Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಕಾಫಿ ನಮ್ಮ ಸಂಸ್ಕೃತಿ, ಸಂಪ್ರದಾಯದ ಸಂಕೇತ
ಕಾಫಿ ಕೇವಲ ಬೆಳಗಿನ ಜಾವ ಹೀರುವ ಪೇಯವಾಗಿ ಉಳಿದಿದೆಯೇ? ಖಂಡಿತ ಇಲ್ಲ. ಕಾಫಿ ನಮ್ಮ ಸಂಸ್ಕೃತಿ, ಸಂಪ್ರದಾಯದ ಸಂಕೇತ, ಕಾಫಿ ನಮ್ಮ ಜೀವನದ ಅವಿಭಾಜ್ಯ ಅಂಗ, ಕಾಫಿ ಸ್ಟೈಲಿನ ಐಕಾನು, ಕಾಫಿ ತಲೆಸಿಡಿತಕ್ಕೆ ಟಾನಿಕ್ಕು ಮುಂತಾಗಿ ಹೇಳುವವರು ದಂಡಿಯಾಗಿ ಸಿಗುತ್ತಾರೆ.
ಕನ್ನಡಿಗರ ಸಂಪ್ರದಾಯದಂತೆ ಯಾರಾದರೂ ಮನೆಗೆ ಬಂದರೆ ಕಾಫಿ ಕೊಡದೆ ಕಳಿಸುವುದೇ ಇಲ್ಲ. ಹೆಂಗಸರಿಗೆ ಅರಿಶಿನ ಕುಂಕುಮ ಹೇಗೋ, ಗಂಡಸರಿಗೆ ಕಾಫಿ ಹಾಗೆ ಎನ್ನುವವರಿದ್ದಾರೆ. ಕಚೇರಿ, ಸಭೆ, ಗೋಷ್ಠಿ, ಸಮ್ಮೇಳನಗಳು ಕಾಫಿ ಬ್ರೇಕ್ ಇಲ್ಲದೆ, ಒಂದರ್ಧ ಕಪ್ಪಾದರೂ ಕಾಫಿ ಕುಡಿಯದೆ ಮುಕ್ತಾಯವಾಗುವುದೇ ಇಲ್ಲ.
ಕೆಲವರಿಗೆ ಬೆಳಿಗ್ಗೆ ಎದ್ದು ಸಿಗರೇಟು ಸುಡದಿದ್ದರೆ ಪ್ರಾತಃಕರ್ಮಗಳು ಸರಾಗವಾಗಿ ಸಾಗುವುದಿಲ್ಲವೋ ಹಾಗೆ ಅನೇಕರಿಗೆ ಮುಂಜಾವಿನಲ್ಲಿ ಬಿಸಿಬಿಸಿ ಸ್ಟ್ರಾಂಗ್ ಕಾಫಿ ಹೀರದಿದ್ದರೆ ಪ್ರಾತಃಕರ್ಮಗಳು ಮಾತ್ರವಲ್ಲ ತಲೆ ಕೂಡ ಓಡುವುದಿಲ್ಲ. ಸಿಕ್ಕಾಪಟ್ಟೆ ತಲೆ ಸಿಡಿಯುತ್ತಿದ್ದರೆ ಒಂದರ್ಧ ಕಾಫಿ ಗಂಟಲಿಗಿಳಿಸಿಬಿಟ್ಟರೆ ತಲೆನೋವು ಮಂಗಮಾಯ. ಕಾಲೇಜು ಹುಡುಗರ ಗುಂಪನ್ನು ನೋಡಿರಬಹುದು. ಬಲಗೈಯಲ್ಲಿ ಸಿಗರೇಟು, ಎಡಗೈಯಲ್ಲಿ ಅರ್ಧ ಲೋಟ ಕಾಫಿ ಇರದಿದ್ದರೆ ಮಾತುಕತೆಗಳಿಗೆ ಜೀವವೇ ಇರುವುದಿಲ್ಲ.
ಉತ್ತರ ಭಾರತದ ಮಂದಿ ಚಹಾ ಪ್ರಿಯರಾದರೆ, ದಕ್ಷಿಣ ಭಾರತದ ಮಂದಿ ಕಾಫಿ ಪ್ರಿಯರು. ದಕ್ಷಿಣ - ಉತ್ತರದ ಹವಾಮಾನಕ್ಕೆ ಅನುಗುಣವಾಗಿ ಈ ಪೇಯಗಳು ತಮ್ಮ ಮಹತ್ವ ಉಳಿಸಿಕೊಂಡಿವೆ. ನಾವು, ನೀವೆಲ್ಲ ನಿತ್ಯ ಕುಡಿಯುವ ಕಾಫಿಗೂ ಒಂದು ಇತಿಹಾಸ ಇದೆ. ಪರಂಪರೆ ಇದೆ. ಇಂಥ ಸ್ಫೂರ್ತಿದಾಯಕವಾದ ಈ ಪೇಯದ ಕತೆ ನೀವೂ ಕೇಳಿ....
