Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಹಾಗಲಕಾಯಿ ರೋಸ್ಟ್ ಫ್ರೈ ಹೀಗೆ ಮಾಡಿದ್ರೆ ಮಕ್ಕಳು ಕೂಡ ಕೇಳಿ ತಿಂತಾರೆ..!! ಮಾಡೋದು ಹೇಗೆ?
ಹಾಗಲಕಾಯಿ ಅಂದ್ರೆ ಕೆಲವರಿಗೆ ಬಹಳ ಇಷ್ಟ ಪಟ್ಟು ಸವಿಯುತ್ತಾರೆ. ಆರೋಗ್ಯಕ್ಕೂ ಕೂಡ ಇದು ಬಹಳ ಒಳ್ಳೆಯದು. ಹಾಗೆ ಈ ಹಾಗಲಕಾಯಿ ಪಲ್ಯ, ಹಾಗಲಕಾಯಿ ಫ್ರೈ ಅಂದ್ರೆ ಇಷ್ಟವಿರುವುದಿಲ್ಲ ಅದರ ಕಹಿ ಗುಣದಿಂದ ಮಕ್ಕಳಂತೂ ಮಾರುದ್ದ ಓಡುತ್ತಾರೆ. ಆದ್ರೆ ಸುಮಾರಷ್ಟು ಜನ ಹಾಗಲಕಾಯಿಯನ್ನು ಹಸಿ ಹಸಿಯಾಗಿಯೂ ಸವಿಯುವುದನ್ನು ನಾವು ನೋಡಿದ್ದೇವೆ.
ಆದ್ರೆ ಹಾಗಲಕಾಯಿಯಿಂದ ಬಹಳಷ್ಟು ಆರೋಗ್ಯಕರ ಲಾಭವಿದೆ. ನಿಮಗೆ ಗಾಯವಾದಾಗ ಬಹುಬೇಗ ವಾಸಿಯಾಗಬೇಕಾದರೆ ಹಾಗಲಕಾಯಿ ಸವಿಯಬೇಕಂತೆ. ಹಾಗೆ ಮಧುಮೇಹ, ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಕೂಡ ಇದು ಅತ್ಯುತ್ತಮ ಆಹಾರ. ಹೀಗಾಗಿ ಇತ್ತೀಚಿಗೆ ಹಾಗಲಕಾಯಿ ಜ್ಯೂಸ್, ಹಾಗಲಕಾಯಿ ಫ್ರೈ ರೀತಿಯ ಖಾದ್ಯ ಮಾಡುವುದು ನೋಡಬಹದು.

ಹೀಗಾಗಿ ನಾವಿಂದು ಹಾಗಲಕಾಯಿ ಫ್ರೈ ಮಾಡುವ ಕುರಿತು ತಿಳಿದುಕೊಳ್ಳೋಣ. ಅದರಲ್ಲೂ ಊಟದ ಜೊತೆಗೆ, ಸಂಜೆ ಸ್ನ್ಯಾಕ್ಸ್ ಸಮಯದಲ್ಲೂ ಇದನ್ನು ಸವಿಯಬಹುದು. ಹೀಗಾಗಿ ಕುರ್‌ಕುರೆಯಂತೆ ಈ ಹಾಗಲಕಾಯಿ ಫ್ರೈ ಮಾಡುವ ಕುರಿತಂತೆ ನಾವಿಂದು ತಿಳಿದುಕೊಳ್ಳೋಣ. ಈ ರೀತಿ ಬಗೆಯಲ್ಲಿ ಫ್ರೈ ಮಾಡಿ ಸವಿದರೆ ಅದರ ರುಚಿ ಹೇಗಿರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಹಾಗಲಕಾಯಿ ಫ್ರೈ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ಸರಿಯಾದ ವಿಧಾನವೇನು? ಫ್ರೈ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ
ಹಾಗಲಕಾಯಿ ಫ್ರೈ ಮಾಡಲು ಬೇಕಾಗುವ ಪದಾರ್ಥಗಳು
- ಹಾಗಲಕಾಯಿ - 400 ಗ್ರಾಂ
- ಉಪ್ಪು
- ಅರಿಶಿನ ಪುಡಿ - 1/4 ಟೀಸ್ಪೂನ್
- ಮೆಣಸಿನ ಪುಡಿ
- ಚಿಲ್ಲಿ ಪೌಡರ್
- ಮಲ್ಲಿಗೆ ಪುಡಿ - 1 tbsp
- ಜೀರಿಗೆ ಪುಡಿ
- ಸೋಂಪು ಪುಡಿ
- ಗರಂ ಮಸಾಲಾ
- ಹುಣಸೆ ಹುಳಿ
- ರವೆ - 2 ಟೇಬಲ್ ಚಮಚ
- ಎಣ್ಣೆ - ಕರಿಯಲು ಬೇಕಾದ ಪ್ರಮಾಣ
ಪಾಕ ವಿಧಾನ
ಮೊದಲು ಹಾಗಲಕಾಯಿಯನ್ನು ನೀರನಲ್ಲಿ ತೊಳೆದು ಬಳಿಕ ವೃತ್ತಾಕಾರಾವಾಗಿ ಇಲ್ಲವೆ ಉದ್ದವಾಗಿ ಕತ್ತರಿಸಿಕೊಳ್ಳಿ. ಹಾಗಲಕಾಯಿ ಬೀಜಗಳು ಇರದಂತೆ ನೋಡಿಕೊಳ್ಳಿ ಇದು ಮತ್ತಷ್ಟು ಕಹಿಯಾಗಿಸುತ್ತದೆ. ನಂತರ ಈ ತುಂಡಾಗಿಸಿದ ಹಾಗಲಕಾಯಿಯನ್ನು ಒಂದು ಪ್ಲೇಟ್‌ಗೆ ಹಾಕಿಟ್ಟುಕೊಳ್ಳಿ.
