Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಗೋಬಿ ಪಲ್ಯ ಹೀಗೆ ಮಾಡಿದರೆ ರುಚಿಯೋ ರುಚಿ
ಬೆಳ್ಳಗೆ ಹೂವಿನಂತೆ ಕಂಗೊಳಿಸುವ ಅಧ್ಬುತ ತರಕಾರಿ ಗೋಬಿ ಅಥವಾ ಹೂಕೋಸು. ಗೋಬಿ ಅಂದ್ರೆ ಮಂಚೂರಿ ಅಂತ ಎಲ್ಲರಿಗೂ ನೆನಪಾಗುತ್ತದೆ. ಆದರೆ ಮಂಚೂರಿ ಹೊರತು ಪಡಿಸಿ ಅನೇಕ ಅಡುಗೆಯಲ್ಲಿ ಗೋಬಿ ಬಳಸಬಹುದು. ಬಾಯಿಗೆ ಮಜವೆನಿಸುವ,ಹೊಟ್ಟೆಗೆ ಹಿತವೆನಿಸುವ ತರಕಾರಿ ಗೋಬಿ.

ಕಾಲಿಫ್ಲವರ್ ಎಂದು ಇಂಗ್ಲೀಷಿನಲ್ಲಿ ಕರೆಯಲಾಗುವ ಈ ತರಕಾರಿ ಇದೀಗ ಎಲ್ಲಾ ಮಾರುಕಟ್ಟೆಯಲ್ಲಿಯೂ ಲಭ್ಯವಿರುತ್ತದೆ. ಒಮ್ಮೊಮ್ಮೆ ದುಬಾರಿ, ಒಮ್ಮೊಮ್ಮೆ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರುತ್ತದೆ. ವಿಭಿನ್ನ ತರಕಾರಿಗಳ ಪ್ರಯೋಗ ಮಾಡುತ್ತಾ, ಅಡುಗೆ ಮನೆಯಲ್ಲಿ ಅಡುಗೆಯೊಂದಿಗೆ ಆಟವಾಡುವ ಮಹಿಳೆಯರಿಗೆ ಖಂಡಿತ ಗೋಬಿ ಪ್ರಯೋಗ ಶಾಲೆಯ ಫೇವರೆಟ್ ತರಕಾರಿಯಾಗಿರುತ್ತದೆ.
ನಾವೂ ಇಲ್ಲಿ ನಿಮ್ಮ ಪ್ರಯೋಗಕ್ಕೆ ಸಾಥ್ ನೀಡಲು ಹೊಸ ಅಡುಗೆಯೊಂದನ್ನು ಪರಿಚಯಿಸುತ್ತಿದ್ದೇವೆ. ಗೋಬಿ ಸಬ್ಜಿಯನ್ನು ವಿವಿಧ ರೀತಿಯಲ್ಲಿ ತಯಾರಿಸಬಹುದು. ನಾವಿಲ್ಲಿ ಅಂತಹದ್ದೆ ಅಧ್ಬುತ ರುಚಿ ಕೊಡುವ ವಿಧಾನವೊಂದನ್ನು ತಿಳಿಸುತ್ತಿದ್ದೇವೆ. ಒಮ್ಮೆ ಗೋಬಿ ಸಬ್ಜಿಯನ್ನು ಹೀಗೆ ಮಾಡಿ ನೋಡಿ. ಫಟಾಫಟ್ ತಯಾರಿಸಬಹುದಾದ ವಿಧಾನ ಇದಾಗಿದ್ದು ನಿಮಗೆ ಖಂಡಿತ ಇಷ್ಟವಾಗುತ್ತದೆ.
