Latest Updates
-
ದೀಪಾವಳಿ ಸಂಭ್ರಮದಲ್ಲಿ ಬೆನ್ನು ನೋವಾ? ಲಕ್ಷ್ಮಿ ಪೂಜೆಗೂ ಮುನ್ನ ಈ 7 ನಿಮಿಷದ ಸ್ಟ್ರೆಚಿಂಗ್ ಟ್ರೈ ಮಾಡಿ! -
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್
ಹೋಳಿ ಸ್ಪೆಷಲ್: ಈ ಬೂಂದಿ ರೈತಾ ನಿಮ್ಮ ಹೊಟ್ಟೆ ತಂಪಾಗಿಸುತ್ತೆ
Recipes
oi-Shreeraksha
Posted By: Shreeraksha
ಬೂಂದಿ ರೈತಾ ಒಂದು ರುಚಿಯಾದ ಸೈಡ್ ಡಿಶ್ ಪಾಕವಿಧಾನವಾಗಿದ್ದು, ಉತ್ತರ ಬಾರತದ ಮೂಲದ ಫೇಮಸ್ ತಿಂಡಿಯಾಗಿದೆ. ಮೊಸರು ಬೇಸಿಗೆಯ ಆಹಾರದ ಅತ್ಯಗತ್ಯ ಭಾಗವಾಗಿದೆ ಮತ್ತು ನಿಮ್ಮ ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇನ್ನು ಈ ಬೂಂಡಿ ರೈತಾ ಹೋಳಿ ಹಬ್ಬದ ಪ್ರಮುಖ ಖಾದ್ಯವಾಗಿದೆ. ಬೇಸಿಗೆಯ ಬಿಸಿಲಿನಲ್ಲಿ ಹೋಳಿ ಆಡಿದ ನಂತರ ಈ ತಂಪಾದ ರೈತಾ ನಿಮ್ಮ ಹೊಟ್ಟೆ ಹಾಗೂ ಮನಸ್ಸನ್ನು ತಂಪಾಗಿಸುತ್ತದೆ. ಹಾಗಾದರೆ ಇನ್ನೇಕೆ ತಡ, ಈ ಹೋಳಿ ಸ್ಪೆಷಲ್ ಬೂಂದಿ ರೈತಾವನ್ನು ಮಾಡುವ ವಿಧಾನವನ್ನು ನೋಡ್ಕೊಂಡು ಬರೋಣ.

ಹೋಳಿ ಸ್ಪೆಷಲ್: ಈ ಬೂಂದಿ ರೈತಾ ನಿಮ್ಮ
ಹೊಟ್ಟೆ ತಂಪಾಗಿಸುತ್ತೆ
ಹೋಳಿ ಸ್ಪೆಷಲ್: ಈ ಬೂಂದಿ ರೈತಾ
ನಿಮ್ಮ ಹೊಟ್ಟೆ ತಂಪಾಗಿಸುತ್ತೆ
Prep Time
5 Mins
Cook Time
15M
Total Time
20 Mins
Recipe By: Shreeraksha
Recipe Type: Vegetarian
Serves: 3
Ingredients
-
ಬೇಕಾಗುವ ಪದಾರ್ಥಗಳು:
2 ಕಪ್ ಮೊಸರು
1 ಚಮಚ ಜೀರಿಗೆ ಪುಡಿ
1/2 ಚಮಚ ಮೆಣಸಿನ ಪುಡಿ
1 ಚಮಚ ಸಂಸ್ಕರಿಸಿದ ಎಣ್ಣೆ
1/2 ಚಮಚ ಸಕ್ಕರೆ
1/2 ಕಪ್ ಕಡಲೆ ಹಿಟ್ಟು
1 ಚಮಚ ಅಡಿಗೆ ಸೋಡಾ
ನೀರು
ಉಪ್ಪು
How to Prepare
-
ಬೂಂದಿ ರೈತಾ ತಯಾರಿಸುವ ವಿಧಾನ:
- ಒಂದು ಬಟ್ಟಲಿನಲ್ಲಿ ಒಂದು ಕಪ್ ಕಡಲೆ ಹಿಟ್ಟು, ಕೆಂಪು ಮೆಣಸಿನ ಪುಡಿ, ಜೀರಾ ಮತ್ತು ಸೋಡಾವನ್ನು ಬೆರೆಸಿ ಮೃದುವಾದ ಬ್ಯಾಟರ್ ತಯಾರಿಸಿ. ಇದಕ್ಕೆ ಸ್ವಲ್ಪ ಸ್ವಲ್ಪವೇ ನೀರನ್ನು ಸೇರಿಸಿ, ಮಧ್ಯಮ ಸ್ಥಿರತೆಯ ಬ್ಯಾಟರ್ ತಯಾರಿಸಿ.
