Latest Updates
-
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್! -
ದೆಹಲಿಯಲ್ಲಿ ಡೆಂಗ್ಯೂ ಭೀತಿ: ನಿಮ್ಮ ಮನೆಯನ್ನು ಸೊಳ್ಳೆ ಮುಕ್ತವಾಗಿಸಲು 20 ನಿಮಿಷಗಳ ಈ ಚೆಕ್ಲಿಸ್ಟ್ ಬಳಸಿ -
ಹಬ್ಬದ ಸೀಸನ್ನಲ್ಲಿ ಎಚ್ಚರ! ಕಲಬೆರಕೆ ಸಿಹಿತಿಂಡಿ ಪತ್ತೆ ಹಚ್ಚುವುದು ಹೇಗೆ? ಆರೋಗ್ಯಕರ ಟಿಪ್ಸ್ ಇಲ್ಲಿದೆ -
ನವರಾತ್ರಿ 4ನೇ ದಿನ: ರಾಯಲ್ ಬ್ಲೂ ಡ್ರೆಸ್ ಕೋಡ್ನಲ್ಲಿ ಮಿಂಚಲು ಇಲ್ಲಿದೆ ಸಿಂಪಲ್ ಸ್ಟೈಲಿಂಗ್ ಟಿಪ್ಸ್!
ಮಳೆಗಾಲವನ್ನು ಎಂಜಾಯ್ ಮಾಡಲು ಕೆಸುವಿನ ಸೊಪ್ಪಿನ ರೊಟ್ಟಿ ರೆಸಿಪಿ
ಮಳೆಗಾಲ ಇನ್ನೇನು ಸನಿಹಿಸುತ್ತಿದೆ. ಮಳೆಗಾಲದಲ್ಲಿ ಬೆಚ್ಚಗಿನ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಹಸಿರು ಸೊಪ್ಪುಗಳ ಸೇವನೆಯಿಂದ ವಿಟಮಿನ್, ಪ್ರೋಟೀನ್ ಗಳು ಸಿಗುತ್ತವೆ ಎಂಬುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರವೇ.
ಇನ್ನು ಮಳೆಗಾಲದಲ್ಲೇ ಎತ್ತೇಚ್ಛವಾಗಿ ಲಭ್ಯವಾಗುವ ಕೆಲವು ಸೊಪ್ಪುಗಳಿವೆ. ಅದ್ರಲ್ಲೂ ಪ್ರಮುಖವಾಗಿ ಕೆಸುವಿನ ಸೊಪ್ಪು ಮಳೆಗಾಲದಲ್ಲಿ ಹೇರಳವಾಗಿ ಸಿಗುತ್ತದೆ. ನೀರಿನ ಲಭ್ಯತೆ ಹೆಚ್ಚಿರುವ ಪ್ರದೇಶದಲ್ಲಿ ಕೆಸು ಹುಲುಸಾಗಿ ಬೆಳೆಯುತ್ತದೆ.

ಮಳೆಬಂದರೂ ನಾನು ಒದ್ದೆಯಾಗಲ್ಲ. ನಾನ್ಯಾರು ಎಂದು ಹೇಳಿ ಎಂಬ ಒಗಟು ಕೆಸುವಿನ ಸೊಪ್ಪಿನ ಬಗೆಗೆ ಭಾರೀ ಪ್ರಚಲಿತದಲ್ಲಿದೆ. ಕೆಸುವಿನ ಎಲೆಗಳ ಮೇಲೆ ನೀರು ಬಿದ್ದರೂ ಕೂಡ ಅದು ಒದ್ದೆಯಾಗುವುದಿಲ್ಲ. ನೀರಿನ ಹನಿಗಳು ಎಲೆಗಳನ್ನು ತೋಯಿಸುವುದೇ ಇಲ್ಲ.
