Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಚುಮು ಚುಮು ಚಳಿಗೆ ಬಿಸಿ ಬಿಸಿ ಕಷಾಯ...
ಚಳಿಗಾಳಿ ಬೀಸತೊಡಗಿದೆ. ರಗ್ಗಿನೊಳಗೆ ಮತ್ತಷ್ಟು ಹೊತ್ತು ಹುದುಗಿ ಮಲಗುವ ಆಸೆ ಯಾರನ್ನೂ ಹೊರ ಬಿಡುತ್ತಿಲ್ಲ. ಹೀಗಿರುವಾಗ ಬಿಸಿ ಬಿಸಿ ಕಾಫಿ ಕುಡಿಯುವ ಮನಸಾಗುವುದು ಸಹಜ. ಆದರೆ ಕಾಫಿ, ಟೀ ನಮ್ಮ ದೇಹಕ್ಕೆ ಎಷ್ಟು ಆರೋಗ್ಯಕರವಾ ಎನ್ನುವುದು ಪ್ರಶ್ನೆ. ಗೂಗಲ್ ಮಾಡಿದರೆ ನಿಮಗೆ ಕಾಫಿಯ ಸತತ ಸೇವನೆಯಿಂದಾಗುವ ಅಡ್ಡ ಪರಿಣಾಮಗಳ ದೊಡ್ಡ ಲಿಸ್ಟೇ ಸಿಗುವುದು. ಹೀಗಿರುವಾಗ ಚಳಿಯನ್ನೋಡಿಸುವ, ರುಚಿಕರವಾಗಿರುವ ಜೊತೆಗೆ ಆರೋಗ್ಯಕರವೂ ಆಗಿರುವ ಪೇಯವೊಂದರ ಅಗತ್ಯತೆ ಚೆನ್ನಾಗಿ ಅರಿವಾಗುತ್ತದೆ.
ನಮ್ಮಲ್ಲಿ ಅಂದರೆ ಶಿರಸಿಯ ಕಡೆ ಯಾರೇ ಬರಲಿ.. "ಒಂದು ಕುಡ್ತೆ ಕಷಾಯ"ವನ್ನಾದರೂ ಕೊಟ್ಟೇ ಕಳಿಸುವುದು ವಾಡಿಕೆ. ಊಟದ ಸಮಯವೇ ಆಗಿರಲಿ, ಇಲ್ಲಾ

ಮೊದಲಿಗೆ ಕಷಾಯದ ಹುಡಿಯನ್ನು ಮಾಡುವ ವಿಧಾನ
ಬೇಕಾಗುವ ಸಾಮಗ್ರಿಗಳು :
1. ಕೊತ್ತುಂಬರಿ ಬೀಜ - 1/2 ಲೋಟ
2. ಜೀರಿಗೆ - 1 ಲೋಟ
3. ದಾಲ್ಚೀನಿ ಚಕ್ಕೆ - ಹೆಬ್ಬೆರಳಿನ ಗಾತ್ರದಷ್ಟು
4. ಲವಂಗ - 5-6
5. ಏಲಕ್ಕಿ - 5-6 (ಸಿಪ್ಪೆ ಸಹಿತ)
6. ಕರಿ ಮೆಣಸಿನ ಕಾಳು - 6
7. ಬಡೇ ಸೊಪ್ಪು (ಸೋಂಪು) - ಒಂದು ಮುಷ್ಟಿ.
(ಮೇಲೆ ಹೇಳಿರುವ ಲೋಟ, ಹೋಟೇಲಿನಲ್ಲಿ ಕಾಫಿ ಕುಡಿಯಲು ಕೊಡುವಷ್ಟು ಸಣ್ಣ ಲೋಟವೂ ಅಲ್ಲ, ಹಳ್ಳಿಯಲ್ಲಿ ಆತಿಥ್ಯಮಾಡುವಾಗ ಕೊಡುವಷ್ಟು ದೊಡ್ಡದೂ ಅಲ್ಲ. ಮಧ್ಯಮ ಗಾತ್ರದ್ದು...:)
ಹುಡಿ ಮಾಡುವ ವಿಧಾನ :
* ಮೊದಲಿಗೆ ಜೀರಿಗೆ + ಲವಂಗ + ಏಲಕ್ಕಿ + ದಾಲ್ಚೀನಿ + ಕರಿ ಮೆಣಸಿನ ಕಾಳುಗಳು ಎಲ್ಲವನ್ನೂ ಒಂದು ಚೆನ್ನಾಗಿ ಒಣಗಿದ ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯಬೇಕು. (* ನೆನಪಿಡಿ ಎಣ್ಣೆಯನ್ನು ಹಾಕಿ ಹುರಿಯುವುದಲ್ಲ.) ಸುಮಾರು ಐದು ನಿಮಿಷದೊಳಗೇ ಕೆಂಪಗೆ ಹುರಿದು ಅದರ ಘಮ ಘಮ ಪರಿಮಳ ನಿಮ್ಮನ್ನಡರುವುದು.
