Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಲಂಡನ್ ನಲ್ಲಿ ಎದೆಹಾಲಿನ ಐಸ್ ಕ್ರೀಮ್ ಗೆ ಬೇಡಿಕೆ

ಈ ಐಸ್‌ಕ್ರೀಮ್‌ಗಾಗಿ ಈಗಾಗಲೇ ಹಲವಾರು ಮಂದಿ ತಾಯಂದಿರು ಹಾಲನ್ನು ಕೊಡಲು ಒಪ್ಪಿದ್ದಾರೆ. ಹತ್ತು ಔನ್ಸ್ ಮೊಲೆ ಹಾಲಿಗಾಗಿ 15 ಪೌಂಡ್ ನೀಡಲಾಗುತ್ತದೆ ಎಂದು ಐಸ್‌ಕ್ರೀಮ್ ಪಾರ್ಲರ್‌ನ ಮಾಲಕರು ತಿಳಿಸಿದ್ದು, ಹಾಲನ್ನು ಮಾರಲು ಈಗಾಗಲೇ ಹಲವಾರು ಮಂದಿ ಮುಂದೆ ಬಂದಿದ್ದಾರೆ.
ಮಹಿಳೆಯರ ಹಾಲು ಬೇಕೆಂದು ಪಾರ್ಲರ್ ಮಾಲಿಕರು ಪತ್ರಿಕೆಗಳಲ್ಲಿ ಹಾಕಿದ ಜಾಹೀರಾತಿಗೆ 15 ಮಂದಿ ಮಹಿಳೆಯರು ಸ್ಪಂದಿಸಿದ್ದಾರೆ. 35 ವಯಸ್ಸಿನ ವಿಕ್ಟೋರಿಯಾ ಹಿಲೆಯ್ ಈಗಾಗಲೇ ಪಾರ್ಲರ್‌ಗೆ ತನ್ನ ಹಾಲನ್ನು ನೀಡಿದ್ದಾರೆ. ಮೊಲೆ ಹಾಲಿನ ರುಚಿಯನ್ನು ನೋಡಿದರೆ ಮಕ್ಕಳಿಗೆ ಮೊಲೆ ಹಾಲನ್ನು ಕುಡಿಸಲು ತಾಯಂದಿರು ಮುಂದಾಗುತ್ತಾರೆ. ಐಸ್‌ಕ್ರೀಮ್ ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ ಎನ್ನುವುದು ಆಕೆಯ ಅಭಿಪ್ರಾಯವಾಗಿದೆ.
ಪ್ರತಿಕ್ರಿಯೆ ಹೇಗಿದೆ?: ಆದರೆ, ಲಂಡನ್ ನಲ್ಲಿ ಎದೆ ಹಾಲಿನ ಐಸ್ ಕ್ರೀಮ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಂಪೂರ್ಣ ನೈಸರ್ಗಿಕವಾದ ಈ ಐಸ್ ಕ್ರೀಮ್ ಗೆ ಬೇಡಿಕೆಯಂತೂ ತಗ್ಗಿಲ್ಲ. ಈ ರೀತಿಯ ಐಸ್ ಕ್ರೀಮ್ ಇದೇ ಅನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಅಲ್ಲದೆ 14 ಪೌಂಡ್ ಬೇರೆ ತೆರಬೇಕು. ಬಿಟ್ಟಿ ಕೊಟ್ಟರೂ ಬೇಡ ಎಂದು 78ರ ವಯಸ್ಸಿನ ವೃದ್ಧರೊಬ್ಬರು ಟೀಕಿಸಿದ್ದಾರೆ. ಯಾರದೋ ಎದೆ ಹಾಲಿನ ಐಸ್ ಕ್ರೀಮ್ ತಿನ್ನುವ ಬದಲು ನಾವೇ ಮನೆಯಲ್ಲಿ ಈ ರೀತಿ ಐಸ್ ಕ್ರೀಮ್ ತಯಾರಿಸಿ ತಿನ್ನುವುದು ಒಳ್ಳೆಯದು ಎಂದು ಎರಡು ಮಕ್ಕಳ ತಾಯಿ ಹೇಳುತ್ತಾರೆ. ಹೆಚ್ಚು ಜನ ಮಡಗಾಸ್ಕರ್ ವೆನ್ನಿಲ್ಲಾ ಬೆರೆತ ಎದೆ ಹಾಲಿನ ಐಸ್ ಕ್ರೀಮ್ ಬೆಲೆಯ ಬಗ್ಗೆ ತಗಾದೆ ತೆಗೆದಿದ್ದಾರೆ.
ಭಾರತದಲ್ಲಿ ಇಂತಹ ಐಸ್‌ಕ್ರೀಮ್‌ನ್ನು ತಯಾರು ಮಾಡಿದರೆ ಇದು ದೊಡ್ಡ ವಿವಾದವಾಗುವುದರಲ್ಲಿ ಸಂಶಯವಿಲ್ಲ. ಮಗುವಿಗೆ ಮೊಲೆಯುಣಿಸುವುದನ್ನು ಸಾರ್ವಜನಿಕವಾಗಿ ಪ್ರದರ್ಶನಕ್ಕೆ ವಿರೋಧವಿರುವಾಗ, ಐಸ್ ಕ್ರೀಮ್ ತಯಾರಿಸಿ, ಎದೆ ಹಾಲನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ಒಪ್ಪುವುದು ಕಷ್ಟ. ಅಷ್ಟೇ ಅಲ್ಲದೆ ಇದನ್ನು ತಿನ್ನಲು ಕೆಲವರು ಮುಗಿಬೀಳಬಹುದಾದರೂ, ಹಲವರ ಟೀಕೆಗೆ ಗುರಿಯಾಗುವುದು ಖಂಡಿತ.



Click it and Unblock the Notifications
