Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
50 ಸಾವಿರ ಗೆಲ್ಲುವ ಅತ್ತೆ ಸೊಸೆ ಯಾರು?

ಅತ್ತೆ ಸೊಸೆಯಂದಿರ ಪಾಕ ಪ್ರತಿಭೆಗೆ ಅಪೂರ್ವ ಅವಕಾಶ ನೀಡಿದ ಜೀ ಕನ್ನಡ ವಾಹಿನಿಯ "ರುಚಿ ಅಭಿರುಚಿ" ಕಾರ್ಯಕ್ರಮದ ಬೆಸ್ಟ್ ಅತ್ತೆ ಸೊಸೆ ಜೋಡಿ ಸ್ಪರ್ಧೆ ಅಂತಿಮ ಹಂತ ತಲುಪಿದೆ. ಅತ್ತೆ ಸೊಸೆ ಜೋಡಿಯ ಅಂತಿಮ ಕಂತು ನವಂಬರ್ 1ರಂದು ಕನ್ನಡ ರಾಜ್ಯೋತ್ಸವದ ವಿಶೇಷ ಸಂಚಿಕೆಯಾಗಿ ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಜೀ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.
"ರುಚಿ ಅಭಿರುಚಿ" ಬೆಸ್ಟ್ ಅತ್ತೆ ಸೊಸೆ ಕಾರ್ಯಕ್ರಮದ ಫೈನಲ್‌ಗೆ ಕನ್ನಡ ಚಿತ್ರರಂಗದ ಹೆಸರಾಂತ ನಟಿಯರಾದ ಅಭಿನಯ ಶಾರದೆ ಜಯಂತಿ ಹಾಗೂ ಅನು ಪ್ರಭಾಕರ್ ಆಗಮಿಸಲಿದ್ದು ಇವರೊಂದಿಗೆ ಆಹಾರ ತಜ್ಞೆ ಡಾ. ಎಚ್.ಎಸ್. ಪ್ರೇಮಾ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗು ಮೂಡಿಸಲಿದೆ. ಈ ಕಾರ್ಯಕ್ರಮದ ಫೈನಲ್ ತಲುಪಿರುವ ಅತ್ತೆ ಸೊಸೆಯರ ಜೋಡಿಗಳೆಂದರೆ ಜೆ.ಪಿ. ನಗರದ ಶ್ರೀರಂಗಮಣಿ ಹಾಗೂ ಸವಿತಾ, ಮಲ್ಲೇಶ್ವರಂನ ಗಿರಿಜಾ ಹಾಗೂ ಭವಾನಿ ಮತ್ತು ಶೇಷಾದ್ರಿಪುರಂನ ಮಹಾದೇವಿ ಹಾಗೂ ದೀಪಾ.
ರುಚಿ ಅಭಿರುಚಿ ಕಾರ್ಯಕ್ರಮದ ಅತ್ತೆ ಸೊಸೆ ಸ್ಪೆಷಲ್‌ಗಾಗಿ ಬೆಂಗಳೂರಿನ 24 ಭಾಗಗಳಿಂದ 24 ಜೊತೆ ಅತ್ತೆ ಸೊಸೆಯರನ್ನು ಆಹ್ವಾನಿಸಲಾಗಿತ್ತು. ಸುಮಾರು 35 ಜನ ತೀರ್ಪುಗಾರರು ಸ್ಪರ್ಧೆಗೆ ತೀರ್ಪು ನೀಡಿದ್ದು, ವಿವಿಧ ಹಂತದ ಸ್ಪರ್ಧೆಯಲ್ಲಿ ಅತ್ಯುತ್ತಮವಾದ ಸಂಯೋಜನೆಯೊಂದಿಗೆ ಉತ್ಕೃಷ್ಟವಾದ ಅಡುಗೆ ಬಗೆಗಳನ್ನು ತಯಾರಿಸಿ ಜೊತೆ ಜೊತೆಗೆ ಅಡುಗೆಗೆ ಸಂಬಂಧಿಸಿದ ಉತ್ತಮ ಟಿಪ್ಸ್‌ಗಳನ್ನು ಸಹ ನೀಡಲಿರುವ ಬೆಸ್ಟ್ ಅತ್ತೆ ಸೊಸೆಯನ್ನು ಆಯ್ಕೆ ಮಾಡಲಾಗುವುದು. ಈ ಪೈಕಿ ಅಂತಿಮ ವಿಜೇತರಿಗೆ 50 ಸಾವಿರ ಮೌಲ್ಯದ ಚಿನಾಭರಣ ಬಹುಮಾನವಾಗಿ ದೊರೆಯಲಿದೆ.
ಈವರೆಗಿನ ಸಂಚಿಕೆಗಳಲ್ಲಿ 750ಕ್ಕೂ ಹೆಚ್ಚು ಬಗೆಯ ಆಹಾರ ವೈವಿಧ್ಯಗಳ ತಯಾರಿ ಬಗ್ಗೆ ರುಚಿ ಅಭಿರುಚಿಯಲ್ಲಿ ಪರಿಚಯಿಸಲಾಗಿದೆ. 600ಕ್ಕೂ ಅಧಿಕ ಟಿಪ್ಸ್‌ಗಳನ್ನು ನೀಡಿರುವ ಕಾರ್ಯಕ್ರಮಕ್ಕೆ ಹೆಸರಾಂತ ಕಲಾವಿದರಾದ ಯಮುನಾ ಮೂರ್ತಿ, ಲಕ್ಷ್ಮೀ ಚಂದ್ರಶೇಖರ್, ಆರ್.ಟಿ. ರಮಾ, ವನಿತಾವಾಸು, ಅಪರ್ಣ, ಸಂಗೀತಾಕಟ್ಟಿ, ಚಿತ್ರಾ ಶೆಣೈ, ಸುಧಾ ನರಸಿಂಹರಾಜು, ಉಷಾ ಭಂಡಾರಿ ಹಾಗೂ ಇನ್ನು ಮುಂತಾದವರು ಆಗಮಿಸಿದ್ದರು.
"ರುಚಿ ಅಭಿರುಚಿ" ಕಾರ್ಯಕ್ರಮ ಸಿ.ಜಿ ಗ್ಯಾನ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಪ್ರತಿಭಾ ಪಟವರ್ಧನ್ ಅವರ ಪರಿಕಲ್ಪನೆ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಮುಂದಿನ ಸಂಚಿಕೆಗಳಲ್ಲಿ ಹೆಸರಾಂತ ಗಾಯಕಿಯರು ರುಚಿ ಅಭಿರುಚಿಯ ತೆರೆಯಲ್ಲಿ ತಮ್ಮ ಪಾಕ ಪ್ರವೀಣತೆ ಪ್ರದರ್ಶಿಸಲಿದ್ದಾರೆ.



Click it and Unblock the Notifications
