Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಒಬ್ಬಳೇ ಹಬ್ಬ ಮಾಡುವುದು ಹೇಗೆ?
ದೀಪಾವಳಿ ಮೂಲತಃ ಸಡಗರದ ಹಬ್ಬ ಎಂದು ನನಗೂ ಗೊತ್ತು. ಹಣತೆ, ಬೆಳಕು, ಹೊಸ ಡ್ರೆಸ್ಸು, ಹೊಸ ಆಭರಣ, ಎಳೆಯ ಮಕ್ಕಳೊಂದಿಗೆ ಆಟ. ಇಷ್ಟಮಿತ್ರರ ಸಂಗಡ ನಲಿಯುತ್ತಾ ಆಪ್ತ ಬಂಧುಗಳ ಜತೆ ಬಯಸಿದ ಸಿಹಿ ಮೆಲ್ಲುವ ಸಂಭ್ರಮದ ಸಮಯ. ಅದು ಸಮೃದ್ಧ ನಾಳೆಗಳಿಗೆ ಕನಸು ಕಟ್ಟಿಕೊಳ್ಳುವ ಸಮಯ. ಮೊನ್ನೆ ಕಟ್ಟಿಕೊಂಡ ಕನಸು ಇವತ್ತು ನಿಜವಾವಿತೆ ಎಂದು ಮುಟ್ಟಿನೊಡಿಕೊಳ್ಳುವ ಸಮಯವೂ ಹೌದು. ಇವತ್ತು ಸಮಯ ನನ್ನ ಕೈಯಲ್ಲಿ ಇದೆ ಎಂದರೆ ಇದೆ, ಇಲ್ಲ ಅಂದರೆ ಇಲ್ಲ. ನಾಳೆ ಗೊತ್ತೇ ಇಲ್ಲ.
ಎಲ್ಲರಿಗೂ ಎಲ್ಲಕಾಲಕ್ಕೂ ಸಿಹಿ ಲಭ್ಯವಿರುವುದಿಲ್ಲ. ಸಿಹಿ ಆಸ್ವಾದಿಸುವುದಕ್ಕೆ ಕೆಲವರಿಗೆ ಹಬ್ಬದ ಸಮಯ ಅನುಕೂಲವಾಗದೆ ಹೋಗಬಹುದು. ಅದೇ ಜಗದ ನಿಯಮ. ಆದರೆ, ಎಲ್ಲರಿಗೂ ಸಂತೋಷ ಮತ್ತು ಸಂಭ್ರಮ ಇರಲಿ ಎಂದು ಹಾರೈಸುವುದಕ್ಕೆ ದೀಪಾವಳಿ ಹಬ್ಬವೇ ಸುಸಮಯವೂ ಆಗಿರುವುದಂತೂ ನಿಜ. ದಟ್ಸ್ ಕನ್ನಡದ ಓದುಗರಿಗೆ ನನ್ನ ವೈಯಕ್ತಿಕ ಶುಭಾಶಯಗಳು.
ಈ ಪ್ರಪಂಚವು ಏಕಾಂಗಿಗಳಿಂದ, ಬಲವಂತ ಬ್ರಹ್ಮಚಾರಿಗಳಿಂದ ತುಂಬಿದೆ. ತುಂಬಾ ಬೇಕಾದವರು ಹತ್ತಿರ ಇರದೆ ಹೋಗಬಹುದು. ಅಥವಾ ಬೇಕಾದವರು ಎನ್ನುವವರು ಯಾರೂ ಇಲ್ಲದೇನೆ ಜೀವನ ಸಾಗುತ್ತಿರಬಹುದು. ಅಂಥವರಿಗೆ ಒಬ್ಬಟ್ಟಿತನವೇ ಜತೆಗಾರ. ನಾನೂ ಹಾಗೆ. ಪ್ರಪಂಚವೇ ನಾನು, ನಾನೇ ಪ್ರಪಂಚ. ಒಬ್ಬಳೇ ಹಬ್ಬ ಮಾಡುವುದು ಸಾಧ್ಯವಾ ?
ಅದಕ್ಕೆ ಒಂದು ಮಾನಸಿಕ ಸ್ಥಿತಿ ಬೇಕು. ನಾನು ಏನೋ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಭಾವುಕ ಪ್ರಪಂಚದಲ್ಲಿ ಮುಳುಗಿದರೆ ಹಬ್ಬ ಯಾವತ್ತೂ ಸಾಧ್ಯವಿಲ್ಲ. ನನ್ನನ್ನು ನಾನು ಸಮಾಧಾನಪಡಿಸಿಕೊಳ್ಳುವುದೇ ಹಬ್ಬ. ನನ್ನವರು ಎಂದು ಹೇಳಿಕೊಳ್ಳಲಿಕ್ಕೆ ತನ್ನವರಾರೂ ಇರದ ಬಳಗದ ಸದಸ್ಯೆ ನಾನು. ಆಕಸ್ಮಾತ್ ಕಣ್ಣಿಗೆ ಬೀಳುವ ನೆರೆಮನೆಯ ಸಂಭ್ರಮ, ಸದ್ದು ಗದ್ದಲ ಮತ್ತು ಬೇಡವೆಂದರೂ ಕಚೇರಿಯಲ್ಲಿ ಅನಿವಾರ್ಯವಾಗಿ ಜತೆಯಾಗುವ ಸಹೋದ್ಯೋಗಿಗಳನ್ನು ಹೊರತು ಪಡಿಸಿದರೆ ಬೇರಾರಿಲ್ಲ. ಯಾಕಾದರೂ ಇರಬೇಕು!
ಇವತ್ತು ನನ್ನ ಫ್ಲ್ಯಾಟ್ ನಲ್ಲಿ ಎಂದಿನಂತೆ ನಾನೊಬ್ಬಳೆ. ಅಮಾವಾಸ್ಯೆ ಎಂಬ ಕಾರಣಕ್ಕೆ ನನ್ನ ಬಾಸು ಕಚೇರಿಯ ಮಹಿಳೆಯರಿಗೆಲ್ಲ ರಜಾ ಕೊಟ್ಟಿದ್ದಾನೆ. ನನಗೆ ರಜೆ ಬೇಕಿರಲಿಲ್ಲ. ಒಬ್ಬರಿಗೆ ಅನ್ನ ಹಾಕುವ ಈ ಕುಕ್ಕರ್ ಜತೆ ಮತ್ತೊಂದು ದಿನ ಸರಸವಾಡುವ ಇಷ್ಟ ನನಗಿಲ್ಲ. ಸಣ್ಣ ಅಕ್ಕಿ ಒಳಗೆ ಬೇಯುತ್ತಿದೆ, ಇನ್ನೇನು ಕೂಗು ಹಾಕುತ್ತದೆ. ಅದರ ಕೂಗಿಗೆ ಓಗೊಡದೆ ಬದುಕಲಾರನೆ ನಾನು?
(ಮೂಲ ಇಂಗ್ಲಿಷ್, ಕನ್ನಡಕ್ಕೆ : ದಟ್ಸ್ ಕನ್ನಡ )



Click it and Unblock the Notifications











