Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಉಳಿದ ಅನ್ನದಿಂದ ಈ ರೀತಿ ಫಟಾಫಟ್ ಆಗಿ, ಕ್ರಿಸ್ಪಿ ದೋಸೆ ಮಾಡಬಹುದು
ಸಾಮಾನ್ಯವಾಗಿ ಉಳಿದ ಅನ್ನದಿಂದ, ಚಿತ್ರಾನ್ನ, ಪುಳಿಯೋಗರೆ ಮಾಡೋದು ರೂಢಿ. ಆದರೆ, ಇದರಿಂದ ಇನ್ಸ್ಟಂಟ್ ಆಗಿ ದೋಸೆ ಯಾವತ್ತಾದರೂ ಟ್ರೈ ಮಾಡಿದ್ದೀರಾ? ಹೌದು, ಉಳಿದ ಅನ್ನದಿಂದ, ಗರಿಗರಿಯಾದ, ರುಚಿಯಾದ ದೋಸೆ ತಯಾರಿಸಬಹುದು. ಇದು ಮಾಡೋಕ್ಕೂ ಸುಲಭ ಜೊತೆಗೆ ಅದೇ, ಚಿತ್ರಾನ್ನ ತಿಂದು ಬೇಜಾರಾದವರಿಗೆ ಇದೊಂದು ಉತ್ತಮ ಪರ್ಯಾಯ ಬ್ರೇಕ್ಫಾಸ್ಟ್. ಹಾಗಾದ್ರೆ, ಬನ್ನಿ ಉಳಿದ ಅನ್ನದಿಂದ ದೋಸೆ ಯಾವ ರೀತಿ ಮಾಡೋದು ಅಂತ ನೋಡ್ಕೋಂಡು ಬರೋಣ.

Recipe By: Shreeraksha
Recipe Type: Vegetarian
Serves: 2
-
ಬೇಕಾಗುವ ಪದಾರ್ಥಗಳು:
ರವೆ - 1 ಕಪ್
ಉಳಿದ ಅನ್ನ- 1 ½ ಕಪ್
ಹುಳಿ ಮೊಸರು - 1 ಕಪ್
ರುಚಿಗೆ ಉಪ್ಪು
ಅಡುಗೆ ಸೋಡಾ
-
ಉಳಿದ ಅನ್ನದಿಂದ ತ್ವರಿತ ದೋಸೆ ಮಾಡುವುದು ಹೇಗೆ?:
ಬ್ಲೆಂಡರ್ ಜಾರ್ನಲ್ಲಿ 1 ಕಪ್ ರವೆ ತೆಗೆದುಕೊಳ್ಳಿ. ಅದನ್ನು ಪುಡಿಮಾಡಿ.
ಈಗ 1 ½ ಕಪ್ ಉಳಿದ ಅನ್ನವನ್ನು ಗ್ರೈಂಡರ್ ಜಾರ್ಗೆ ಸೇರಿಸಿ, ಮತ್ತೆ ರುಬ್ಬಿಕೊಳ್ಳಿ.
ನಂತರ 1 ಕಪ್ ಮೊಸರು ಸೇರಿಸಿ, ಮತ್ತೆ ಕೆಲವು ಸೆಕೆಂಡುಗಳ ಕಾಲ ಅದನ್ನು ರುಬ್ಬಿಕೊಳ್ಳಿ.
ಈಗ ¾ ಕಪ್ ನೀರು ಸೇರಿಸಿ, ರುಬ್ಬಿಕೊಳ್ಳಿ.
ಒಂದು ಬಟ್ಟಲಿಗೆ ಹಿಟ್ಟನ್ನು ಹಾಕಿ, ಬೌಲ್ ಅನ್ನು ಕವರ್ ಮಾಡಿ ಮತ್ತು 10 ನಿಮಿಷಗಳ ಕಾಲ ಬಿಡಿ.
ಈಗ ಹಿಟ್ಟಿಗೆ ಉಪ್ಪು ಮತ್ತು ಚಿಟಿಕೆಯಷ್ಟು ಅಡುಗೆ ಸೋಡಾ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಅಡುಗೆ ಸೋಡಾವನ್ನು ಹೆಚ್ಚು ಸೇರಿಸಬೇಡಿ.
ಪ್ಯಾನ್ ಅನ್ನು ಬಿಸಿಗಿಟ್ಟು, ಲೋ ಫ್ಲೇಮ್ ಇಡಿ.
ಈಗ ದೋಸೆ ಹರಡಿ, ಸ್ವಲ್ಪ ತುಪ್ಪ, ಎಣ್ಣೆ ಅಥವಾ ಬೆಣ್ಣೆಯನ್ನು ಹಚ್ಚಿ, ಬೇಯಿಸಿದರೆ, ಸವಿಯಲು ದೋಸೆ ಸಿದ್ಧ.
- People - 2
- ಎನರ್ಜಿ - 133ಕ್ಯಾ
- ಫೈಬರ್ - 1.1ಗ್ರಾ
- ಪ್ರೋಟೀನ್ - 2.7ಗ್ರಾ
- ಕಾರ್ಬೋಹೈಡ್ರೇಟ್ - 18.8ಗ್ರಾ



Click it and Unblock the Notifications
