For Quick Alerts
ALLOW NOTIFICATIONS  
For Daily Alerts

ಸ್ಪೆಷಲ್ ಆಗಿ ಮಾರ್ನಿಂಗ್ ಗೆ ಹೀರೆಕಾಯಿ ದೋಸೆ ರೆಸಿಪಿ

Posted By:
|

ಹೀರೆಕಾಯಿಂದ ನಾವೆಲ್ಲರೂ ಸಾಮಾನ್ಯವಾಗಿ ಮಾಡೋದು, ಒಂದು ಪಲ್ಯ ಬಿಟ್ರೆ ಸಾಂಬಾರ್. ಆದ್ರೆ ಇದೇ ಹೀರೆಕಾಯಿಂದ ಬೆಳಗ್ಗಿನ ಬ್ರೇಕ್ ಫಾಸ್ಟ್ ಕೂಡ ಮಾಡಬಹುದು ಗೊತ್ತಾ? ಸಾಕಷ್ಟು ಪೋಷಕಾಂಶಗಳಿಂದ ಈ ತರಕಾರಿಯನ್ನ ಸೇರಿಸಿ, ನಿಮ್ಮ ಉಪಹಾರ ತಯಾರು ಮಾಡಿದರೆ, ಮಧ್ಯಾಹ್ನದವರೆಗೂ ಹೊಟ್ಟೆಗೆ ಮೋಸ ಆಗೋದಿಲ್ಲ. ಹಾಗಾದ್ರೆ ಈ ಹೀರೆಕಾಯಿಂದ ಏನ್ ಮಾಡ್ಬೋದಪ್ಪ ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ. ನಾವಿಂದು ನಿಮಗೆ ಬಿಸಿಬಿಸಿ ಹೀರೆಕಾಯಿ ದೋಸೆ ಹೇಗೆ ಮಾಡೋದು ಅನ್ನೋದನ್ನ ಹೇಳಿಕೊಡಲಿದ್ದೇವೆ.

ಸ್ಪೆಷಲ್ ಆಗಿ ಮಾರ್ನಿಂಗ್ ಗೆ ಹೀರೆಕಾಯಿ ದೋಸೆ ರೆಸಿಪಿ
ಸ್ಪೆಷಲ್ ಆಗಿ ಮಾರ್ನಿಂಗ್ ಗೆ ಹೀರೆಕಾಯಿ ದೋಸೆ ರೆಸಿಪಿ
Prep Time
10 Mins
Cook Time
30M
Total Time
40 Mins

Recipe By: Shreeraksha

Recipe Type: Vegetarian

Serves: 2

Ingredients
 • ಬೇಕಾಗುವ ಪದಾರ್ಥಗಳು:

  ಹೀರೆಕಾಯಿ

  1 ಕಪ್ ಅಕ್ಕಿ

  2 ಚಮಚ ಉದ್ದಿನ ಬೇಳೆ

  ½ ಟೀಸ್ಪೂನ್ ಮೆಂತ್ಯೆ

  7 ಒಣಮೆಣಸಿನಕಾಯಿ

  ½ ಕಪ್ ತೆಂಗಿನಕಾಯಿ

  2 ಚಮಚ ಕೊತ್ತಂಬರಿ

  1 ಚಮಚ ಜೀರಿಗೆ

  ¼ ಕಪ್ ಬೆಲ್ಲ

  ಸಣ್ಣ ಗಾತ್ರದ ಹುಣಸೆಹಣ್ಣು

  ಅರ್ಧ ಟೀಸ್ಪೂನ್ ಅರಿಶಿನ

  1 ಟೀಸ್ಪೂನ್ ಉಪ್ಪು

  ಎಣ್ಣೆ (ಹುರಿಯಲು)

Red Rice Kanda Poha
How to Prepare
 • ತಯಾರಿಸುವ ವಿಧಾನ:

