Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಬೇಸಿಗೆಗಾಗಿ ತಂಪಾದ ಮಟ್ಕಾ ಲಸ್ಸಿ ರೆಸಿಪಿ!
ಬೇಸಿಗೆಯ ಬಿಸಿಯನ್ನು ಶಮನಗೊಳಿಸುವ ಲಸ್ಸಿಯನ್ನು ಭಾರತದಾದ್ಯಂತ ಹೆಚ್ಚಾಗಿ ತಯಾರಿಸುತ್ತಾರೆ. ಲಸ್ಸಿಯು ದೇಹದ ಉಷ್ಣವನ್ನು ನಿವಾರಿಸಿ ತಂಪನ್ನು ನೀಡುತ್ತದೆ. ಮನೆಯಲ್ಲೇ ತಯಾರಿಸಬಹುದಾದ ಹಲವಾರು ವಿಧದ ಲಸ್ಸಿ ಪ್ರಕಾರಗಳಿವೆ.
ಸಾಂಪ್ರದಾಯಿಕ ಲಸ್ಸಿಯಿಂದ ಹಿಡಿದು ಸುವಾಸನೆಯುಕ್ತ ಲಸ್ಸಿಯನ್ನು ನಿಮಗೆ ಮನೆಯಲ್ಲೇ ತಯಾರಿಸಬಹುದು. ಮಾವು, ಚಾಕಲೇಟ್, ಲಿಟ್ಚಿ, ಬಾಳೆಹಣ್ಣು ಮೊದಲಾದ ಹಣ್ಣುಗಳನ್ನು ಸೇರಿಸಿ ಬೇಸಿಗೆ ಸೀಸನ್‌ನ ರುಚಿಯಾದ ಲಸ್ಸಿಯನ್ನು ನಿಮಗೆ ಮಾಡಿಕೊಳ್ಳಬಹುದು.

ಕೇವಲ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಈ ಲಸ್ಸಿ ರೆಸಿಪಿ ಬೇಸಿಗೆಯಲ್ಲಿ ತಂಪನ್ನು ನೀಡುವುದರೊಂದಿಗೆ ಆರೋಗ್ಯಕ್ಕೂ ಉತ್ತಮವಾಗಿದೆ. ಮಡಿಕೆಯಲ್ಲಿ ಲಸ್ಸಿ ತಯಾರಿಸಿ ಸರಬರಾಜು ಮಾಡುವುದು ವಾಡಿಕೆ. ಇದುವೇ ಮಟ್ಕಾ ಲಸ್ಸಿ.
ಮಟ್ಕಾ ಲಸ್ಸಿಯಂತೂ ಉತ್ತರ ಭಾರತದಲ್ಲಿ ಜನಪ್ರಿಯವಾಗಿದ್ದು ವಿಶೇಸವಾಗಿ ರಾಜಸ್ತಾನ, ದೆಹಲಿ ಮತ್ತು ಪಂಜಾಬ್‌ನಲ್ಲಿ ಮಟ್ಕಾ ಲಸ್ಸಿಗೆ ಉತ್ತಮ ಬೇಡಿಕೆ ಇದೆ. ಇಂದಿನ ಲೇಖನ ಮಟ್ಕಾ ಲಸ್ಸಿಯ ತಯಾರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ಬೇಸಿಗೆಯ ಬೇಗೆಯನ್ನು ನಿವಾರಿಸುವ ಮಟ್ಕಾ ಲಸ್ಸಿಯನ್ನು ತಯಾರಿಸಿ ಆಸ್ವಾದಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಲೆಮನ್ ಜ್ಯೂಸ್ ಹೀಗೆ ಮಾಡಿದರೆ ರುಚಿ ಹೆಚ್ಚು
ಪ್ರಮಾಣ: 2
ಸಿದ್ಧತಾ ಸಮಯ : 10 ನಿಮಿಷಗಳು
ಸಾಮಾಗ್ರಿಗಳು
1. ಮೊಸರು - 1 ಕಪ್
2.ಸಕ್ಕರೆ - 3 ಸ್ಪೂನ್
3.ರೋಸ್‌ವಾಟರ್ - 2 ಹನಿಗಳು
4.ಏಲಕ್ಕಿ ಹುಡಿ - ಸ್ವಲ್ಪ
5.ಕೇಸರಿ - ಕೆಲವು ಬೇರುಗಳು
6.ತಾಜಾ ದಪ್ಪನೆಯ ಕ್ರೀಂ - 1 ಸ್ಪೂನ್
7. ನೀರು - 1/2 ಕಪ್
8.ಐಸ್ ತುಂಡುಗಳು - 3-4
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತಂಪಾದ ಲಸ್ಸಿಯ ಆರೋಗ್ಯಕಾರಿ ಪ್ರಯೋಜನಗಳು
ಮಾಡುವ ವಿಧಾನ:
1.ಮೊಸರನ್ನು ಒಂದು ಪಾತ್ರೆಗೆ ಹಾಕಿ ಅದನ್ನು ಚೆನ್ನಾಗಿ ಕಲಸಿ ಕ್ರೀಮಿಯನ್ನಾಗಿ ಮಾಡಿ. ಮೊಸರನ್ನು ಅರಿಸಿಕೊಳ್ಳಿ. ಚೆನ್ನಾಗಿ ಹಿಂಡಿ ಅರಿಸಿದ ಮೊಸರನ್ನು ಪಾತ್ರೆಗೆ ಹಾಕಿ.
2.ನೀರು ಮತ್ತು ರೋಸ್ ವಾಟರ್ ಬೆರೆಸಿ. ಮಿಶ್ರ ಮಾಡಿಕೊಂಡು ಸಕ್ಕರೆ ಹಾಕಿ.
3.ಸಕ್ಕರೆ ಕರಗುವವರೆಗೆ ಚೆನ್ನಾಗಿ ಕಲಸುತ್ತಿರಿ. ನೀವು ಅವಸರದಲ್ಲಿದ್ದರೆ ನೀರು ಹಾಗೂ ಸಕ್ಕರೆ ಬೆರೆಸಿ ಅರಿಸಿಕೊಂಡ ಮೊಸರನ್ನು ಮಿಕ್ಸಿಯಲ್ಲಿ ಕಡೆಯಿರಿ.
4.ಇದೀಗ ಲಸ್ಸಿಯನ್ನು ಚೆನ್ನಾಗಿ ಕಲಸಿ. ನಂತರ ಅದನ್ನು ಮಡಿಕೆಗೆ ವರ್ಗಾಯಿಸಿ.
ಮಟ್ಕಾ ಲಸ್ಸಿ ಸವಿಯಲು ಸಿದ್ಧವಾಗಿದೆ. ಏಲಕ್ಕಿ ಹುಡಿ, ಬಾದಾಮಿ ಮತ್ತು ಕೇಸರಿ ದಳಗಳಿಂದ ಅಲಂಕರಿಸಿ. ನಿಮಗೆ ಬೇಕಿದ್ದಲ್ಲಿ ಕೇಸರಿ ದಳಗಳನ್ನು ಹಾಲಿನಲ್ಲಿ 10 -15 ನಿಮಿಷಗಳ ಕಾಲ ನೆನೆಸಿ ಮೊಸರನ್ನು ಮಿಕ್ಸಿಯಲ್ಲಿ ಕಡೆಯುವಾಗ ಸೇರಿಸಿಕೊಳ್ಳಬಹುದು.



Click it and Unblock the Notifications