Recipe By: Sushma Chatra
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
ಗೋಬಿ - ಮಧ್ಯಮ ಗಾತ್ರದ ಒಂದು
ಟೊಮೆಟೋ- ನಾಲ್ಕರಿಂದ ಐದು
ಶುಂಠಿ - ಒಂದು ಸಣ್ಣ ತುಂಡು
ಬೆಳ್ಳುಳ್ಳಿ - ನಾಲ್ಕರಿಂದ ಐದು ಎಸಳು
ಗರಂ ಮಸಾಲೆ - ಎರಡು ಚಮಚ
ಕೆಂಪು ಬ್ಯಾಡಗಿ ಮೆಣಸು - ಏಳರಿಂದ ಎಂಟು
ಜೀರಿಗೆ - ಒಂದು ಸ್ಪೂನ್
ಹಾಲಿನ ಕೆನೆ - ಒಂದು ಲೋಟ
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಬೀಜಗಳು ಅಥವಾ ದನಿಯಾ- ಒಂದು ಸ್ಪೂನ್
ಇಂಗು - ಒಂದು ಹುಣಸೆ ಬೀಜದ ಗಾತ್ರದಷ್ಟು
ಅರಿಶಿನ- ಅರ್ಧ ಸ್ಪೂನ್
ಅಡುಗೆ ಎಣ್ಣೆ- ನಾಲ್ಕರಿಂದ ಐದು ಸ್ಪೂನ್
-
{recipe}ಮಾಡುವ ವಿಧಾನ -
ಗೋಬಿಯನ್ನು ಸಣ್ಣ ತುಂಡುಗಳನ್ನಾಗಿ ಮಾಡಿ ಉಪ್ಪು ಮಿಶ್ರಿತ ಅರಿಶಿನದ ಪುಡಿ ಹಾಕಿರುವ ನೀರಿನಲ್ಲಿ ಒಂದು ಘಂಟೆಗಳ ಕಾಲ ನೆನಪಿಡಿ. ಹೀಗೆ ಮಾಡುವುದರಿಂದ ಗೋಬಿಗೆ ಬಳಸಲಾಗಿರುವ ಕೆಮಿಕಲ್ ಗಳು ಮತ್ತು ಅದರಲ್ಲಿರುವ ಹುಳಗಳನ್ನು ತೆಗೆಯುವುದಕ್ಕೆ ಸಾಧ್ಯವಾಗುತ್ತದೆ.
ನಂತರ ನೀರನ್ನು ಸೋಸಿ ಗೋಬಿಯನ್ನು ಶುದ್ಧವಾದ ನೀರಿನಲ್ಲಿ ತೊಳೆದು ರೆಡಿ ಮಾಡಿಕೊಳ್ಳಿ.
ಮಿಕ್ಸಿ ಪಾತ್ರೆಗೆ ಹೆಚ್ಚಿದ ಟೊಮೆಟೊ, ಬೆಳ್ಳುಳ್ಳಿ, ಶುಂಠಿ, ಅರಿಶಿನದ ಪುಡಿ, ಕೆಂಪು ಬ್ಯಾಡಗಿ ಮೆಣಸು, ಕೊತ್ತುಂಬರಿ ಬೀಜಗಳು, ಅರ್ಧ ಸ್ಪೂನ್ ಜೀರಿಗೆ, ಇಂಗು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಬಾಣಲೆಯಲ್ಲಿ ನಾಲ್ಕೈದು ಸ್ಪೂನ್ ಎಣ್ಣೆ ಹಾಕಿ ಅರ್ಧ ಸ್ಪೂನ್ ಜೀರಿಗೆ ಹಾಕಿ. ಕರಿಬೇವು ಅಥವಾ ಕರಿಬೇವಿನ ಪುಡಿ ಇದ್ದರೆ ಹಾಕಿ. ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕುದಿಸಿ. ಹಸಿ ವಾಸನೆ ಹೋಗುವವರೆಗೂ ಕುದಿಸಿ. ಎಣ್ಣೆಯಂಶ ಬಿಟ್ಟುಕೊಳ್ಳುತ್ತದೆ.
