For Quick Alerts
ALLOW NOTIFICATIONS  
For Daily Alerts

ಔದುಂಬರ ಎಲೆಗಳ ತಂಬುಳಿ ತಿಂದರೆ ಆರೋಗ್ಯಕ್ಕೆ ಅನೇಕ ಬಳುವಳಿ

Posted By:
|

ಔದುಂಬರ ವೃಕ್ಷ ಅಥವಾ ಅತ್ತಿ ಎಲೆಗಳ ಹೆಸರನ್ನು ನೀವು ಕೇಳಿರಬಹುದು. ದೇವರ ಪೂಜಾ ಕೈಂಕರ್ಯಗಳಲ್ಲಿ ಸಮಿತ್ತಾಗಿ ಇದನ್ನು ಬಳಕೆ ಮಾಡುತ್ತಾರೆ. ಹಾಗಂತ ಇದು ಕೇವಲ ದೇವರ ಕಾರ್ಯಕ್ಕೆ ಮಾತ್ರವೇ ಸೀಮಿತವಲ್ಲ. ಬದಲಾಗಿ ಸದಾ ಹಸಿರಾಗಿರುವ ಈ ಮರವು ಔಷಧಿಗಳ ಆಗರ. ಮರದಲ್ಲಿರುವ ಎಲೆಗಳನ್ನು ಕೀಳುವುದು ಸ್ವಲ್ಪ ಕಷ್ಟವಾಗಬಹುದು. ಆದರೆ ಅಲ್ಲಲ್ಲಿ ಈ ವೃಕ್ಷದ ಚಿಗುರೆಲೆಗಳು ಹುಟ್ಟಿಕೊಂಡಿರುತ್ತದೆ. ಎಲೆಗಳನ್ನು ಕಿತ್ತಾಗ ಬಿಳಿಯ ವರ್ಣದ ದ್ರಾವಣ ದಂಟಿನಿಂದ ಹೊರಬರುತ್ತದೆ. ಇದು ಅತ್ತಿ ಗಿಡದ ವಿಶೇಷತೆ. ಔದುಂಬರ ವೃಕ್ಷವನ್ನು ಇಂಗ್ಲೀಷ್ ನಲ್ಲಿ ಫಿಗ್ ಟ್ರೀ ಎಂತಲೂ ಕರೆಯುತ್ತಾರೆ.

ಹಳ್ಳಿಗಳಲ್ಲಿ ಸದಾ ಲಭ್ಯವಿರುವ ಈ ಚಿಗುರೆಲೆಗಳು ಮಾರುಕಟ್ಟೆಯಲ್ಲಿ ಸಿಗುವುದು ಸ್ವಲ್ಪ ಅಪರೂಪವೇ ಆಗಿದೆ. ಹಲವು ಔಷಧೀಯ ಗುಣಗಳನ್ನು ಹೊಂದಿರುವ ಔದುಂಬರ ವೃಕ್ಷದ ಎಲೆಗಳಿಂದ ರುಚಿರುಚಿಯಾದ ಅಡುಗೆಯನ್ನೂ ಮಾಡಬಹುದು. ಮಲೆನಾಡು ಭಾಗದ ಮಂದಿ ಆಗಾಗ ಈ ಅಡುಗೆಯನ್ನು ಮಾಡುತ್ತಾರೆ. ಅಂತಹ ಒಂದು ರುಚಿರುಚಿಯಾದ ರೆಸಿಪಿ ಔದುಂಬರ ಎಲೆಯ ತಂಬುಳಿ ಮಾಡುವ ವಿಧಾನವನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಮಾಡುವುದು ಹೇಗೆ ಎಂಬುದು ಮಾತ್ರವಲ್ಲ ಬದಲಾಗಿ ಈ ರೆಸಿಪಿಯ ಸೇವನೆಯಿಂದ ನೀವು ಏನೆಲ್ಲಾ ಆರೋಗ್ಯ ಲಾಭಗಳನ್ನು ಪಡೆಯಬಹುದು ಎಂಬ ಬಗ್ಗೆಯೂ ಕೂಡ ತಿಳಿಸಿಕೊಡುತ್ತೇವೆ.