ಹಾಗಾಗಿ ಈ ಒಗಟು ಬಳಕೆಗೆ ಬಂದಿದೆ. ಕೆಸುವಿನ ಸೊಪ್ಪನ್ನು ಇಂಗ್ಲೀಷಿನಲ್ಲಿ ಎಲೆಫೆಂಟ್ಸ್ ಇಯರ್ ಲೀಫ್ ಎಂದೂ ಕೂಡ ಕರೆಯಲಾಗುತ್ತದೆ. ಕೆಸುವಿನ ಎಲೆಗಳ ಗಾತ್ರ ಆನೆಯ ಕಿವಿಯಂತೆಯೇ ಇರುವುದರಿಂದಾಗಿ ಈ ಹೆಸರು ಬಂದಿರಬಹುದೆಂದು ಊಹಿಸಬಹುದು. ಇನ್ನು ಹಿಂದಿಯಲ್ಲಿ “ಅರ್ಬಿ ಪತ್ತೆ”ಎಂದು ಕೂಡ ಹೇಳಲಾಗುತ್ತದೆ. ಇನ್ನು ಟಾರೋ ಲೀವ್ಸ್ ಎಂದು ಕೂಡ ಕರೆಯಲಾಗುತ್ತದೆ.
ಕರಾವಳಿ ಪ್ರದೇಶದ ಮಂದಿಗೆ ಕೆಸುವಿನ ಸೊಪ್ಪು ಬಹಳ ನೆಚ್ಚಿನ ಸೊಪ್ಪುಗಳಲ್ಲಿ ಒಂದೆನಿಸಿದೆ. ಇದರಿಂದ ಗೊಜ್ಜು,ಪತ್ರೊಡೆ,ಪಲ್ಯ ಸೇರಿದಂತೆ ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ನಾವಿಲ್ಲಿ ಕೆಸುವಿನ ಸೊಪ್ಪಿನಿಂದ ರೊಟ್ಟಿ ತಯಾರಿಸುವುದು ಹೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
Recipe By: Sushma
Recipe Type: Veg
Serves: 4
-
ಬೇಕಾಗುವ ಸಾಮಗ್ರಿಗಳು
ಕೆಸುವಿನ ಸೊಪ್ಪು - ಮಧ್ಯಮ ಗಾತ್ರದ 5 ಎಲೆಗಳು
ಅಕ್ಕಿ - ಅರ್ಧ ಕೆಜಿ
ಕೊತ್ತುಂಬರಿ ಬೀಜಗಳು- ಒಂದು ಚಮಚ
ಮೆಂತ್ಯೆ- ಅರ್ಧ ಸ್ಪೂನ್
ಉದ್ದಿನ ಬೇಳೆ- ಐದು ಸ್ಪೂನ್
ಜೀರಿಗೆ -ಅರ್ಧ ಚಮಚ
ಕೆಂಪು ಮೆಣಸು - 6 ರಿಂದ 7
ಅರಿಶಿನ- ಚಿಟಿಕೆ
ಉಪ್ಪು- ರುಚಿಗೆ ತಕ್ಕಷ್ಟು
ಹುಣಸೆಹಣ್ಣು - ಎರಡು ಗೋಲಿಗಾತ್ರ
ಬೆಲ್ಲ- ನಾಲ್ಕು ಗೋಲಿಗಾತ್ರ
ಈರುಳ್ಳಿ- ಮೂರು
ಬೆಳ್ಳುಳ್ಳಿ - 4 ರಿಂದ 5(optional)
-
ಮಾಡುವ ವಿಧಾನ -
ಅಕ್ಕಿಯನ್ನು ಎರಡು ಘಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
ಕೆಸುವಿನ ಸೊಪ್ಪನ್ನು ಮತ್ತು ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಬೆಳ್ಳುಳ್ಳಿ ಇಷ್ಟಪಡುವವರು ಬೆಳ್ಳುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು.
ಉದ್ದಿನಬೇಳೆ,ಮೆಂತ್ಯೆಯನ್ನು ಕೆಂಪಗೆ ಹುರಿದುಕೊಳ್ಳಿ. ಅದಕ್ಕೆ ಕೊತ್ತುಂಬರಿ ಬೀಜಗಳು, ಜೀರಿಗೆ, ಕೆಂಪುಮೆಣಸು ಸೇರಿಸಿ ಹುರಿಯಿರಿ.
