Latest Updates
-
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್!
ಹೇರಳೆಕಾಯಿ ನೀರುಗೊಜ್ಜು ರೆಸಿಪಿ
ಹುಣಸೆ ಹಣ್ಣು, ನಿಂಬೆ ಹಣ್ಣು ಬಿಟ್ಟರೆ ಉಳಿದ ಹುಳಿ ಪದಾರ್ಥಗಳ ಪರಿಚಯ ಹೆಚ್ಚಿನವರಿಗೆ ಇಲ್ಲವಾಗಿದೆ. ಅದೆಷ್ಟೋ ಹುಳಿ ಆಹಾರ ಪದಾರ್ಥಗಳು ಮಾರುಕಟ್ಟೆಯನ್ನು ಪ್ರವೇಶಿಸುವುದೇ ಇಲ್ಲ ಎಂದರೆ ತಪ್ಪಿಲ್ಲ. ಆದರೆ ಹೇರಳೆಕಾಯಿಗೆ ಉತ್ತಮ ಬೇಡಿಕೆ ಇದೆ. ಹೇರಳೆಕಾಯಿಯನ್ನು ಕೆಲವು ಕಡೆ ಕಂಚಿಕಾಯಿ ಎಂದು ಕೂಡ ಕರೆಯುತ್ತಾರೆ. ಹೇರಳೆಕಾಯಿ ಚಿತ್ನಾಹ್ನ ತುಂಬಾ ಫೇಮಸ್. ಆದರೆ ಹೇರಳೆಕಾಯಿಯಿಂದ ಇನ್ನೂ ಅನೇಕ ರೀತಿಯ ಅಡುಗೆ ಮಾಡುವುದಕ್ಕೆ ಸಾಧ್ಯವಿದೆ.ಅಂತಹದ್ದೇ ಒಂದು ವಿಶೇಷ ಅಡುಗೆಯನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದುವೇ ಹೇರಳೆಕಾಯಿ ನೀರುಗೊಜ್ಜು.

ಅನ್ನಕ್ಕೆ ಕಲಸುವುದಕ್ಕೆ ರುಚಿರುಚಿಯಾಗಿರುವ ಇದು ಸೀಸನಲಿ ಸೇವಿಸುವುದಕ್ಕೆ ಬಹಳ ಚೆನ್ನಾಗಿರುತ್ತೆದೆ. ಆರೋಗ್ಯಕ್ಕೂ ಹಿತವಾಗುವ ಅಡುಗೆಯಾಗಿರುವುದರಿಂದ ಜೀರ್ಣಕ್ರಿಯೆಗೆ ನೆರವು ನೀಡುತ್ತದೆ. ತಿಳಿಸಾರಿನ ಬದಲಿಗೆ ನೀರುಗೊಜ್ಜು ವಾವ್ ಅನ್ನಿಸುವ ರುಚಿ ನೀಡುತ್ತದೆ. ಮಾವಿನಕಾಯಿಯ ನೀರುಗೊಜ್ಜಿನಂತೆಯೇ ಹೇರಳೆಕಾಯಿ ನೀರುಗೊಜ್ಜು ಕೂಡ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನಕ್ಕಾಗಿ ಮುಂದೆ ಓದಿ.
Recipe By: Sushma
Recipe Type: Gojju
Serves: 4
-
ಬೇಕಾಗುವ ಸಾಮಗ್ರಿಗಳು
ಹೇರಳೆಕಾಯಿ - 1
ನೀರು - 2 ಲೋಟ
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆ - ಒಂದು ಸ್ಪೂನ್
ಕೆಂಪು ಮೆಣಸು - ಮೂರು
ಕೊಬ್ಬರಿಎಣ್ಣೆ- ನಾಲ್ಕು ಸ್ಪೂನ್
ಬೇವಿನಸೊಪ್ಪು - ನಾಲ್ಕರಿಂದ ಐದು ಎಸಳು
ಬೆಲ್ಲ(ಆಪ್ಶನಲ್) - ಮೂರು ಸ್ಪೂನ್
ಇಂಗು - ಚಿಟಿಕೆ
-
ಮಾಡುವ ವಿಧಾನ
ಎರಡು ಲೋಟ ನೀರಿಗೆ ಹೇರಳೆಕಾಯಿಯ ರಸವನ್ನು ಹಿಂಡಿ.
