Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಚಳಿಗಾಲದ ಸಂಗಾತಿ ಸೋಯಾ ಸೂಪ್!
ಚಳಿಗಾಲದಲ್ಲಿ ಕಾಫಿ, ಟೀಗಿಂತಲೂ ಸೂಕ್ತವಾದ ಪಾನೀಯ ಸೂಪ್. ಅದರಲ್ಲೂ ಸೋಯಾ ಸೂಪ್ ಸವಿಯುವುದರಲ್ಲಿ ಇರುವ ಮಜಾನೇ ಬೇರೆ. ಸೋಯಾ ಒಳ್ಳೆಯ ಪೌಷ್ಟಿಕ ಆಹಾರವಾದ ಕಾರಣ ಅದರ ಬಳಕೆ ಈಗೀಗ ಅಧಿಕವಾಗುತ್ತಿದೆ. ಅನೇಕ ಮಂದಿ ತಮ್ಮ ಆಹಾರದಲ್ಲಿ ಸೋಯಾಗೂ ಸ್ಥಾನ ಕಲ್ಪಿಸುತ್ತಿದ್ದಾರೆ. ಇದರಲ್ಲಿ ಪ್ರೋಟೀನ್ ಅಂಶ ಪುಷ್ಕಳವಾಗಿದೆ. ಸೋಯಾ ಹಿಟ್ಟು, ಸೋಯಾ ಹಾಲು ಮಾತ್ರವಲ್ಲದೇ ಸೋಯಾಬೀನ್ಸ್ ಉಪಯೋಗಿಸಿ ವೈವಿಧ್ಯವಾದ ಹೊಸಹೊಸ ರುಚಿಗಳನ್ನು ಮಾಡಿ ಸವಿಯಬಹುದು. ಅವುಗಳಲ್ಲಿ ಸೋಯಾ ಸೂಪ್ ಸಹ ಒಂದು. ತಯಾರಿಸುವುದೂ ಸುಲಭ. ಪ್ರಯತ್ನಿಸಿ ನೋಡಿ.
- ರಮ್ಯಾ ನಾಗರಾಜ್, ಬೆಂಗಳೂರು
ಬೇಕಾಗುವ ಪದಾರ್ಥಗಳು:
ಸೋಯಾ: 200 ಗ್ರಾಂ
ಸೋಯಾ ಎಣ್ಣೆ: 1 ಟೇಬಲ್ ಚಮಚ
ಈರುಳ್ಳಿ: 2
ಕ್ಯಾರಟ್: 2
ಬೆಳ್ಳುಳ್ಳಿ ಎಸಳು: 2
ಮೆಣಸಿನ ಪುಡಿ: ಒಂದು ಚಿಟಿಕೆ
ಜೀರಿಗೆ: 1 ಟೀ ಚಮಚ
ಮೆಣಸು: 1 ಟೀ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು: ಅಲಂಕರಿಸಲು
ತಯಾರಿಸುವ ವಿಧಾನ:
ಸೋಯಾಬೀನ್ಸ್‌ನ್ನು ಒಂದು ದಿನ ಮುಂಚಿತವಾಗಿಯೇ ನೀರಿನಲ್ಲಿ ನೆನೆಸಿಕೊಳ್ಳಬೇಕು. ಮುಂದಿನ ದಿನ ಕುಕ್ಕರ್‌ನಲ್ಲಿ ಹಾಕಿ ಬೇಯಿಸಿಕೊಳ್ಳಬೇಕು. ಈಗ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಕ್ಯಾರಟ್ ಚೂರುಗಳು, ಬೆಳ್ಳುಳ್ಳಿಯನ್ನು ಹಾಕಿ ಬೇಯಿಸಿಕೊಳ್ಳಬೇಕು. ಚೆನ್ನಾಗಿ ಬೆಂದ ನಂತರ ಜೀರಿಗೆ ಪುಡಿಯನ್ನು ಹಾಕಬೇಕು. ಇದಕ್ಕೆ ಸರಿಹೋಗುವ ನೀರು ಹಾಕಿ ಕುದಿಯಲು ಬಿಡಿ.
ಹತ್ತು ನಿಮಿಷದ ಬಳಿಕ ಬೆಯಿಸಿದ ಸೋಯಾಬೀನ್ಸ್‌ನ್ನು ಈ ನೀರಿನಲ್ಲಿ ಬೆರಸಬೇಕು. ಕಾಲು ಗಂಟೆ ಬಿಟ್ಟು ಈ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಮಾಡಿಕೊಳ್ಳಬೇಕು. ನಂತರ ಮೆಣಸು, ಉಪ್ಪನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ಅಲಂಕಾರಕ್ಕಾಗಿ ಸೂಪ್ ಮೇಲೆ ಕೊತ್ತಂಬರಿ ಸೊಪ್ಪನ್ನು ಉದುರಿಸಿ. ಬೇಕಿದ್ದರೆ ಸ್ವಲ್ಪ ಬೆಣ್ಣೆಯನ್ನೂ ಬೆರೆಸಿಕೊಂಡು ಸವಿಯಬಹುದು.



Click it and Unblock the Notifications