- ಮೀಡಿಯಮ್ ಫ್ಲೇಮ್ ನಲ್ಲಿ ಕಡಾಯಿ ಇಟ್ಟು ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಸಾಕಷ್ಟು ಬಿಸಿಯಾದಾಗ, ರಂಧ್ರವಿರುವ ಚಮಚದ ಮೂಲಕ ಬ್ಯಾಟರ್ ಅನ್ನು ಸುರಿಯಿರಿ. ಇದರಿಂದಾಗಿ ಗುಳ್ಳೆಯ ಆಕಾರದಲ್ಲಿ ಹಿಟ್ಟು ಹನಿರೂಪದಲ್ಲಿ ಕಡಾಯಿಗೆ ಬೀಳುತ್ತದೆ. ಒಂದು ಸಮಯದಲ್ಲಿ ಮೂರು ಅಥವಾ ನಾಲ್ಕು ಚಮಚಗಳನ್ನು ತೆಗೆದುಕೊಂಡು, ಅವು ತಿಳಿ ಕಂದು ಬಣ್ಣ ಬರುವವರೆಗೆ ಲಘುವಾಗಿ ಹುರಿದು, ಬೆಚ್ಚಗಿನ ನೀರಿನಲ್ಲಿ ನೇರವಾಗಿ ಹಾಕಿ. ಅವುಗಳನ್ನು ಸ್ವಲ್ಪ ಸಮಯದವರೆಗೆ ನೆನೆಯಲು ಬಿಡಿ.
- ಈಗ, ರೈಟಾಗೆ, ಒಂದು ಬಟ್ಟಲನ್ನು ತೆಗೆದುಕೊಂಡು ಅದರಲ್ಲಿ ಮೊಸರು, ಜೀರಿಗೆ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಸ್ವಲ್ಪ ಸಕ್ಕರೆಯೊಂದಿಗೆ ರುಚಿಗೆ ತಕ್ಕಂತೆ ಸ್ವಲ್ಪ ಉಪ್ಪು ಹಾಕಿ.
- ಹೆಚ್ಚುವರಿ ನೀರನ್ನು ತೆಗೆದುಹಾಕಲು ಬೂಂದಿಯನ್ನು ಜರಡಿ ಹಿಡಿಯಿರಿ ಅಥವಾ ಅದನ್ನು ಹಿಸುಕಿ ಹಾಕಿ ಸ್ವಲ್ಪ ಸಮಯದವರೆಗೂ ಬಿಡಿ. ಇದರಿಂದ ಬೂಂದಿ ಊಡಿಕೊಳ್ಳುತ್ತದೆ.
- ನಂತರ ಮೊಸರಿಗೆ ಬೂಂದಿ ಸೇರಿಸಿ, ಚೆನ್ನಾಗಿ ಬೆರೆಸಿ ಮತ್ತು ತಾಜಾ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಆನಂದಿಸಿ!
Instructions
- ಮೊಸರು ಬೇಸಿಗೆಯ ಆಹಾರದ ಅತ್ಯಗತ್ಯ ಭಾಗವಾಗಿದೆ ಮತ್ತು ನಿಮ್ಮ ಕರುಳನ್ನು ಆರೋಗ್ಯವಾಗಿರಿಸುತ್ತದೆ. ಇನ್ನು ಈ ಬೂಂಡಿ ರೈತಾ ಹೋಳಿ ಹಬ್ಬದ ಪ್ರಮುಖ ಖಾದ್ಯವಾಗಿದೆ.
Nutritional Information
- People - 3
- ಎನರ್ಜಿ - 69ಕ್ಯಾ
- ಕೊಬ್ಬು - 3.9ಗ್ರಾ
- ಪ್ರೋಟೀನ್ - 2.4ಗ್ರಾ
- ಕಾರ್ಬೋಹೈಡ್ರೇಟ್ - 3.3ಗ್ರಾ
- ಫೈಬರ್ - 0.2ಗ್ರಾ
Comments
[ 3.5 of 5 - 42 Users]



Click it and Unblock the Notifications
