕೆ ಹಾಕಿಕೊಂಡು ಮಿಕ್ಸ್ ಮಾಡಿ. ನಂತರ ಇದಕ್ಕೆ ಹಾಗಲಕಾಯಿ ಮುಚ್ಚುವಷ್ಟು ನೀರು ಹಾಕಿ ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿಕೊಳ್ಳಿ.
ಹಾಗಲಕಾಯಿ ರೋಸ್ಟ್ ಫ್ರೈ ಹೀಗೆ ಮಾಡಿದ್ರೆ ಮಕ್ಕಳು ಕೂಡ ಕೇಳಿ ತಿಂತಾರೆ..!! ಮಾಡೋದು ಹೇಗೆ?
10 ನಿಮಿಷದ ಬಳಿಕ ಇದಕ್ಕೆ ಸ್ವಲ್ಪ ಬೆಲ್ಲ ಹಾಗೂ ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ. ಹಾಗೆ 1 ನಿಮಿಷದ ಬಳಿಕ ಮಿಕ್ಸಿಯಲ್ಲಿ ರುಬ್ಬಿಕೊಂಡಿರುವ ಮಸಾಲೆಯನ್ನು ಇದಕ್ಕೆ ಹಾಕಿಕೊಂಡು ಸ್ವಲ್ಪವೇ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಕುದಿ ಬರಲು ಬಿಡಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಕ್ಸ್ ಮಾಡಿ ಒಲೆ ಆಫ್ ಮಾಡಿಕೊಳ್ಳಿ.
ನಿಮ್ಮ ಮುಂದೆ ಈ ಹಾಗಲಕಾಯಿ ಗೊಜ್ಜು ರೆಡಿಯಾಗುತ್ತದೆ. ಇದು ಬ್ರಾಹ್ಮಣರು ಮಾಡುವಂತಹ ಶೈಲಿಯಾಗಿದೆ. ನೀವು ಕೂಡ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.



Click it and Unblock the Notifications