  • ಮೊದಲನೆಯದಾಗಿ, ಒಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ, 2 ಚಮಚ ಉದ್ದಿನಬೇಳೆ, ½ ಟೀಸ್ಪೂನ್ ಮೆಂತ್ಯೆ ಮತ್ತು 7 ಒಣ ಕೆಂಪು ಮೆಣಸಿನಕಾಯಿಯನ್ನು ಹಾಕಿ 4 ಗಂಟೆಗಳ ಕಾಲ ನೆನೆಸಿಡಿ.
  • ನೆನದ ನಂತರ ಅದರ ನೀರನ್ನು ಬಸಿದು ಮಿಕ್ಸಿಗೆ ಹಾಕಿ, ಅದಕ್ಕೆ ½ ಕಪ್ ತೆಂಗಿನಕಾಯಿ, 2 ಚಮಚ ಕೊತ್ತಂಬರಿ ಬೀಜ ಮತ್ತು 1 ಚಮಚ ಜೀರಿಗೆ, ಬೆಲ್ಲ, ಹುಣಸೆಹಣ್ಣು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ, ಅಗತ್ಯವಿರುವಂತೆ ನೀರನ್ನು ಹಾಕಿ, ನೈಸ್ ಆಗಿ ರುಬ್ಬಿಕೊಳ್ಳಿ.
  • ಈ ಹಿಟ್ಟನ್ನು ದೊಡ್ಡ ಬಟ್ಟಲಿಗೆ ಹಾಕಿಕೊಳ್ಳಿ.
  • ಮತ್ತೊಂದು ಬದಿಯಲ್ಲಿ ಹೀರೆಕಾಯಿಯ ಸಿಪ್ಪೆ ತೆಗೆದು. ಸ್ಲೈಸ್ ರೀತಿ ಕತ್ತರಿಸಿ.
  • ಈಗ ಹಿರೇಕಾಯಿ ಸ್ಲೈಸ್ ಅನ್ನು ಹಿಟ್ಟಿನಲ್ಲಿ ಅದ್ದಿ, ತವಾದ ಮೇಲೆ ಹಾಕುತ್ತಾ, ಆ ಹೀರೆಕಾಯಿಯ ಹೋಳುಗಳನ್ನೇ ವೃತ್ತಾಕಾರವಾಗಿ ದೋಸೆಯಂತೆ ಇಡುತ್ತಾ ಬನ್ನಿ.
  • ತದನಂತರ, ಅದರ ಮೇಲೆ 1 ಚಮಚ ಎಣ್ಣೆ ಸೇರಿಸಿ, ದೋಸೆಯನ್ನು ಮುಚ್ಚಿ, ಮೀಡಿಯಂ ಫ್ಲೇಮ್ ನಲ್ಲಿ 2 ನಿಮಿಷ ಬೇಯಿಸಿ.
  • ಒಂದು ಬದಿ ಬೆಂದ ನಂತರ, ತಿರುಗಿಸಿ ಹಾಕು ಮತ್ತೆ ಬೇಯಿಸಿ. ದೋಸೆ ಸಂಪೂರ್ಣವಾಗಿ ಬೇಯುವವರೆಗೆ ಎರಡೂ ಬದಿ ಕಾಯಿಸಿ.
  • ಅಂತಿಮವಾಗಿ, ತೆಂಗಿನ ಎಣ್ಣೆ ಅಥವಾ ಬೆಣ್ಣೆಯೊಂದಿಗೆ ಹೀರೆಕಾಯಿ ದೋಸೆಯನ್ನು ಆನಂದಿಸಿ.

Instructions
Nutritional Information
 • People - 2
 • ಕ್ಯಾಲೋರಿಗಳು - 294 ಕೆ.ಸಿ.ಎಲ್
 • ಕೊಬ್ಬು - 5 ಗ್ರಾಂ
 • ಪ್ರೋಟೀನ್ - 6 ಗ್ರಾಂ
 • ಕಾರ್ಬೋಹೈಡ್ರೇಟ್ಗಳು - 57 ಗ್ರಾಂ
 • ಫೈಬರ್ - 4 ಗ್ರಾಂ
[ 3.5 of 5 - 45 Users]
Story first published: Tuesday, September 14, 2021, 9:00 [IST]
X