ನೆನಸಿದ ಅಕ್ಕಿ,ಬೆಲ್ಲ, ಚಿಟಿಕೆ ಅರಿಶಿನ,ಹುಣಸೆ ಹಣ್ಣು ಮತ್ತು ಈ ಮೇಲಿನ ಹಂತದಲ್ಲಿ ಹುರಿದ ಕೊಂಡ ಮಿಶ್ರಣವನ್ನು ಸೇರಿಸಿ ಒಂದು ಲೋಟ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ತೀರಾ ಚಪಾತಿ ಹಿಟ್ಟಿನಂತೆ ಗಟ್ಟಿಯೂ ಅಲ್ಲ, ದೋಸೆ ಹಿಟ್ಟಿನಂತೆ ತೆಳುವೂ ಅಲ್ಲದಂತೆ ಮಿಶ್ರಣ ತಯಾರಿಸಿಕೊಳ್ಳಿ.
ರುಬ್ಬಿಕೊಂಡ ಮಿಶ್ರಣಕ್ಕೆ ಕೆಸುವಿನ ಸೊಪ್ಪು,ಈರುಳ್ಳಿ,ಬೆಳ್ಳುಳ್ಳಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ.
ಐದು ನಿಮಿಷ ನೆನೆಯಲು ಬಿಡಿ.
ನಂತರ ಬಾಳೆಎಲೆಯ ಮೇಲೆ ತೆಳುವಾಗಿ ಹಚ್ಚಿ ಕಾವಲಿಯ ಮೇಲಿಟ್ಟು ಬೇಯಿಸಬಹುದು ಅಥವಾ ನೇರವಾಗಿ ಕಾದ ಕಾವಲಿಗೆ ರೊಟ್ಟಿಯಂತೆ ತೆಳುವಾಗಿ ಹಚ್ಚಿಯೂ ಬೇಯಿಸಬಹುದು.
ಬೆಣ್ಣೆಯ ಜೊತೆ ಸವಿಯಲು ಇದು ರುಚಿಯಾಗಿರುತ್ತದೆ.
- ಕೆಸುವಿನ ಸೊಪ್ಪು ದೇಹಕ್ಕೆ ಉಷ್ಣ. ಮಳೆಗಾಲದ ಥಂಡಿ ಹೊಡೆಯುವುದಕ್ಕೆ ಇದು ಪ್ರಯೋಜನಕಾರಿ. ಹಸಿ ಎಲೆಯನ್ನು ವಿಷಕಾರಿ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಕೆಸುವಿನಲ್ಲಿ ಅನೇಕ ಜಾತಿಗಳಿದ್ದು ಎಲ್ಲಾ ಕೆಸುವಿನ ಎಲೆಗಳನ್ನು ಅಡುಗೆಗೆ ಬಳಸಲಾಗುವುದಿಲ್ಲ. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಯೋಜನಕಾರಿಯಾಗಿರುವ ಎಲೆಯಾಗಿದೆ. ಅಷ್ಟೇ ಅಲ್ಲ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.ತೂಕ ಇಳಿಸುವುದಕ್ಕೂ ಕೂಡ ಉಪಯೋಗಿಸಬಹುದು. ಭ್ರೂಣದ ಮೆದುಳು ಮತ್ತು ನರವ್ಯೂಹದ ಬೆಳವಣಿಗೆಗೆ ಇದು ಸಹಕರಿಸುತ್ತದೆ. ಆದರೆ ಬಸುರಿ ಮಹಿಳೆಯರು ಅತಿಯಾಗಿ ತಿನ್ನಬಾರದು ಎಂದು ಕೂಡ ಹೇಳಲಾಗುತ್ತದೆ.ಅನೀಮಿಯಾ ಮತ್ತು ಚರ್ಮದ ನೆರಿಗೆಗಳನ್ನು ಕಡಿಮೆ ಮಾಡುವುದಕ್ಕೂ ಇದು ಪ್ರಯೋಜನಕಾರಿ. ಇದರಲ್ಲಿರುವ ಅಮೈನೋ ಆಸಿಡ್ ಅಂಶವು ಪುರುಷರ ವೀರ್ಯಾಣುಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
- ಕ್ಯಾಲೋರಿ - 35
- ವಿಟಮಿನ್ ಸಿ: - 57%
- ಪ್ರೋಟೀನ್: - 4 ಗ್ರಾಂಗಳು
- ಕಾರ್ಬೋಹೈಡ್ರೇಟ್ಸ್: - 6 ಗ್ರಾಂಗಳು
- ಫೈಬರ್: - 3 ಗ್ರಾಂಗಳು



Click it and Unblock the Notifications