ನಂತರ ಉಪ್ಪು ಹಾಕಿ.
ಸಿಹಿಯನ್ನು ಇಷ್ಟ ಪಡುವವರು ಬೆಲ್ಲ ಹಾಕಬಹುದು. ನಾವಿಲ್ಲಿ ಸಿಹಿಗೊಜ್ಜನ್ನು ಇಷ್ಟ ಪಡುವುದರಿಂದಾಗಿ ಬೆಲ್ಲ ಸೇರಿಸಿದ್ದೇವೆ.
ನೆನಪಿರಲಿ ಬೆಲ್ಲ ಸೇರಿಸಿದರೆ ಒಂದು ರುಚಿ, ಬೆಲ್ಲ ಸೇರಿಸದೇ ಇದ್ದರೆ ಇನ್ನೊಂದು ರುಚಿ ಅನ್ನಿಸುತ್ತದೆ.
ನಂತರ ಒಗ್ಗರಣೆ ಮಾಡಬೇಕು. ನೀರು ಗೊಜ್ಜಿನ ಪ್ರಮುಖ ಹಂತವೇ ಈ ಒಗ್ಗರಣೆ.
ಮೂರು ಸ್ಪೂನ್ ಎಣ್ಣೆಯನ್ನು ಒಗ್ಗರಣೆಗಾಗಿ ಕಾಯಲು ಇಡಿ. ನಂತರ ಅದಕ್ಕೆ ಸಾಸಿವೆ ಕಾಳು ಹಾಕಿ ಚಟಿಪಟಿ ಅಂದಾಗ ಬೇವಿನಸೊಪ್ಪು, ಇಂಗು ಮತ್ತು ಕೆಂಪು ಮೆಣಸು ಹಾಕಿ ಹುರಿಯಿರಿ.
ಕೆಂಪು ಮೆಣಸು ಉಬ್ಬಿದ ಮೇಲೆ ಅದನ್ನು ಹೇರಳೆಕಾಯಿ ರಸದ ನೀರಿಗೆ ಹಾಕಿ.
30 ಸೆಕೆಂಡಿನ ನಂತರ ಆ ಎಲ್ಲಾ ಕೆಂಪು ಮೆಣಸನ್ನು ನೀರಿನೊಂದಿಗೆ ಬೆರೆಯುವಂತೆ ಉಜ್ಜಬೇಕು.
ನಂತರ ಇದನ್ನು ಅನ್ನದೊಂದಿಗೆ ಕಲಸಿ ತಿನ್ನುವುದಕ್ಕೆ ಬಹಳ ರುಚಿಯಾಗಿರುತ್ತದೆ.
- ದಿಢೀರ್ ಅಡುಗೆ ಬಯಸುವವರಿಗೆ ಇದು ಹೇಳಿ ಮಾಡಿಸಿದ ಅಡುಗೆ. ಸಿಟ್ರಿಕ್ ಅಂಶವಿರುವುದರಿಂದ ರಸ ಹಿಂಡಿದ ನಂತರ ಆ ಸಿಪ್ಪೆಯನ್ನು ನೀವು ತಾಮ್ರದ ಪಾತ್ರೆ ತೊಳೆಯುವುದಕ್ಕೆ, ಬೆಳ್ಳಿಯ ಪಾತ್ರೆಗಳನ್ನು ಸ್ವಚ್ಛಗೊಳಿಸುವುದಕ್ಕೆ ಬಳಕೆ ಮಾಡಬಹುದು.
- ಫೈಬರ್ - 2.8 ಗ್ರಾಂ
- ಸಕ್ಕರೆ - 1.69 ಗ್ರಾಂ
- ಫೋಲೇಟ್ - 8 mcg



Click it and Unblock the Notifications