Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
Soya Chunks Dosa : ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ರೆಸಿಪಿ
ಸಾಮಾನ್ಯವಾಗಿ ಸೋಯಾ ಚಂಕ್ಸ್ ಅಥವಾ ಸೋಯಾ ಬೀಜಗಳಿಂದ ಕರ್ರಿ, ಡ್ರೈ
ಪದಾರ್ಥಗಳನ್ನು ಮಾಡುವುದು ರೂಢಿ. ಇದರಲ್ಲಿ ಅಧಿಕ ಪ್ರಮಾಣದ ಪ್ರೊಟೀನ್ ಇದ್ದು,
ಕಟ್ಟು ಮಾಸ್ತದ ದೇಹ ಬಯಸುವ ಯುವಕರಿಗೆ ಬಹಳ ಒಳ್ಳೆಯದು. ಆದರೆ, ಸೋಯಾಬಿನ್ ನ ಅದೇ
ರೆಸಿಪಿ ತಿಂದು ಬೇಜಾರಾಗಿದ್ರೆ, ಇದನ್ನ ಒಮ್ಮೆ ಟ್ರೈ ಮಾಡಿ.
ಇಲ್ಲಿ ನಾವು ಹೈ ಪ್ರೊಟೀನ್ ಇರುವ ಸೋಯಾ ಚಂಕ್ಸ್ ದೋಸೆ ಮಾಡುವ ವಿಧಾನ
ತಿಳಿಸಿದ್ದೇವೆ. ಇದನ್ನು ಬಹಳ ಸುಲಭವಾಗಿ ತಯಾರಿಸಬಹುದು. ಹೇಗೆ ಎಂಬುದನ್ನು
ನೋಡೋಣ.

Recipe By: Shreeraksha
Recipe Type: Vegetarian
Serves: 2
-
ಬೇಕಾಗುವ ಪದಾರ್ಥಗಳು :
1 ಕಪ್ ಸೋಯಾ ಚಂಕ್ಸ್
1 ಟೊಮೆಟೊ
2 ಒಣ ಮೆಣಸಿನಕಾಯಿ
1 ಇಂಚಿನ ಶುಂಠಿ
2 ಕಪ್ ನೀರು
1 ಟೀಸ್ಪೂನ್ ಉಪ್ಪು
1 ಕಪ್ ಗೋಧಿ ಹಿಟ್ಟು
¾ ಕಪ್ ಅಕ್ಕಿ ಹಿಟ್ಟು
½ ಈರುಳ್ಳಿ
1 ಕ್ಯಾರೆಟ್ (ತುರಿದ)
2 ಚಮಚ ಕೊತ್ತಂಬರಿ ಸೊಪ್ಪು
-
ತಯಾರಿಸುವ ವಿಧಾನ :
ಮೊದಲನೆಯದಾಗಿ, ಬಾಣಲೆಯಲ್ಲಿ 1 ಕಪ್ ಸೋಯಾ, 1 ಟೊಮೆಟೊ, 2 ಒಣಮೆಣಸಿನಕಾಯಿ, 1 ಇಂಚಿನ ಶುಂಠಿ, 2 ಕಪ್ ನೀರು ಮತ್ತು 1 ಟೀಸ್ಪೂನ್ ಉಪ್ಪನ್ನು ಹಾಕಿ, 10 ನಿಮಿಷಗಳ ಕಾಲ ಮುಚ್ಚಿ ಕುದಿಸಿ, ತಣ್ಣಗಾಗಿಸಿ.
ಇನ್ನೊಂದು ಬದಿ, ಟೊಮೆಟೊ ಸಿಪ್ಪೆ ತೆಗೆದು, ಮಿಕ್ಸಿಗೆ ವರ್ಗಾಯಿಸಿ, ನಯವಾದ ಪೇಸ್ಟ್ ಮಾಡಿಕೊಳ್ಳಿ.
ಸೋಯಾ ಪೇಸ್ಟ್ ಅನ್ನು ದೊಡ್ಡ ಬಟ್ಟಲಿಗೆ ಹಾಕಿ, ಅದಕ್ಕೆ 1 ಕಪ್ ಗೋಧಿ ಹಿಟ್ಟು, ¾ ಕಪ್ ಅಕ್ಕಿ ಹಿಟ್ಟು, ಟೊಮೊಟೊ ಪೇಸ್ಟ್ ಮತ್ತು ½ ಟೀಸ್ಪೂನ್ ಉಪ್ಪು ಸೇರಿಸಿ, ಅಗತ್ಯವಿರುವಂತೆ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
ಈಗ ½ ಈರುಳ್ಳಿ, 1 ಕ್ಯಾರೆಟ್ ಮತ್ತು 2 ಚಮಚ ಕೊತ್ತಂಬರಿ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
ಮುಂದೆ, ಪ್ಯಾನ್ ತೆಗೆದುಕೊಂಡು ಎಣ್ಣೆ ಹಚ್ಚಿ, ಮಿಶ್ರಣವನ್ನು ರೊಟ್ಟಿ ಹಾಗೆಯೇ ತಟ್ಟಿ ಅಥವಾ ದೋಸೆಯ ರೀತಿ ಹಾಕಿದರೆ, ಎರಡೂ ಕಡೆ ಚೆನ್ನಾಗಿ ಬೇಯಿಸಿ.
ಅಂತಿಮವಾಗಿ, ಚಟ್ನಿ ಅಥವಾ ಸಾಸ್ನೊಂದಿಗೆ ಪ್ರೊಟೀನ್ ಭರಿತ ದೋಸೆಯನ್ನು ಆನಂದಿಸಿ.
- People - 2
- ಕ್ಯಾಲೋರಿಗಳು: - 128 ಕೆ.ಸಿ.ಎಲ್
- ಕೊಬ್ಬು: - 1 ಗ್ರಾಂ
- ಪ್ರೋಟೀನ್: - 7 ಗ್ರಾಂ
- ಕಾರ್ಬೋಹೈಡ್ರೇಟ್ಗಳು: - 24 ಗ್ರಾಂ



Click it and Unblock the Notifications
