Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ವೆಜ್-ನಾನ್ ವೆಜ್ ಗೂಗಲ್ ಹೊಟೇಲ್ ಬಿಜಾಪುರ

ನೀವು ಎಂತೆಂಥದೋ ಹೋಟೆಲುಗಳಲ್ಲಿ ಊಟ ಮಾಡಿರಬಹುದು. ಫೈವ್ ಸ್ಟಾರ್, ಸಿಕ್ಸ್ ಸ್ಟಾರ್, ಸೆವೆನ್ ಸ್ಟಾರ್. ಆದರೆ ನೆಲಮಟ್ಟದ ಇಂಥ ಖಾನಾವಳಿಯಲ್ಲಿ ಊಟ ಮಾಡಿರಲಿಕ್ಕಿಲ್ಲ. ಅಂಥಿಂಥ ಹೋಟಲು ಇದಲ್ಲ, ಇಂಥ ಹೋಟೆಲು ಇನ್ನಿಲ್ಲ ! ಇದು ಬಿಜಾಪುರದಲ್ಲಿರುವ ಗೂಗಲ್ ಹೋಟೆಲಿಗೆ ನಾವು ಕೊಡುತ್ತಿರುವ ಪುಕ್ಕಟೆ ಜಾಹೀರಾತು.
ಸರ್ಚ್ ಇಂಜಿನ್ ಪಿತಾಮಹ ಗೂಗಲ್ ಕೂಡ ಒಂದು ದೊಡ್ಡ ಹೋಟೆಲು. ಎಷ್ಟೋ ಜನಕ್ಕೆ ಅನ್ನ ಹಾಕುವ ಕಾರ್ಖಾನೆ. ಅದನ್ನು ನಂಬಿ ಬದುಕು ನೂಕುವವರ ಸಂಖ್ಯೆಗೆ ಲೆಕ್ಕವೇ ಇಲ್ಲ.
ಅಸಲು ವಿಷಯವೆಂದರೆ ಗೂಗಲ್ ನಿಮಗೆ ಟ್ರಾಫಿಕ್ ತಂದುಕೊಡಬಹುದು. ಬಿಸಿನೆಸ್ ಅಭಿವೃದ್ಧಿಗೆ ನೆರವು ನೀಡಬಹುದು. ಆದರೆ ಅನ್ನ ಸಾರು ಪುಳಿಯೋಗರೆ ಪಲ್ಯ, ಚಿಕನ್ 65 ಖಂಡಿತ ಕೊಡಲಾರದು.
ಆದರೆ ನಮ್ಮೂರ ಹೋಟೆಲು ನಿಮಗೆ ನಿರಾಶೆಗೊಳಿಸುವುದಿಲ್ಲ. ಅಪ್ಪಟ ಪೂರ್ವ ಶೈಲಿಯ ಈ ಗೂಗಲ್ ಹೋಟೆಲು ಬಿಜಾಪುರದ ಶೋಲಾಪುರ ರಸ್ತೆಯಲ್ಲಿ ಆರಂಭವಾಗಿದೆ. ಅಮೆರಿಕಾದ ಪಶ್ಚಿಮ ಕರಾವಳಿಯಲ್ಲಿರುವ ಗೂಗಲ್ ಹೋಟೆಲಿಗೂ ನಮ್ಮ ಕರ್ನಾಟಕದ ಬಿಜಾಪುರದಲ್ಲಿರುವ ಗೂಗಲ್ ಹೋಟೆಲಿಗೂ ಅಜಗಜಾಂತರ ವ್ಯತ್ಯಾಸವಿದೆ. ನೀವು ಬಿಜಾಪುರಕ್ಕೆ ಬಂದರೆ ಸದಾ ಊಟ ರೆಡಿ. We mean, Eastern Delights Google Hotel, Now open!
(ಕೃಪೆ : ಮಹೇಶ್.ಕಾಂ)



Click it and Unblock the Notifications
