Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಆಟಿ ತಿಂಗಳ ಸ್ಪೆಷಲ್: ಮಂಗಳೂರು ಕುಡುತ ಚಟ್ನಿ ರೆಸಿಪಿ
ಮಳೆಗಾಲದಲ್ಲಿ ದೇಹ ತಂಪಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡಿನಲ್ಲಿ ಈ ಕಾಲದಲ್ಲಿ ಕುಡುತ ಚಟ್ನಿ ಮಾಡುತ್ತಾರೆ. ಹುರುಳಿ ಚಟ್ನಿಯನ್ನೇ ತುಳುವಿನಲ್ಲಿ ಕುಡುತ ಚಟ್ನಿ ಎಂದು ಕರೆಯಲಾಗಿದ್ದು, ಇದು ದೇಹವನ್ನು ಬೆಚ್ಚಗಿರುತ್ತದೆ. ಇದರಲ್ಲಿ ಕಬ್ಬಿಣದ ಅಂಶದಿಂದ ಸಮೃದ್ಧವಾಗಿದ್ದು, ಗರ್ಭಿಣಿಯರಿಗೆ ಬಹಳ ಮುಖ್ಯವಾಗಿದೆ. ಜೊತೆಗೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿರುವುದರಿಂದ, ಟೈಪ್ 2 ಮಧುಮೇಹಿಗಳಲ್ಲಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಂತಹ ಕುಡುತ ಚಟ್ನಿ ಮಾಡುವ ವಿಧಾನವನ್ನು ಇಂದು ನೋಡೋಣ.

Recipe By: Shreeraksha
Recipe Type: Vegetarian
Serves: 4
-
ಬೇಕಾಗುವ ಪದಾರ್ಥಗಳು:
1/2 ಕಪ್ ಹುರುಳಿ ಕಾಳು
1 ಕಪ್ ಈರುಳ್ಳಿ
2 ಲವಂಗ ಬೆಳ್ಳುಳ್ಳಿ
ಕರಿಬೇವಿನ ಎಲೆಗಳು
4 ಒಣ ಕೆಂಪು ಮೆಣಸಿನಕಾಯಿ
2 ಚಮಚ ಜೀರಿಗೆ
1/2 ಚಮಚ ಕೊತ್ತಂಬರಿ ಬೀಜ
1/2 ಚಮಚ ಬೆಲ್ಲ
2 ಚಮಚ ತಾಜಾ ತೆಂಗಿನಕಾಯಿ
1 ಚಮಚ ಹುಣಸೆ ನೀರು
2 ಟೀಸ್ಪೂನ್ ಎಣ್ಣೆ
ಇಂಗು
ಉಪ್ಪು , ರುಚಿಗೆ
ಒಗ್ಗರಣೆಗೆ- ಸಾಸಿವೆ, ಉದ್ದಿನ ಬೇಳೆ
-
ಹುರಳಿ ಕಲು ಚಟ್ನಿ ರೆಸಿಪಿ ಮಾಡುವುದು ಹೇಗೆ:
- ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಅದಕ್ಕೆ ಜೀರಿಗೆ, ಕರಿಬೇವಿನ ಎಲೆ, ಒಣ ಮೆಣಸಿನಕಾಯಿ ಮತ್ತು ಕೊತ್ತಂಬರಿ ಬೀಜಗಳ್ನು ಸೇರಿಸಿ, ಕೈಯಾಡಿಸಿ.
- ನಂತರ, ಅದಕ್ಕೆ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಚೆನ್ನಾಗಿ ಹುರಿಯಿರಿ.
- ಅದು ಮುಗಿದ ನಂತರ ಅದಕ್ಕೆ ಹುರುಳಿ ಕಾಳು ಸೇರಿಸಿ, ಅದು ಉಬ್ಬುವವರೆಗೆ ಫ್ರೈ ಮಾಡಿ. ಒಮ್ಮೆ ಮಾಡಿದ ನಂತರ ಸ್ಟವ್ ಆಫ್ ಮಾಡಿ ಮತ್ತು ತಣ್ಣಗಾಗಲು ಬಿಡಿ.
- ನಂತರ ಮಿಕ್ಸಿ ಜಾರ್ ಗೆ ಈ ಹುರಿದ ಮಿಶ್ರಣ ಹಾಕಿ ಅದಕ್ಕೆ ಬೆಲ್ಲ, ತೆಂಗಿನಕಾಯಿ ಮತ್ತು ಹುಣಸೆಹಣ್ಣು ಸೇರಿಸಿ, ನಯವಾದ ಪೇಸ್ಟ್ ಮಾಡಿ. ಒಂದು ತಟ್ಟೆಗೆ ಹಾಕಿಕೊಳ್ಳಿ.
- ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಉದ್ದಿನಬೇಳೆ ಹಾಕಿ, ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ನಂತರ ಕರಿಬೇವಿನ ಎಲೆಗಳು, ಒಣ ಕೆಂಪು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ. ಕರಿಬೇವಿನ ಎಲೆಗಳು ಗರಿಗರಿಯಾಗುವವರೆಗೆ ಕೆಲವು ಸೆಕೆಂಡುಗಳ ಕಾಲ ಫ್ರೈ ಮಾಡಿ. ಸ್ಟವ್ ಆಫ್ ಮಾಡಿ. ಇದನ್ನು ಹುರಳಿ ಕಾಳು ಚಟ್ನಿಯ ಮೇಲೆ ನಿಧಾನವಾಗಿ ಸೇರಿಸಿ ಬಡಿಸಿ.
- ಇದನ್ನು ಇಡ್ಲಿ, ದೋಸೆ, ಗಂಜಿ ಮೊದಲಾದವುಗಳೊಂದಿಗೆ ಸೇರಿಸಿ ತಿನ್ನಬಹುದು.
- People - 4 ಜನ
- ಎನರ್ಜಿ - 27 ಕ್ಯಾ
- ಕೊಬ್ಬು - 1.3ಗ್ರಾ
- ಪ್ರೋಟೀನ್ - 1.1ಗ್ರಾ
- ಕಾರ್ಬೋಹೈಡ್ರೇಟ್ - 2.8 ಗ್ರಾ
- ಫೈಬರ್ - 0.4ಗ್ರಾ



Click it and Unblock the Notifications