ಆಗ ರೆಡಿ ಮಾಡಿಟ್ಟುಕೊಂಡ ಗೋಬಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಗರಂ ಮಸಾಲೆ ಪುಡಿ ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
ಕೆಲವೇ ನಿಮಿಷಕ್ಕೆ ಗೋಬಿ ಸಂಪೂರ್ಣ ನೀರು ಬಿಟ್ಟುಕೊಳ್ಳುತ್ತದೆ. ಹಾಗಾಗಿ ಹೆಚ್ಚುವರಿ ನೀರನ್ನು ಸೇರಿಸುವ ಅಗತ್ಯವಿರುವುದಿಲ್ಲ.
ಸಬ್ಜಿಯನ್ನು ಮುಚ್ಚಿಟ್ಟರೆ ಗೋಬಿ ಚೆನ್ನಾಗಿ ಬೇಯುತ್ತದೆ ಮತ್ತು ನೀರಿನಂಶ ಆರುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಸಬ್ಜಿಯಲ್ಲಿ ನೀರು ಬೇಡವೆಂದುಕೊಳ್ಳುವವರು ಸಬ್ಜಿಗೆ ಬೇಯುತ್ತಿರುವಾಗ ಮುಚ್ಚಿಡಬೇಡಿ.
ಇನ್ನೇನು ಗೋಬಿ ಬೆಂದಿದೆ ಎನ್ನುವಾಗ ಹಾಲಿನ ಕೆನೆಯನ್ನು ಸೇರಿಸಿ. (ಅಂಗಡಿಯಿಂದ ತರುವ ಪ್ರಿಸರ್ವೇಟಿವ್ ಹಾಕಿರುವ ಕ್ರೀಮ್ ಬಳಸುವುದಕ್ಕಿಂತ ಹಾಲಿನ ಕೆನೆ ಆರೋಗ್ಯಕ್ಕೆ ಬಹಳ ಒಳ್ಳೆಯದು). ಹಾಲಿನ ಕೆನೆಯೂ ಕೂಡ ಅಧ್ಬುತ ರುಚಿ ನೀಡುತ್ತದೆ.
ರುಚಿರುಚಿ ಗೋಬಿ ಸಬ್ಜಿ ಸಿದ್ಧ. ಚಪಾತಿ, ರೊಟ್ಟಿಗೆ ಅಧ್ಬುತವಾಗಿರುತ್ತದೆ. ಸೈಡ್ಸ್ ಆಗಿ ಊಟದಲ್ಲೂ ಬಳಕೆ ಮಾಡಬಹುದು.
- ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಯಲ್ಲಿ ಹೂಕೋಸು ಕೂಡ ಒಂದು.ಇದು ತೂಕ ಇಳಿಸುವುದಕ್ಕೆ ಸಹಕಾರಿಯಾಗಿದ್ದು ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಅನೇಕ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುವ ಸಾಮರ್ಥ್ಯವನ್ನು ಹೊಂದಿದೆ.ಫೈಬರ್ ಅಧಿಕವಾಗಿರುವ ಈ ತರಕಾರಿಯು ನಿಮ್ಮ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ವೃದ್ಧಿಸಿ ಮಲಬದ್ಧತೆ ಸೇರಿದಂತೆ ಅನೇಕ ರೀತಿಯ ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ.ಆಂಟಿ ಆಕ್ಸಿಡೆಂಟ್ ಗಳು ಇದರಲ್ಲಿ ಹೇರಳವಾಗಿದ್ದು ತೂಕ ಇಳಿಕೆಗೆ ಸಹಕರಿಸುತ್ತದೆ.
- ಸರ್ವ್ - 4
- ಕ್ಯಾಲೋರಿ - 25ಕ್ಯಾ
- ಪ್ರೊಟೀನ್ - 1.9 g
- ಕಾರ್ಬೋಹೈಡ್ರೇಟ್ - 5 g



Click it and Unblock the Notifications