* ಹಾಗೆ ಹುರಿದ ಪದಾರ್ಥಗಳನ್ನು, ಒಣಗಿದ ಮಿಕ್ಸಿಯಲ್ಲಿ ಹಾಕಿಡಿ. ತದನಂತರ ಅದೇ ಬಾಣಲೆಗೆ ಕುತ್ತಂಬರಿ ಬೀಜವನ್ನು ಹಾಕಿ ಮೊದಲಿನಂತೇ ಚೆನ್ನಾಗಿ ಹುರಿಯಿರಿ. ಕೇವಲ 2 ನಿಮಿಷದೊಳಗೆ ಕೆಂಪಗೆ ಹುರಿದು ಬರುತ್ತದೆ. ಅದನ್ನೂ ಮಿಕ್ಸಿಯಲ್ಲಿ ಮೊದಲೇ ಹಾಕಿಟ್ಟಿದ್ದ ಮಿಶ್ರಣಕ್ಕೆ ಹಾಕಿಕೊಳ್ಳಿ.
* ನಂತರ ಮತ್ತೆ ಅದೇ ಬಾಣಲೆಯಲ್ಲಿ ಸೋಂಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ಇದೂ ಸಹ ಕೂಡಲೇ ಒಂದೆರಡು ನಿಮಿಷಗಳೊಳಗೇ ಹುರಿದುಬರುತ್ತದೆ.
* ಕೊನೆಯಲ್ಲಿ ಎಲ್ಲಾ ಮಿಶ್ರಣವನ್ನೂ ಒಟ್ಟಿಗೇ ಸೇರಿಸಿ, ಮಿಕ್ಸಿಯಲ್ಲಿ ನುಣ್ಣಗೆ ಹುಡಿಮಾಡಿ, ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಟ್ಟರೆ ಘಮ ಘಮಿಸುವ ಕಷಾಯದ ಹುಡಿ ಉಪಯೋಗಕ್ಕೆ ಸಿದ್ಧ.
ಕಷಾಯ ಪೇಯವನ್ನು ಮಾಡುವ ವಿಧಾನ
ಇದು ಬಹಳ ಸುಲಭ. ಒಂದು ಕಪ್ ಅಳತೆಯಲ್ಲಿ ಹೇಳುವುದಾದರೆ ...
ಮೊದಲು ಅರ್ಧ ಲೊಟ ನೀರಿಗೆ ಒಂದು ಚಮಚ ಮೊದಲೇ ಮಾಡಿಟ್ಟಿದ್ದ ಕಷಾಯದ ಹುಡಿಯನ್ನು ಹಾಕಿ ಕುದಿಸಿ. ಕುದಿ ಬರುತ್ತಿದೆ ಎನ್ನುವಾಗಲೇ ಅರ್ಧ ಲೋಟ ಹಾಲು (ಬೇಕಿದ್ದರೆ ಹಾಲು ಹಾಕದೆಯೋ ಇಲ್ಲಾ ಸ್ವಲ್ಪವೇ ಹಾಲನ್ನು ಹಾಕಿಯೋ ಮಾಡಬಹುದು) ಹಾಕಿ ಬಿಸಿ ಮಾಡಿದರೆ ಕಷಾಯ ರೆಡಿ. ಸಿಹಿ ಬೇಕಿದ್ದವರು ಒಂದು ಚಮಚ ಸಕ್ಕರೆ ಹಾಕಿ ಸೇವಿಸಬಹುದು. ಇನ್ನು ಮಕ್ಕಳಿಗೆ ಬರೀ ಹಾಲಿನಲ್ಲೇ ಕಷಾಯವನ್ನು ಮಾಡಿ ಕೊಟ್ಟರೆ ಮತ್ತೂ ಉತ್ತಮ. (ನೀರನ್ನು ತೀರಾ ಕಡಿಮೆ ಹಾಕಿಯೋ ಇಲ್ಲಾ ಹಾಕದೆಯೂ..).
ಕಷಾಯ ಕುಡಿಯುವುದರಿಂದ ಆಗುವ ಉಪಯೋಗಗಳು
1. ಯಾವುದೇ ರೀತಿಯ ಅಡ್ಡ ಪರಿಣಾಮಗಳುಂಟಾಗದು. ಯಾವ ಹೊತ್ತಿನಲ್ಲೂ ಎಷ್ಟು ಬೇಕಿದ್ದರೂ ಕುಡಿಯಬಹುದು.
2. ಕಫ, ಗಂಟಲು ನೋವು, ಅಜೀರ್ಣದ ತೊಂದರೆ - ಈ ಎಲ್ಲಾ ಸಮಸ್ಯೆಗಳಿಗೂ ಇದು ಉತ್ತಮ ಪರಿಹಾರವಾಗಿದೆ.
3. ಪಿತ್ತದ ಸಮಸ್ಯೆ ಇದ್ದವರು ಟೀ, ಕಾಫಿಯನ್ನು ಸೇವಿಸಲೇ ಬಾರದೆನ್ನುತ್ತಾರೆ ವೈದ್ಯರು. ಹಾಗಿರುವಾಗ ಈ ಪೇಯ ಅತ್ಯುತ್ತಮ ಬದಲಿಯಾಗಿದೆ.
4. ಒಮ್ಮೆ ಈ ಕಷಾಯದ ರುಚಿ ಹತ್ತಿದವರು ಮತ್ತೊಮ್ಮೆ ಯಾವುದೇ ಕೆಫೆಯ ಕಡೆಯೂ ಹೆಜ್ಜೆ ಹಾಕರು. (ಕೃಪೆ : ಒಗ್ಗರಣೆ)



Click it and Unblock the Notifications