fig leaf tambuli
Fig Leaf Tambuli Recipe And Its Benefits |ಔದುಂಬರ ಎಲೆಗಳ ತಂಬುಳಿ ತಿಂದರೆ ಆರೋಗ್ಯಕ್ಕೆ ಅನೇಕ ಬಳುವಳಿ
Fig Leaf Tambuli Recipe And Its Benefits |ಔದುಂಬರ ಎಲೆಗಳ ತಂಬುಳಿ ತಿಂದರೆ ಆರೋಗ್ಯಕ್ಕೆ ಅನೇಕ ಬಳುವಳಿ
Prep Time
5 Mins
Cook Time
5M
Total Time
10 Mins

Recipe By: Sushma chatra

Recipe Type: Sides

Serves: 4

Ingredients
  • ರುಚಿಕರವಾದ ಅತ್ತಿ ಎಲೆ ತಂಬುಳಿ ಆರೋಗ್ಯದ ಜತೆಗೆ ನಾಲಿಗೆಗೂ ರುಚಿಯನ್ನು ನೀಡುತ್ತದೆ. ಮೊದಲಿಗೆ ಅತ್ತಿ ಎಲೆಯ ತಂಬುಳಿ ಮಾಡುವುದಕ್ಕೆ ಬೇಕಾಗುವ ಸಾಮಗ್ರಿಗಳ ಪಟ್ಟಿಯನ್ನು ನೋಡೋಣ.

    1. ಅತ್ತಿ ಮರದ ಚಿಗುರೆಲೆಗಳು - 20 ರಿಂದ 30

    2. ಕಾಳುಮೆಣಸು - ಮೂರರಿಂದ ನಾಲ್ಕು ಕಾಳು

    3. ಜೀರಿಗೆ - ಕಾಲು ಟೀ ಸ್ಪೂನ್

    4. ಬಿಳಿ ಎಳ್ಳು - ಕಾಲು ಟೀ ಸ್ಪೂನ್

    5. ಬೆಲ್ಲ - 50 ಗ್ರಾಂ

    6. ಬೆಣ್ಣೆ ಅಥವಾ ತುಪ್ಪ - ಮೂರು ಟೇಬಲ್ ಸ್ಪೂನ್

    7. ಬ್ಯಾಡಗಿ ಮೆಣಸು - 2

    8. ಕಡೆದ ಮಜ್ಜಿಗೆ - ಅರ್ಧ ಲೀಟರ್

    9. ಉಪ್ಪು - ರುಚಿಗೆ ತಕ್ಕಷ್ಟು

    10. ತೆಂಗಿನ ತುರಿ- ಅರ್ಧ ಕಪ್ (ಬಳಸದೇ ಇದ್ದರೂ ಆದೀತು)

