Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಸ್ಪೆಷಲ್ ಆಗಿ ಮಾರ್ನಿಂಗ್ ಗೆ ಹೀರೆಕಾಯಿ ದೋಸೆ ರೆಸಿಪಿ
Recipes
oi-Shreeraksha
Posted By: Shreeraksha
ಹೀರೆಕಾಯಿಂದ ನಾವೆಲ್ಲರೂ ಸಾಮಾನ್ಯವಾಗಿ ಮಾಡೋದು, ಒಂದು ಪಲ್ಯ ಬಿಟ್ರೆ ಸಾಂಬಾರ್. ಆದ್ರೆ ಇದೇ ಹೀರೆಕಾಯಿಂದ ಬೆಳಗ್ಗಿನ ಬ್ರೇಕ್ ಫಾಸ್ಟ್ ಕೂಡ ಮಾಡಬಹುದು ಗೊತ್ತಾ? ಸಾಕಷ್ಟು ಪೋಷಕಾಂಶಗಳಿಂದ ಈ ತರಕಾರಿಯನ್ನ ಸೇರಿಸಿ, ನಿಮ್ಮ ಉಪಹಾರ ತಯಾರು ಮಾಡಿದರೆ, ಮಧ್ಯಾಹ್ನದವರೆಗೂ ಹೊಟ್ಟೆಗೆ ಮೋಸ ಆಗೋದಿಲ್ಲ. ಹಾಗಾದ್ರೆ ಈ ಹೀರೆಕಾಯಿಂದ ಏನ್ ಮಾಡ್ಬೋದಪ್ಪ ಅಂತ ಯೋಚ್ನೆ ಮಾಡ್ತಾ ಇದ್ದೀರಾ? ಹಾಗಾದ್ರೆ ಈ ಸ್ಟೋರಿ ನೋಡಿ. ನಾವಿಂದು ನಿಮಗೆ ಬಿಸಿಬಿಸಿ ಹೀರೆಕಾಯಿ ದೋಸೆ ಹೇಗೆ ಮಾಡೋದು ಅನ್ನೋದನ್ನ ಹೇಳಿಕೊಡಲಿದ್ದೇವೆ.

ಸ್ಪೆಷಲ್ ಆಗಿ ಮಾರ್ನಿಂಗ್ ಗೆ ಹೀರೆಕಾಯಿ
ದೋಸೆ ರೆಸಿಪಿ
ಸ್ಪೆಷಲ್ ಆಗಿ ಮಾರ್ನಿಂಗ್ ಗೆ
ಹೀರೆಕಾಯಿ ದೋಸೆ ರೆಸಿಪಿ
Prep Time
10 Mins
Cook Time
30M
Total Time
40 Mins
Recipe By: Shreeraksha
Recipe Type: Vegetarian
Serves: 2
Ingredients
-
ಬೇಕಾಗುವ ಪದಾರ್ಥಗಳು:
ಹೀರೆಕಾಯಿ
1 ಕಪ್ ಅಕ್ಕಿ
2 ಚಮಚ ಉದ್ದಿನ ಬೇಳೆ
½ ಟೀಸ್ಪೂನ್ ಮೆಂತ್ಯೆ
7 ಒಣಮೆಣಸಿನಕಾಯಿ
½ ಕಪ್ ತೆಂಗಿನಕಾಯಿ
2 ಚಮಚ ಕೊತ್ತಂಬರಿ
1 ಚಮಚ ಜೀರಿಗೆ
¼ ಕಪ್ ಬೆಲ್ಲ
ಸಣ್ಣ ಗಾತ್ರದ ಹುಣಸೆಹಣ್ಣು
ಅರ್ಧ ಟೀಸ್ಪೂನ್ ಅರಿಶಿನ
1 ಟೀಸ್ಪೂನ್ ಉಪ್ಪು
ಎಣ್ಣೆ (ಹುರಿಯಲು)
How to Prepare
-
ತಯಾರಿಸುವ ವಿಧಾನ:
- ಮೊದಲನೆಯದಾಗಿ, ಒಂದು ದೊಡ್ಡ ಬಟ್ಟಲಿನಲ್ಲಿ 1 ಕಪ್ ಅಕ್ಕಿ, 2 ಚಮಚ ಉದ್ದಿನಬೇಳೆ, ½ ಟೀಸ್ಪೂನ್ ಮೆಂತ್ಯೆ ಮತ್ತು 7 ಒಣ ಕೆಂಪು ಮೆಣಸಿನಕಾಯಿಯನ್ನು ಹಾಕಿ 4 ಗಂಟೆಗಳ ಕಾಲ ನೆನೆಸಿಡಿ.
