Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮನೆಯಲ್ಲೇ ನೈಸರ್ಗಿಕ ವಯಾಗ್ರ ತಯಾರಿಸಿ

ಬೇಕಾಗಿರುವುದು:
ಕಲ್ಲಂಗಡಿ ಹಣ್ಣು - ಒಂದು
ನಿಂಬೆ ಹಣ್ಣು - ಎರಡು
ಚಾಕು - ಒಂದು
ಮಿಕ್ಸರ್ - ಒಂದು
ಪಾತ್ರೆ/ ಸಾಸ್ ಪ್ಯಾನ್ - ಒಂದು
ಒಲೆ - ಒಂದು
ಬೆಂಕಿ ಪೊಟ್ಟಣ, ಕಡ್ಡಿಗಳ ಸಮೇತ ಅಥವಾ ಲೈಟರ್ - ನಿಮ್ಮ ಕೆಪಾಸಿಟಿಗೆ ತಕ್ಕ ಹಾಗೆ.
ಕೆಲಸ:
ಕಲ್ಲಂಗಡಿ ಹಣ್ಣನ್ನು ಚಾಕುವಿನಿಂದ ಹೆಚ್ಚಿ. ಮಿಕ್ಸರ್ ಒಳಗೆ ಹಾಕಿ. ಜ್ಯೂಸ್ ಮಾಡಿ. ನೀರು ಬೆರೆಸಬೇಡಿ. ಕಲ್ಲಂಗಡಿ ಹಣ್ಣಿನಲ್ಲಿರುವ ನೀರು ಸಾಕು. ಪಾತ್ರೆಯೊಳಗೆ ಈ ಜ್ಯೂಸನ್ನು ಸುರಿದು ನಿಂಬೆ ಹಣ್ಣನ್ನು ಚಾಕುವಿನಿಂದ ಹೆಚ್ಚಿ ಕಲ್ಲಂಗಡಿ ರಸವಿರುವ ಪಾತ್ರೆಯೊಳಗೆ ಹಿಂಡಿರಿ. ಒಲೆಯ ಮೇಲೆ ಪಾತ್ರೆಯನ್ನಿಟ್ಟು, ಒಲೆಯನ್ನು ಹಚ್ಚಿ ಈ ಮಿಶ್ರಣವನ್ನು ಚೆನ್ನಾಗಿ ಕುದಿಸಿರಿ. ಎಲ್ಲಿಯವರೆಗೂ ಕುದಿಯಬೇಕೆಂದರೆ - ತೀರಾ ನೀರಾಗಿರುವ ಈ ದ್ರವವು ಸ್ವಲ್ಪ ಗಟ್ಟಿಯಾಗಿ ಪಾಕದಂತಾಗುವವರೆಗೂ. ಆರಿದ ಮೇಲೆ ಒಂದು ಸಣ್ಣ ಬಾಟಲಿಯಲ್ಲಿ ಶೇಖರಿಸಿಡಿ. ಯಾವಾಗ ಕುಡಿಯಬೇಕೋ ಆಗ ಕುಡಿಯಿರಿ. ಯಾವಾಗ ಕುಡಿಯಬೇಕೆಂಬ ಪ್ರಶ್ನೆಯಿದೆಯೆಂದಾರೆ ಮುಂದೋದಿ.
ಏನು ಫಲ? ಈ ಫಲ?
ರಾತ್ರಿಯ ಯಶಸ್ವಿ ಪ್ರಣಯಕ್ಕೆ ಪ್ರಕೃತಿ ಚಿಕಿತ್ಸಕರು ಸಲಹೆ ಮಾಡುವ ಒಂದು ಪಥ್ಯ ಇದು. ಇದನ್ನು ನೈಸರ್ಗಿಕ ವಯಾಗ್ರ ಎಂದೂ ಹಲವರು ಹೇಳುತ್ತಾರೆ. ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿಕೊಂಡು ಔಷಧಿಗಳನ್ನು ತೆಗೆದುಕೊಂಡು ದೇಹವನ್ನು ಕೆಮಿಕಲ್ ಗುಡಾಣ ಮಾಡಿಕೊಳ್ಳುವುದಕ್ಕಿಂತ ಇದು ಸಾವಿರಪಾಲು ಮೇಲು.
ರಹಸ್ಯ?
ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲೀನ್ ಮತ್ತು ಲೈಸೊಪೀನ್ ಎಂಬ ಎರಡು ರಾಸಾಯನಿಕ ವಸ್ತುಗಳಿವೆ. ಇವುಗಳು ದೇಹದ ಎನ್‍ಜೈಮುಗಳ ಜೊತೆ ಬೆರತು ಹಿಂದೆ ಹೇಳಿದ್ದೆನಲ್ಲಾ, FSH ಮತ್ತು LH, ಇವುಗಳ ಉತ್ಪತ್ತಿಯನ್ನು ಸಾರಾಸಗಟಾಗಿ ಮಾಡುತ್ತವೆ. ಮೆಡಿಕಲ್ ಶಾಪಿನ ಕೆಮಿಕಲ್ ಭರಿತ ಔಷಧಿಗಳೂ ಮಾಡುವುದು ಇದನ್ನೇ - ಜೊತೆಗೆ ಇನ್ನಷ್ಟು ಕಾಯಿಲೆಗಳನ್ನೂ ತರಿಸಿ!!
ಹೆಚ್ಚಿನ ಮಾಹಿತಿಗಳಿಗೆ ಈ ತಾಣವನ್ನು ನೋಡಬಹುದು.
ನಿಮ್ಮ ವಯಸ್ಸೆಷ್ಟೇ ಇರಲಿ, ಆದರೆ ರಾತ್ರಿಯು ಸುಂದರಮಯವಾಗಿರಲಿ.
ಈ ಮಾಹಿತಿಗಳನ್ನೂ ಓದಿರಿ
ಚಳಿಗಾಲದಲ್ಲಿ ತಯಾರಿಸಿ ಅವರೆಕಾಳಿನ ಹುಳಿ
ಲೆವಿಟ್ರಾ ಸಿಯಾಲಿಸ್ ವಯಾಗ್ರಗಳ ಭಯಾಗ್ರಫಿ!
ವಯಾಗ್ರ : ಸುರತಕ್ರೀಡೆಯ ನಯಾಗರಾ!



Click it and Unblock the Notifications