ಇತಿಹಾಸ : ಈ ವಿಶ್ವದಲ್ಲಿ ಮೊದಲು ಕಾಫಿ ತಯಾರಿಸಿದ್ದು ಕ್ರಿ.ಶ. 1000ದಲ್ಲಂತೆ. ಕಾಫಿ ಹಿಂದೆ ಕ್ವಾವ್ಹಾ ಎಂದು ಕರೆಯಲ್ಪಡುತ್ತಿತ್ತು ಎನ್ನುತ್ತದೆ ಹೆಸರಾಂತ ಕಾಫಿ ತಯಾರಿಕಾ ಕಂಪನಿಯ ಹೇಳಿಕೆ. ಹಿಂದೆ ಕಾಫಿ ಹಣ್ಣುಗಳನ್ನು ಚೆನ್ನಾಗಿ ಕುದಿಸಿ ಪಾನೀಯ ತಯಾರಿಸುತ್ತಿದ್ದರಂತೆ ಅದುವೇ ಕ್ವಾವ್ಹಾ ಅರ್ಥಾತ್ ಕಾಫಿ. ಆನಂತರದ ದಿನಗಳಲ್ಲಿ ಮನುಷ್ಯನ ಆವಿಷ್ಕಾರದಿಂದ ಕಾಫಿ ಬೀಜ ಒಣಗಿಸಿ, ಹುರಿದು ಪುಡಿ ಮಾಡಿ ಭಟ್ಟಿ ಇಳಿಸಿದರೆ ರುಚಿಕರ ಕಾಫಿ ಎಂಬ ಪೇಯ ತಯಾರಿಸಬಹುದು ಎಂಬ ಅಂಶ ಹೊರಬಿತ್ತು.
ಈಗಂತೂ ಕಾಫಿಯಲ್ಲಿ ಹಲವು ಬಗೆ, ಕೋಲ್ಡ್ ಕಾಫಿ, ಬ್ಲಾಕ್ ಕಾಫಿ, ಸ್ಪೈಸ್ಡ್ ಕಾಫಿ, ಎಸ್‌ಪ್ರೆಸ್ಸೋ ಕಾಫಿ ಇತ್ಯಾದಿ, ಇತ್ಯಾದಿ.. ಕಾಫಿ ಬೀಜಗಳಲ್ಲೂ ಈಗ ಹಲವು ಬಗೆ ಇದೆ. ಗುಣ ಮಟ್ಟ ಇದೆ. ಉತ್ತಮ ಗುಣಮಟ್ಟದ ಕಾಫಿ ಬೀಜವನ್ನು ಹದವಾಗಿ ಹುರಿದು, ಪುಡಿ ಮಾಡಿ ಗಟ್ಟಿ ನೊರೆ ಹಾಲಿನೊಂದಿಗೆ ಬೆರೆಸಿ, ರುಚಿಗೆ ತಕ್ಕಷ್ಟು ಸಕ್ಕರೆ ಬೆರೆಸಿ ಕುಡಿದರಂತೂ ಸ್ವರ್ಗವೇ ಧರೆಗಿಳಿದಂತೆ.
ಉತ್ತಮ ಕಾಫಿ ಪುಡಿಯನ್ನು ತಯಾರಿಸಲು ಎಷ್ಟು ಕೌಶಲ ಬೇಕೋ ಹಾಗೆಯೇ ಉತ್ತಮ ಕಾಫಿ ತಯಾರಿಸಲೂ ಸಾಮರ್ಥ್ಯ ಇರಬೇಕು. ಈಗ ಹಣವಂತರಿಗೆ ಆ ತೊಂದರೆ ಇಲ್ಲ ಕಾಫಿ ಮೇಕರ್‌ಗಳೇ ಮಾರುಕಟ್ಟೆಗೆ ಬಂದು ಬಿಟ್ಟಿವೆ. ಇನ್‌ಸ್ಟೆಂಟ್ ಕಾಫಿ ಪೌಡರ್‌ಗಳೂ ಇವೆ. ಅದೇನೇ ಇದ್ದರೂ ಮನೆಯಲ್ಲಿ ಮಾಡಿದ ಕಾಫಿಯ ಗಮ್ಮತ್ತೇ ಬೇರೆ.
ಇಂತಿಪ್ಪ ಕಾಫಿ ತಯಾರಿಸುವಲ್ಲಿಯೂ ನಾನಾ ವಿಧಾನಗಳಿವೆ. ಅವುಗಳನ್ನು ನಂತರ ತಿಳಿಯೋಣ. ನಿಮಗೂ ಗೊತ್ತಿದ್ದರೆ ನಮಗೆ ಬರೆಯಿರಿ.
ಪೂರಕ ಓದಿಗೆ
ಕಾಫಿ ಕಂಪನಿ ಸ್ಟಾರ್‌ಬಕ್ಸ್‌ನಿಂದ ಕನ್ನಡದ ಅವಗಣನೆ
ಹದವಾಗಿ ಬೆರೆತ ಚಿಕೋರಿ ಕಾಫಿಯ ಧ್ಯಾನ
ಒಂದು ಜೋಕ್ : ರೋಪ್ ಹಾಕಿದ ಶೀನ, ಪೆಚ್ಚಾದ ಬಾಸ್!



Click it and Unblock the Notifications
