Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಸಮುದ್ರದಲ್ಲಿ ಸಿಗೋ ಏಡಿಗಿಂತ ಈ ನಾಟಿ ಏಡಿಯ ಗೀ ರೋಸ್ಟ್ ಎಷ್ಟು ಟೇಸ್ಟ್ ಗೊತ್ತಾ?
ಮಳೆಗಾಲ ಶುರು ಆಯ್ತು ಅಂದ್ರೆ ನಮ್ಮ ಕರಾವಳಿ ಮಂದಿಗೆ ಏನೋ ಖುಷಿ, ಯಾಕೆ ಗೊತ್ತಾ? ಅದೊಂಥರ ಸ್ಪೆಷಲ್ ಫುಡ್ ಗಳ ಸೀಸನ್. ಒಂದ್ ಕಡೆ ಮಾವು-ಹಲಸು ಆದ್ರೆ, ಮತ್ತೊಂದು ಕಡೆ ಏಡಿ-ಅಣಬೆ. ಇವತ್ತು ನಾವು ಹೊಳೆ-ತೊರೆಗಳಲ್ಲಿ ರಾತ್ರಿ ಹೋಗಿ ಬೇಟೆಯಾಡಿದಾಗ ಸಿಗೋ ನಾಟಿ ಏಡಿಯ ಗೀ ರೋಸ್ಟ್ ಮಾಡೋದು ಹೇಗೆ ಅಂತ ಹೇಳ್ತಾ ಇದೀನಿ.

Recipe By: Shreeraksha
Recipe Type: Non Vegetarian
Serves: 3
-
ಬೇಕಾಗುವ ಸಾಮಗ್ರಿಗಳು:
ಏಡಿ - 6,
ತುಪ್ಪ - 2 ಚಮಚ,
ತೆಂಗಿನೆಣ್ಣೆ - 5 ಚಮಚ
ನೆನೆಸಿಡಲು: ಮೊಸರು - 1/4 ಕಪ್, ಅರಿಸಿನ ಪುಡಿ - 1/4 ಚಮಚ, ಮೆಣಸಿನಪುಡಿ - 1 ಚಮಚ, ಉಪ್ಪು - 1/2 ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಚಮಚ, ಜೋಳದ ಹಿಟ್ಟು - 1 ಚಮಚ, ನಿಂಬೆರಸ - 1 ಚಮಚ
ರುಬ್ಬಿಕೊಳ್ಳಲು: ಈರುಳ್ಳಿ - 1 ಚಿಕ್ಕದು, ಕೊತ್ತಂಬರಿ - 1 ಚಮಚ, ಕೆಂಪುಮೆಣಸು - 8, ಬೆಳ್ಳುಳ್ಳಿ - 6 ಎಸಳು, ಜೀರಿಗೆ - 1/2 ಟೀ ಚಮಚ, ಹುಣಸೆರಸ - ಸ್ವಲ್ಪ, ಉಪ್ಪು - ರುಚಿಗೆ
-
ತಯಾರಿಸುವ ವಿಧಾನ:
1. ಮೊದಲು ಮೇಲೆ ನೆನೆಸಿಡಲು ತಿಳಿಸಿದ ಪದಾರ್ಥಗಳನ್ನು ಒಂದೊಂದೇ ಸೇರಿಸಿ ಮಿಕ್ಸ್ ಮಾಡಿ.
2. ಅದರೊಂದಿಗೆ ಏಡಿಯನ್ನು 30 ನಿಮಿಷಗಳ ಕಾಲ ನೆನೆಸಿಡಿ.
3. ರುಬ್ಬಿಕೊಳ್ಳಲು ಹೇಳಿದ ಪದಾರ್ಥಗಳನ್ನು ಬಾಣಲೆಯಲ್ಲಿ ಬಿಸಿ ಮಾಡಿಕೊಂಡು ಅದನ್ನು ನುಣ್ಣಗೆ ರುಬ್ಬಿಕೊಳ್ಳಿ.
4. ನಂತರ ಪ್ಯಾನ್ ಒಂದಕ್ಕೆ ತೆಂಗಿನೆಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಏಡಿ ತುಂಡುಗಳನ್ನು ಸೇರಿಸಿ 2 ನಿಮಿಷ ಹುರಿಯಿರಿ. ನಂತರ ಏಡಿಯನ್ನು ತೆಗೆದಿರಿಸಿ.
5. ಅದೇ ಪ್ಯಾನ್ ನಲ್ಲಿ ಸ್ವಲ್ಪ ಎಣ್ಣೆ ಸೇರಿಸಿ ಏಡಿ ನೆನೆಸಿಟ್ಟ ಉಳಿದ ಮಸಾಲೆ ಹಾಗೂ ರುಬ್ಬಿಕೊಂಡ ಮಸಾಲೆ ಸೇರಿಸಿ ಮೀಡಿಯಂ ಉರಿಯಲ್ಲಿ ಕುದಿಸಿ. ಮಸಾಲೆ ಕಂದು ಬಣ್ಣಕ್ಕೆ ಬರುವವರೆಗೂ ಕುದಿಸಬೇಕು.
6. ನಂತರ ಮೊದಲೇ ಹುರಿದುಕೊಂಡ ಏಡಿಯನ್ನು ಮಸಾಲೆಗೆ ಸೇರಿಸಿ ಅದಕ್ಕೆ 1/4 ಕಪ್ ನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಸಾಲೆ ಏಡಿಗೆ ಚೆನ್ನಾಗಿ ಹಿಡಿಯಬೇಕು.
7. ನಂತರ ಕೊನೆಯದಾಗಿ ಅದಕ್ಕೆ ತುಪ್ಪ ಸೇರಿಸಿ.
8. ಬಿಸಿ ಇರುವಾಗಲೇ ತಿನ್ನುವುದು ಚೆಂದ.
- People - 3
- ಕಾರ್ಬ್ಸ್ - 17.35 g
- ಕೊಬ್ಬು - 17.96 g
- ಪ್ರೋಟೀನ್ - 11.32 g
- ಫೈಬರ್ - 3.47 g



Click it and Unblock the Notifications
