Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಕೆಮ್ಮ, ಶೀತಾ, ಕಫಕ್ಕೆ ರಾಮಬಾಣ ಅಜ್ಜಿ ಮಾಡಿದ ಸ್ಪೆಷಲ್ ಕಷಾಯ !
ಇತ್ತೀಚಿಗೆ ಈ ಜ್ವರ, ಶೀತಾ, ಕೆಮ್ಮು ಹೇಳಿ ಕೇಳಿ ಬರೋದಿಲ್ಲ. ಯಾವಾಗ ಬೇಕಾದ್ರು ಜನರನ್ನು ವಕ್ಕರಿಸಿ ಬಿಡುತ್ತೆ. ಇವುಗಳು ಒಂದು ಸಾರಿ ಜನರ ಬೆನ್ನು ಹತ್ತಿ ಬಿಟ್ರೆ ಜಪ್ಪಯ್ಯ ಅಂದ್ರು ಹೋಗೋದೇ ಇಲ್ಲ. ಇಂತಹ ಸಂದರ್ಭದಲ್ಲಿ ಖಡಕ್ ಕಷಾಯ ಕುಡಿದ್ರೆ ಯಾವ ಡಾಕ್ಟರ್ ಬೇಡ. ಈ ಕೆಮ್ಮು, ಶೀತ, ಕಫಾ ಎಲ್ಲಾ ಇದ್ದಕ್ಕಿದ್ದಂತೆ ಮಾಯವಾಗಿ ಬಿಡುತ್ತೆ.

ಆ ದಿನ ರಾತ್ರಿ ನನಗೆ ಕಣ್ಣು ತೆರೆಯಲು ಕಷ್ಟ ಆಗಿತ್ತು. ಏಕೆಂದರೆ ಜ್ವರ ನನ್ನನ್ನು ಅಷ್ಟರ ಮಟ್ಟಿಗೆ ಭಾದಿಸಿತ್ತು. ಮಾರನೇ ದಿನ ಡಾಕ್ಟರ್ ಬಳಿ ಹೋಗಿ ವಾಪಾಸ್ ಬಂದ ಮೇಲೆ ಜ್ವರ ಏನೋ ಕಡಿಮೆಯಾಗಿತ್ತು. ಆದರೆ ಕೆಮ್ಮು, ಕಫಾ ನನ್ನನ್ನು ಬಿಡದೇ ಕಾಡಿತ್ತು. ಆಗ ನನ್ನಜ್ಜಿ ಲೋಟದಲ್ಲಿ ಅದೇನೋ ತಂದು ಕೊಟ್ಟು ಕಣ್ಣು ಮುಚ್ಚಿ ಕುಡಿ ಅಂತ ಹೇಳಿದ್ರು. ಅಯ್ಯೋ ಆ ಅನುಭವ ಕಷ್ಟ ಕಷ್ಟ. ಆದ್ರೆ 5-6 ಬಾರಿ ಈ ಕಷಾಯ ಕುಡಿದ ಮೇಲೆ ಕೆಮ್ಮು ಹಾಗೂ ಕಫದ ಸಮಸ್ಯೆ ಸಂಪೂರ್ಣವಾಗಿ ಮಾಯವಾಗಿತ್ತು.
Recipe By: Shwetha Kumari
Recipe Type: Veg
Serves: 2
-
ಬೇಕಾಗುವ ಸಾಮಾಗ್ರಗಳು
- ಒಣ ಶುಂಠಿ- 1 ಇಂಚು (ಮಧ್ಯಮ ಗಾತ್ರ)
- ಕೇಸರಿ ಕಲ್ಲು ಸಕ್ಕರೆ - ರುಚಿಗೆ ತಕ್ಕಷ್ಟು
- ಸಂಬರ ಬಳ್ಳಿ ಅಥವಾ ದೊಡ್ಡಪತ್ರೆ(ಸಂಬರಬಳ್ಳಿ ಕಷಾಯ ಮಾಡುವಾಗ ನಮಗೆ ಸಿಗದ ಕಾರಣ ಬಳಸಿಲ್ಲ. ಆದರೆ ಇದನ್ನು ಬಳಸಿದರೆ ಉತ್ತಮ) - 3-4 ಎಲೆ
- ತುಳಸಿ - 5-6 ಎಲೆ
- ಕರಿಮೆಣಸು ಹುಡಿ - 1 ಚಮಚ
- ನೀರು - 1.5 ವರೆ ಗ್ಲಾಸ್
-
ಮಾಡುವ ವಿಧಾನ
* ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರನ್ನು ಬಿಸಿಯಾಗಲು ಇಡಿ
* ಈಗ ಒಣ ಶುಂಠಿಯನ್ನು ಕಲ್ಲಿನಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ
* ಮೊದಲಿಗೆ ಕುಟ್ಟಿದ ಒಣಶುಂಠಿ, ಕೇಸರಿ ಕಲ್ಲು ಸಕ್ಕರೆ, ಕರಿಮೆಣಸು ಪುಡಿ, ದೊಡ್ಡ ಪತ್ರೆ ಎಲೆ, ತುಳಸಿ ಎಲೆಯನ್ನು ನೀರಿಗೆ ಸೇರಿಸಿ
* ಕಫ ಕರಗಲು ಕೇಸರಿ ಕಲ್ಲು ಸಕ್ಕರೆ ಉತ್ತಮ ಹೀಗಾಗಿ ಸಾಧ್ಯವಾದಷ್ಟು ಇದನ್ನೇ ಬಳಸಿ
*ಈಗ ಎಲ್ಲವನ್ನು ಹಾಕಿ ಸರಿ ಸುಮಾರು 15 ನಿಮಿಷ ಕುದಿಯಲು ಬಿಡಿ
* ಕುದಿದ ಮೇಲೆ ಇಳಿಸಿ ನಂತರ ಅದನ್ನು ಸೋಸಿ ಒಂದು ಗ್ಲಾಸ್‌ಗೆ ಹಾಕಿಕೊಳ್ಳಿ
* ಬಿಸಿ ಬಿಸಿ ಇರುವಾಗಲೇ ಈ ಕಷಾಯವನ್ನು ಕುಡಿಯಿರಿ
ಕೆಮ್ಮು, ಕಫಾ, ಶೀತ ಇರುವಾಗ ಪ್ರತಿನಿತ್ಯ ಎರಡು ಬಾರಿ ಇದನ್ನು ಕುಡಿದರೆ ಸಾಮಾನ್ಯವಾಗಿ 3-4 ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.
- ಇದಕ್ಕೆ ನೀವು ಸ್ವಲ್ಪ ಜೇನು ಕೂಡ ಸೇರಿಸಿ ಕುಡಿಯಬಹುದು
- People - 2
ಮಾಡುವ ವಿಧಾನ

* ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರನ್ನು ಬಿಸಿಯಾಗಲು ಇಡಿ

* ಈಗ ಒಣ ಶುಂಠಿಯನ್ನು ಕಲ್ಲಿನಲ್ಲಿ ಚೆನ್ನಾಗಿ ಕುಟ್ಟಿ ಪುಡಿ ಮಾಡಿ

* ಮೊದಲಿಗೆ ಕುಟ್ಟಿದ ಒಣಶುಂಠಿ, ಕೇಸರಿ ಕಲ್ಲು ಸಕ್ಕರೆ, ಕರಿಮೆಣಸು ಪುಡಿ, ದೊಡ್ಡ ಪತ್ರೆ ಎಲೆ, ತುಳಸಿ ಎಲೆಯನ್ನು ನೀರಿಗೆ ಸೇರಿಸಿ

* ಕಫ ಕರಗಲು ಕೇಸರಿ ಕಲ್ಲು ಸಕ್ಕರೆ ಉತ್ತಮ ಹೀಗಾಗಿ ಸಾಧ್ಯವಾದಷ್ಟು ಇದನ್ನೇ ಬಳಸಿ

*ಈಗ ಎಲ್ಲವನ್ನು ಹಾಕಿ ಸರಿ ಸುಮಾರು 15 ನಿಮಿಷ ಕುದಿಯಲು ಬಿಡಿ

* ಕುದಿದ ಮೇಲೆ ಇಳಿಸಿ ನಂತರ ಅದನ್ನು ಸೋಸಿ ಒಂದು ಗ್ಲಾಸ್‌ಗೆ ಹಾಕಿಕೊಳ್ಳಿ

* ಬಿಸಿ ಬಿಸಿ ಇರುವಾಗಲೇ ಈ ಕಷಾಯವನ್ನು ಕುಡಿಯಿರಿ
ಕೆಮ್ಮು, ಕಫಾ, ಶೀತ ಇರುವಾಗ ಪ್ರತಿನಿತ್ಯ ಎರಡು ಬಾರಿ ಇದನ್ನು ಕುಡಿದರೆ ಸಾಮಾನ್ಯವಾಗಿ 3-4 ದಿನಗಳಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.

Click it and Unblock the Notifications