ನಂತರ ಈ ಹಾಗಲಕಾಯಿಗಳಿಗೆ ಸ್ವಲ್ಪ ಉಪ್ಪು ಗಾಗೂ ಖಾರ, ಅರಶಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ನೀರು ಹಾಕಿ ಈ ಮಸಾಲೆ ಕಾಯಿಗಳಿಗೆ ಹಿಡಿಯುವಂತೆ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಹಿಡಿಯಲು ಸ್ವಲ್ಪ ಹೊತ್ತು ಹಾಗೆಯೇ ಇಡಿ. ಅರ್ಧ ಗಂಟೆಗಳ ಕಾಲ ಹಾಗೆಯೇ ಇಡಬೇಕು. ಹೀಗೆ ನೆನೆಸಿಟ್ಟಾಗ ಹಾಗಲಕಾಯಿ ನೀರು ಬಿಟ್ಟುಕೊಳ್ಳುತ್ತದೆ. ನಂತರ ಈ ನೀರು ತೆಗೆದು ಸ್ವಲ್ಪ ಹಿಂಡುಕೊಳ್ಳಿ.
ನಂತರ ಹಾಗಲಕಾಯಿಗೆ ಮೆಣಸು, ಧನಿಯಾ ಪುಡಿ, ಜೀರಿಗೆ ಪುಡಿ, ಸೋಂಪು ಪುಡಿ, ಗರಂ ಮಸಾಲ, ಏಳಕ್ಕಿ ಪುಡಿ ರವೆ ಹಾಕಿ ಸೇರಿಸಿಕೊಳ್ಳಬೇಕುಜ ಸ್ವಲ್ಪ ನೀರು ಹಾಕಿಕೊಂಡು ಈ ಎಲ್ಲಾ ಮಸಾಲೆಗಳು ಹಾಗಲಕಾಯಿಗೆ ಹಿಡಿಯುವಂತೆ ಕಲಸಿಕೊಳ್ಳಬೇಕು. ಅನಂತರ ಮತ್ತೆ 15 ನಿಮಿಷ ಹಾಗೆಯೆ ಬಿಡಬೇಕು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಎಣ್ಣೆ ಹಾಕಿ ಎಣ್ಣೆ ಕಾದ ಬಳಿಕ ಇದಕ್ಕೆ ಮಸಾಲೆಯಲ್ಲಿ ಚೆನ್ನಾಗಿ ನೆನೆದಿರುವ ಹಾಗಲಕಾಯಿಯ ಪೀಸ್‌ಗಳನ್ನು ಬಿಡಿ. ಆರಂಭದಲ್ಲಿ ಮಿಕ್ಸ್ ಮಾಡಬೇಡಿ, 1 ನಿಮಿಷ ಬಿಟ್ಟು ಅನಂತರ ತಿರುಗಿಸಿಕೊಳ್ಳುತ್ತಾ ಚೆನ್ನಾಗಿ ರೋಸ್ಟ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕುರುಕಲು ಹಾಗಲಕಾಯಿ ಫ್ರೈ ರೆಡಿಯಾಗುತ್ತದೆ.
ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ. ಹಾಗಲಕಾಯಿ ಇಷ್ಟ ಇಲ್ಲ ಎನ್ನುವವರು ಕೂಡ ಒಮ್ಮೆ ಸವಿಯಲು ಮುಂದಾಗುತ್ತಾರೆ. ಹಾಗೆ ಮತ್ತೆ ಮತ್ತೆ ಇದನ್ನು ಸವಿಯೋದು ಪಕ್ಕ.



Click it and Unblock the Notifications