Red Rice Kanda Poha
How to Prepare
    • ಒಂದು ಸ್ಪೂನ್ ತುಪ್ಪಕ್ಕೆ ಚಿಟಿಕೆ ಜೀರಿಗೆ ಮತ್ತು ಎಳ್ಳು ಹಾಕಿ ಹುರಿಯಿರಿ
    • ಸ್ವಲ್ಪ ಬಣ್ಣ ಬದಲಾಗುತ್ತಿದ್ದಂತೆ ಕಾಳುಮೆಣಸು ಹಾಕಿ ನಂತರ ಸಣ್ಣಗೆ ಹೆಚ್ಚಿದ ಅತ್ತಿಎಲೆ ಅಥವಾ ಔದುಂಬರದ ಎಲೆಗಳನ್ನು ಹಾಕಿ ಬಾಡಿಸಿ
    • ನಂತರ ಇದನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.(ತೆಂಗಿನ ತುರಿ ಬಳಸಲು ಇಚ್ಛಿಸುವವರು ಅದನ್ನೂ ಸೇರಿಸಿ ರುಬ್ಬಿ ಮತ್ತು ರುಬ್ಬಿದ ನಂತರ ಸೋಸಿಕೊಳ್ಳಿ)
    • ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲ, ಕಡೆದ ಮಜ್ಜಿಗೆಯನ್ನು ಸೇರಿಸಿ
    • ನಂತರ ತುಪ್ಪ ಅಥವಾ ಬೆಣ್ಣೆಗೆ ಜೀರಿಗೆ, ಬ್ಯಾಡಗಿ ಮೆಣಸು ಹಾಕಿ ಒಗ್ಗರಣೆ ಮಾಡಿದರೆ ರುಚಿರುಚಿಯಾದ ತಂಬುಳಿ ಸಿದ್ಧವಾಗುತ್ತದೆ
    • ಖಾರದ ತಂಬುಳಿ ಇಷ್ಟಪಡುವವರು ಹಸಿಮೆಣಸನ್ನು ರುಬ್ಬುವಾಗ ಹಾಕಿಕೊಂಡು ಬೆಲ್ಲ ಸೇರಿಸದೆಯೂ ತಂಬುಳಿ ಮಾಡಿಕೊಳ್ಳಬಹುದು. ಬಿಸಿಬಿಸಿ ಅನ್ನದ ಜೊತೆಗೆ ಕಲಸಿ ಉಣ್ಣುವುದಕ್ಕೆ ಬಹಳ ರುಚಿಯಾಗಿರುತ್ತದೆ.
Instructions
  • ಒಗ್ಗರಣೆ ಮಾಡದೆ ಸಿಹಿಸಿಹಿಯಾದ ಪಾನಕದಂತೆಯೂ ಕೂಡ ಇದನ್ನು ಸೇವನೆ ಮಾಡಬಹುದು. ಈ ರೆಸಿಪಿ ತಯಾರಿಕೆಗೆ ಹೆಚ್ಚು ಸಮಯವೂ ಬೇಕಾಗುವುದಿಲ್ಲ. ಹೆಚ್ಚೆಂದರೆ 8 ರಿಂದ 10 ನಿಮಿಷದಲ್ಲಿ ತಂಬುಳಿ ಸಿದ್ಧಪಡಿಸಿ ಬಿಡಬಹುದು. ಕೆಲಸಕ್ಕೆ ಹೋಗುವ ಮಹಿಳೆಯರು ಇಂತಹ ಅಡುಗೆಗಳನ್ನು ಕಲಿತರೆ ಬೇಗಬೇಗ ಅಡುಗೆ ಕೆಲಸ ಮುಗಿಸುವುದಕ್ಕೆ ಅನುಕೂಲವಾಗುತ್ತದೆ.
Nutritional Information

ಮಾಡುವ ವಿಧಾನ

ಮೊದಲಿಗೆ ಒಂದು ಸ್ಪೂನ್ ತುಪ್ಪಕ್ಕೆ ಚಿಟಿಕೆ ಜೀರಿಗೆ ಮತ್ತು ಎಳ್ಳು ಹಾಕಿ ಹುರಿಯಿರಿ

ಸ್ವಲ್ಪ ಬಣ್ಣ ಬದಲಾಗುತ್ತಿದ್ದಂತೆ ಕಾಳುಮೆಣಸು ಹಾಕಿ ನಂತರ ಸಣ್ಣಗೆ ಹೆಚ್ಚಿದ ಅತ್ತಿಎಲೆ ಅಥವಾ ಔದುಂಬರದ ಎಲೆಗಳನ್ನು ಹಾಕಿ ಬಾಡಿಸಿ

fig leaf tambuli

ನಂತರ ಇದನ್ನು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.(ತೆಂಗಿನ ತುರಿ ಬಳಸಲು ಇಚ್ಛಿಸುವವರು ಅದನ್ನೂ ಸೇರಿಸಿ ರುಬ್ಬಿ ಮತ್ತು ರುಬ್ಬಿದ ನಂತರ ಸೋಸಿಕೊಳ್ಳಿ. ಸೋಸದೆ ಹಾಗೆಯೂ ಬಳಸಬಹುದು. ಆದರೆ ಸ್ವಲ್ಪ ತಂಬುಳಿ ಜರಿಜರಿ ಅನ್ನಿಸಬಹುದು.)

