Latest Updates
-
ಸಖತ್ ರುಚಿ ನೀಡುವ ಸುಲಭದ ಧನಿಯಾ ರಸಂ: ಸೂಪ್ನಂತೆ ಕುಡಿಯಬಹುದು! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್
ಮಾರ್ನಿಂಗ್ ಬ್ರೇಕ್ ಫಾಸ್ಟ್ ಗೆ ತೆಂಗಿನಕಾಯಿ ದೋಸೆ ಸಕತ್ ರೆಸಿಪಿ
Recipes
oi-Shreeraksha
Posted By: Shreeraksha
ಇಷ್ಟು ದಿನ ತೆಂಗಿನಕಾಯಿ ಚಟ್ನಿ ತಿಂದಿರ್ತೀರಾ, ಆದರೆ, ತೆಂಗಿನ ಕಾಯಿ ದೋಸೆಯನ್ನ ಯಾವತ್ತಾದರೂ ಟೇಸ್ಟ್ ಮಾಡಿದ್ದೀರಾ?. ಇಲ್ಲ ತಾನೇ, ಹಾಗಾದ್ರೆ, ಈ ರೆಸಿಪಿ ನಿಮಗಾಗಿ. ಪ್ರತಿಸಲ, ಅದೇ ಉದ್ದಿನ ದೋಸೆ ತಿಂದು ಬೋರಾಗಿದ್ರೆ ಈ ತೆಂಗಿನ ಕಾಯಿ ದೋಸೆ ಟ್ರೈ ಮಾಡಿ. ಮಕ್ಕಳಿಂದ ಹಿಡಿದು, ಪ್ರತಿಯೊಬ್ಬರೂ ಇಷ್ಟಪಟ್ಟು ತಿನ್ನುವ ಬೆಳಗ್ಗಿನ ಉಪಹಾರವಿದು. ಇದರ ಹಿಟ್ಟು ಹದ ಬರಬೇಕಾಗಿರೋದ್ರಿಂದ ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

ಮಾರ್ನಿಂಗ್ ಬ್ರೇಕ್ ಫಾಸ್ಟ್ ಗೆ
ತೆಂಗಿನಕಾಯಿ ದೋಸೆ ಸಕತ್ ರೆಸಿಪಿ
ಮಾರ್ನಿಂಗ್ ಬ್ರೇಕ್ ಫಾಸ್ಟ್ ಗೆ
ತೆಂಗಿನಕಾಯಿ ದೋಸೆ ಸಕತ್ ರೆಸಿಪಿ
Prep Time
10 Mins
Cook Time
20M
Total Time
30 Mins
Recipe By: Shreeraksha
Recipe Type: Vegetarian
Serves: 2
Ingredients
-
ಬೇಕಾಗುವ ಸಾಮಾಗ್ರಿಗಳು:
2 ಕಪ್ ಅಕ್ಕಿ
1 ಚಮಚ ಮೆಂತ್ಯೆ
1 ಕಪ್ ತೆಂಗಿನಕಾಯಿ
1 ಕಪ್ ಅವಲಕ್ಕಿ
1 ಚಮಚ ಉಪ್ಪು
How to Prepare
-
ತಯಾರಿಸುವ ವಿಧಾನ:
- ಮೊದಲನೆಯದಾಗಿ, ಒಂದು ಬೌಲ್ ಗೆ 2 ಕಪ್ ಅಕ್ಕಿ ಮತ್ತು 1 ಮೆಂತ್ಯೆ ಹಾಕಿ, 4 ಗಂಟೆಗಳ ಕಾಲ ನೆನೆಸಿ.
- ತದನಂತರ, ಇವುಗಳನ್ನು ಮಿಕ್ಸಿ ಜಾರ್ ಗೆ ಹಾಕಿ, ನಯವಾದ ಹಿಟ್ಟು ತಯಾರಿಸಿ, ಬೌಲ್ ಗೆ ಹಾಕಿ
- ಆಮೇಲೆ ಮಿಕ್ಸಿಗೆ, 1 ಕಪ್ ತೆಂಗಿನಕಾಯಿ ಮತ್ತು 1 ಕಪ್ ನೀರು ಹಾಕಿ, ರುಬ್ಬಿಕೊಂಡು, ಅಕ್ಕಿಹಿಟ್ಟಿನ ಬಟ್ಟಲಿಗೆ ಸೇರಿಸಿ.
- ಎರಡು ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿ, 8 ಗಂಟೆಗಳ ಕಾಲ ಮುಚ್ಚಿಡಿ. ಇದು ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡುವುದು ಉತ್ತಮ.
- ನಂತರ ಇದಕ್ಕೆ 1 ಟೀಸ್ಪೂನ್ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ.
- ತವಾ ಬಿಸಗಿಟ್ಟು, ಅದು ಬಿಸಿಯಾದ ನಂತರ, ದೋಸೆ ಹಾಕಿ, ಮುಚ್ಚಿ.
- ಲೋ ಫ್ಲೇಮ್ ನಲ್ಲಿ ದೋಸೆಯ ಮೇಲ್ಭಾಗ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ.
- ಇದೀಗ, ತೆಂಗಿನಕಾಯಿ ಚಟ್ನಿಯೊಂದಿಗೆ ತೆಂಗಿನಕಾಯಿ ದೋಸೆ ಸವಿಯಲು ಸಿದ್ಧ.
Instructions
Nutritional Information
- People - 2
- ಕ್ಯಾಲೋರಿಗಳು - 82 ಕೆ.ಸಿ.ಎಲ್
- ಕೊಬ್ಬು - 1 ಗ್ರಾಂ
- ಕಾರ್ಬೋಹೈಡ್ರೇಟ್ಗಳು - 15 ಗ್ರಾಂ
- ಪ್ರೋಟೀನ್ - 1 ಗ್ರಾಂ
Comments
[ 3.5 of 5 - 58 Users]
Story first published: Monday, August 23, 2021, 10:35 [IST]
Other articles published on Aug 23, 2021



Click it and Unblock the Notifications