- ನೆನದ ನಂತರ ಅದರ ನೀರನ್ನು ಬಸಿದು ಮಿಕ್ಸಿಗೆ ಹಾಕಿ, ಅದಕ್ಕೆ ½ ಕಪ್ ತೆಂಗಿನಕಾಯಿ, 2 ಚಮಚ ಕೊತ್ತಂಬರಿ ಬೀಜ ಮತ್ತು 1 ಚಮಚ ಜೀರಿಗೆ, ಬೆಲ್ಲ, ಹುಣಸೆಹಣ್ಣು, ½ ಟೀಸ್ಪೂನ್ ಅರಿಶಿನ ಮತ್ತು 1 ಟೀಸ್ಪೂನ್ ಉಪ್ಪು ಸೇರಿಸಿ, ಅಗತ್ಯವಿರುವಂತೆ ನೀರನ್ನು ಹಾಕಿ, ನೈಸ್ ಆಗಿ ರುಬ್ಬಿಕೊಳ್ಳಿ.
- ಈ ಹಿಟ್ಟನ್ನು ದೊಡ್ಡ ಬಟ್ಟಲಿಗೆ ಹಾಕಿಕೊಳ್ಳಿ.
- ಮತ್ತೊಂದು ಬದಿಯಲ್ಲಿ ಹೀರೆಕಾಯಿಯ ಸಿಪ್ಪೆ ತೆಗೆದು. ಸ್ಲೈಸ್ ರೀತಿ ಕತ್ತರಿಸಿ.
- ಈಗ ಹಿರೇಕಾಯಿ ಸ್ಲೈಸ್ ಅನ್ನು ಹಿಟ್ಟಿನಲ್ಲಿ ಅದ್ದಿ, ತವಾದ ಮೇಲೆ ಹಾಕುತ್ತಾ, ಆ ಹೀರೆಕಾಯಿಯ ಹೋಳುಗಳನ್ನೇ ವೃತ್ತಾಕಾರವಾಗಿ ದೋಸೆಯಂತೆ ಇಡುತ್ತಾ ಬನ್ನಿ.
- ತದನಂತರ, ಅದರ ಮೇಲೆ 1 ಚಮಚ ಎಣ್ಣೆ ಸೇರಿಸಿ, ದೋಸೆಯನ್ನು ಮುಚ್ಚಿ, ಮೀಡಿಯಂ ಫ್ಲೇಮ್ ನಲ್ಲಿ 2 ನಿಮಿಷ ಬೇಯಿಸಿ.
- ಒಂದು ಬದಿ ಬೆಂದ ನಂತರ, ತಿರುಗಿಸಿ ಹಾಕು ಮತ್ತೆ ಬೇಯಿಸಿ. ದೋಸೆ ಸಂಪೂರ್ಣವಾಗಿ ಬೇಯುವವರೆಗೆ ಎರಡೂ ಬದಿ ಕಾಯಿಸಿ.
- ಅಂತಿಮವಾಗಿ, ತೆಂಗಿನ ಎಣ್ಣೆ ಅಥವಾ ಬೆಣ್ಣೆಯೊಂದಿಗೆ ಹೀರೆಕಾಯಿ ದೋಸೆಯನ್ನು ಆನಂದಿಸಿ.
Instructions
Nutritional Information
- People - 2
- ಕ್ಯಾಲೋರಿಗಳು - 294 ಕೆ.ಸಿ.ಎಲ್
- ಕೊಬ್ಬು - 5 ಗ್ರಾಂ
- ಪ್ರೋಟೀನ್ - 6 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 57 ಗ್ರಾಂ
- ಫೈಬರ್ - 4 ಗ್ರಾಂ
Comments
[ 3.5 of 5 - 45 Users]
Story first published: Tuesday, September 14, 2021, 9:00 [IST]
Other articles published on Sep 14, 2021



Click it and Unblock the Notifications