fig leaf tambuli

ರುಬ್ಬಿದ ಮಿಶ್ರಣಕ್ಕೆ ಉಪ್ಪು, ಬೆಲ್ಲ, ಕಡೆದ ಮಜ್ಜಿಗೆಯನ್ನು ಸೇರಿಸಿ

fig leaf tambuli

ನಂತರ ತುಪ್ಪ ಅಥವಾ ಬೆಣ್ಣೆಗೆ ಜೀರಿಗೆ, ಬ್ಯಾಡಗಿ ಮೆಣಸು ಹಾಕಿ ಒಗ್ಗರಣೆ ಮಾಡಿದರೆ ರುಚಿರುಚಿಯಾದ ತಂಬುಳಿ ಸಿದ್ಧವಾಗುತ್ತದೆ

fig leaf tambuli

ಖಾರದ ತಂಬುಳಿ ಇಷ್ಟಪಡುವವರು ಹಸಿಮೆಣಸನ್ನು ರುಬ್ಬುವಾಗ ಹಾಕಿಕೊಂಡು ಬೆಲ್ಲ ಸೇರಿಸದೆಯೂ ತಂಬುಳಿ ಮಾಡಿಕೊಳ್ಳಬಹುದು. ಬಿಸಿಬಿಸಿ ಅನ್ನದ ಜೊತೆಗೆ ಕಲಸಿ ಉಣ್ಣುವುದಕ್ಕೆ ಬಹಳ ರುಚಿಯಾಗಿರುತ್ತದೆ.

ಉಪಯೋಗಗಳು

• ಬಾಯಿ ಹುಣ್ಣಿನ ನಿವಾರಣೆಗೆ ಈ ತಂಬುಳಿ ಸೇವಿಸಬಹುದು
• ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಆಗಾಗ ಈ ತಂಬುಳಿ ಮಾಡಿ ಸೇವಿಸಿ ನೋಡಿ
• ಬಾಯಿಯ ದುರ್ವಾಸನೆ ನಿವಾರಣೆಗೆ ಇದು ಸಹಕಾರಿ
• ಬಾಣಂತಿಯವರಿಗೆ ಅತ್ತಿ ಎಲೆಯ ತಂಬುಳಿ ನೀಡುವುದರಿಂದ ಎದೆಹಾಲು ಹೆಚ್ಚಿಸಬಹುದು
• ಮೂಲವ್ಯಾಧಿ ಸಮಸ್ಯೆ ಇರುವವರು ಅತ್ತಿಕುಡಿ ತಂಬುಳಿ ಸೇವಿಸುವುದರಿಂದಾಗಿ ಸಮಸ್ಯೆ ನಿವಾರಣೆಯಾಗುತ್ತದೆ
• ಬೇಸಿಗೆಯಲ್ಲಿ ಈ ತಂಬುಳಿ ಸೇವನೆಯಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿ ಇಡಬಹುದು
• ಅತಿಯಾದ ಬಾಯಾರಿಕೆ ಆಗಿರುವಾಗ ಈ ತಂಬುಳಿ ಸೇವಿಸಿದರೆ ಬಾಯಾರಿಕೆ ತಣಿಯುತ್ತದೆ. ಪದೇ ಪದೇ ಬಾಯಾರಿಕೆ ಆಗುವುದು ನಿಲ್ಲುತ್ತದೆ
• ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ವಾರಕ್ಕೆ ಒಂದು ದಿನವಾದರೂ ಇದನ್ನು ಸೇವಿಸುವುದರಿಂದಾಗಿ ತಮ್ಮ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಡಬಹುದು

[ 4 of 5 - 70 Users]
X
Desktop Bottom Promotion