Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಅದೇ ಈರುಳ್ಳಿ ಪಕೋಡ ತಿಂದು ಬೋರ್ ಆಗಿದ್ಯಾ? ಈ ಕಾರ್ನ್ ಪಕೋಡ ಒಮ್ಮೆ ಟ್ರೈ ಮಾಡಿ
ಮಾನ್ಸುನ್ ಆರಂಭ ಆಗ್ತಾ ಇದೆ. ಇದ್ರಿಂದ ಸುರಿಯೋ ಮಳೆಯಿಂದ ಯಾರಿಗೇ ಆದ್ರೂ ಏನಾದ್ರು ಬಿಸಿ ಬಿಸಿ ತಿನ್ಬೇಕು ಅನ್ನಿಸೋದು ಸಾಮಾನ್ಯ. ಅದ್ರಲ್ಲೂ ಸಂಜೆ ಟೈಮಲ್ಲಿ ಸುರಿಯೋ ಮಳೆಗೆ, ಬಿಸಿ ಬಿಸಿ ಕಾಫಿ ಜೊತೆ ಏನಾದ್ರು ಬಿಸಿಯಾಗಿರೋ ತಿಂಡಿ ಇದ್ರೆ, ವಾವ್ ಅನ್ನೋ ಫೀಲ್ ಬರದೇ ಇರದು. ಆದ್ರೆ ಡೈಲಿ ಏನ್ ಮಾಡೋದು? ಅದೇ ಈರುಳ್ಳಿ ಪಕೋಡ ತಿಂದು ತಿಂದು ಬೋರಾಗಿದ್ರೆ ಈ ಸ್ಪೆಷಲ್ ಪಕೋಡ ಟ್ರೈ ಮಾಡಬೋದು. ಈ ಕಾರ್ನ್ ಪಕೋಡ ಇಷ್ಟ ಪಡದೇ ಇರೋದಿಕ್ಕೆ ಚಾನ್ಸೇ ಇಲ್ಲ. ಯಾಕಂದ್ರೆ ಜೋಳ ಅಥವಾ ಕಾರ್ನ್ ಎಲ್ಲರ ಫೇವರೆಟ್ ರೋಡ್ ಸೈಡ್ ಫುಡ್.

Recipe By: Shreeraksha
Recipe Type: Vegetarian
Serves: 4 ಜನ
-
ಬೇಕಾಗುವ ಪದಾರ್ಥಗಳು:
2 ಕಪ್ ಸಿಹಿ ಕಾರ್ನ್ ಕಾಳುಗಳು, ಬೇಯಿಸಿದ
½ ಈರುಳ್ಳಿ, ತೆಳುವಾಗಿ ಕತ್ತರಿಸಿ
½ ಕಪ್ ಕಡಲೆ ಹಿಟ್ಟು
2 ಟೇಬಲ್ಸ್ಪೂನ್ ಅಕ್ಕಿ ಹಿಟ್ಟು
¼ ಚಮಚ ಅರಿಶಿನ
½ ಚಮಚ ಕಾಶ್ಮೀರಿ ಕೆಂಪು ಮೆಣಸಿನ ಪುಡಿ
1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್
¼ ಚಮಚ ಚಾಟ್ ಮಸಾಲ
ಪಿಂಚ್ ಹಿಂಗ್
ಕೆಲವು ಕರಿಬೇವಿನ ಎಲೆಗಳು, ಕತ್ತರಿಸಿದ
¼ ಟೀಸ್ಪೂನ್ ಉಪ್ಪು
ಎಣ್ಣೆ, ಹುರಿಯಲು
-
ತಯಾರಿಸುವ ವಿಧಾನ :
ಮೊದಲನೆಯದಾಗಿ, ದೊಡ್ಡ ಬಟ್ಟಲಿನಲ್ಲಿ 2 ಕಪ್ ಬೇಯಿಸಿದ ಸಿಹಿ ಕಾರ್ನ್ ಕಾಳುಗಳನ್ನು ಮತ್ತು ½ ತೆಳುವಾಗಿ ಕತ್ತರಿಸಿದ ಈರುಳ್ಳಿ ಹಾಕಿ. ಜೋಳವನ್ನು ಚೆನ್ನಾಗಿ ಹಿಸುಕಿ ಚೆನ್ನಾಗಿ ಮಿಶ್ರಣ ಮಾಡಿ. ಅಗತ್ಯವಿದ್ದರೆ ಮಿಕ್ಸಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ.
ಈಗ ½ ಕಪ್ ಕಡಲೆಹಿಟ್ಟು, 2 ಟೇಬಲ್ಸ್ಪೂನ್ ಅಕ್ಕಿ ಹಿಟ್ಟು, ¼ ಟೀಸ್ಪೂನ್ ಅರಿಶಿನ, ½ ಟೀಸ್ಪೂನ್ ಮೆಣಸಿನ ಪುಡಿ, ¼ ಟೀಸ್ಪೂನ್ ಚಾಟ್ ಮಸಾಲ, 1 ಟೀಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಪಿಂಚ್ ಆಫ್ ಹಿಂಗ್, ಕೆಲವು ಕರಿಬೇವಿನ ಎಲೆಗಳು ಮತ್ತು ¼ ಟೀಸ್ಪೂನ್ ಉಪ್ಪು ಸೇರಿಸಿ ಅದೇ ಮಿಶ್ರಣಕ್ಕೆ ಸೇರಿಸಿ, ನೀರು ಹಾಕದೆ ಚೆನ್ನಾಗಿ ಕಲಿಸಿ.
ಅಗತ್ಯವಿದ್ದರೆ ಹೆಚ್ಚು ಕಡಲೆಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ.
ಈಗ ಕಾರ್ನ್ ಪಕೋಡಾ ಮಿಶ್ರಣದಿಂದ ಸಣ್ಣ ಉಂಡೆ ಮಾಡಿ, ಬಿಸಿ ಎಣ್ಣೆಯಲ್ಲಿ ಬಿಡಿ. ಮೀಡಿಯಂ ಪ್ಲೇಮ್ ನಲ್ಲಿ ಹುರಿಯಿರಿ.
ಪಕೋಡ ಗರಿಗರಿಯಾಗಿ ಮತ್ತು ಗೋಲ್ಡನ್ ಆಗುವವರೆಗೆ ಫ್ರೈ ಮಾಡಿ. ಸರಿಸುಮಾರು 10-15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಅಂತಿಮವಾಗಿ, ಗರಿಗರಿಯಾದ ಕಾರ್ನ್ ಪಕೋಡಾವನ್ನು ಚಟ್ನಿ ಅಥವಾ ಟೊಮೆಟೊ ಸಾಸ್‌ನೊಂದಿಗೆ ಸವಿಯಿರಿ.
- ಜನ - 4 ಜನ
- ಎನರ್ಜಿ - 24ಕ್ಯಾ
- ಕೊಬ್ಬು - 1.6ಗ್ರಾ
- ಪ್ರೊಟೀನ್ - 0.4ಗ್ರಾ
- ಕ್ಯಾರ್ಬೋಹೈಡ್ರೆಟ್ಸ್ - 2.4ಗ್ರಾ
- ಫೈಬರ್ - 0.3 ಗ್ರಾ



Click it and Unblock the Notifications
