Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಬಾಯಲ್ಲಿ ನೀರೂರಿಸುವ ತೆಂಗಿನಕಾಯಿ ಬೆಲ್ಲ ಬರ್ಫಿ ರೆಸಿಪಿ
Recipes
oi-Shreeraksha
Posted By: Shreeraksha
ಸಿಹಿಪ್ರಿಯರಿಗೆ ಬರ್ಫಿ ಇಷ್ಟವಾಗದೇ ಇರದು. ಮಾರುಕಟ್ಟೆಯಲ್ಲಿ ನಾನಾತರಹದ ಬರ್ಫಿಗಳಿದ್ದರೂ, ಮನೆಯಲ್ಲಿಯೇ ತಯಾರಿಸುವ ಬರ್ಫಿಗೆ ರುಚಿ ಹೆಚ್ಚು. ಆದ್ದರಿಂದ ನಾವಿಂದು ಮನೆಯಲ್ಲಿಯೇ ಸುಲಭವಾಗಿ, ತೆಂಗಿನಕಾಯಿ ಬರ್ಫಿ ತಯಾರಿಸುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.

ತೆಂಗಿನಕಾಯಿ ಬೆಲ್ಲ ಬರ್ಫಿ ತಯಾರಿಸುವ ವಿಧಾನವನ್ನು ಈ ಕೆಳಗೆ ನೀಡಲಾಗಿದೆ:
ಬಾಯಲ್ಲಿ ನೀರೂರಿಸುವ ತೆಂಗಿನಕಾಯಿ
ಬೆಲ್ಲ ಬರ್ಫಿ ರೆಸಿಪಿ
ಬಾಯಲ್ಲಿ ನೀರೂರಿಸುವ
ತೆಂಗಿನಕಾಯಿ ಬೆಲ್ಲ ಬರ್ಫಿ ರೆಸಿಪಿ
Prep Time
10 Mins
Cook Time
50M
Total Time
1 Hours0 Mins
Recipe By: Shreeraksha
Recipe Type: Sweets
Serves: 2
Ingredients
-
ಬೇಕಾಗುವ ಪದಾರ್ಥಗಳು:
4 ಕಪ್ ತೆಂಗಿನಕಾಯಿ (ತುರಿದ)
2 ಚಮಚ ತುಪ್ಪ
2½ ಕಪ್ ಬೆಲ್ಲ
½ ಟೀಸ್ಪೂನ್ ಏಲಕ್ಕಿ ಪುಡಿ
1 ಟೀಸ್ಪೂನ್ ತುಪ್ಪ
¼ ಕಪ್ ಹಾಲು
½ ಕಪ್ ಹಾಲಿನ ಪುಡಿ
How to Prepare
-
ತಯಾರಿಸುವ ವಿಧಾನ:
- ಮೊದಲನೆಯದಾಗಿ, ಮಿಕ್ಸರ್ ಜಾರ್ನಲ್ಲಿ 4 ಕಪ್ ತೆಂಗಿನಕಾಯಿಯನ್ನು ತೆಗೆದುಕೊಂಡು ಒರಟಾಗಿ ರುಬ್ಬಿಕೊಂಡು, ಪಕ್ಕಕ್ಕೆ ಇರಿಸಿ.
- ದೊಡ್ಡ ಕಡಾಯಿಯಲ್ಲಿ 2 ಚಮಚ ತುಪ್ಪವನ್ನು ಬಿಸಿ ಮಾಡಿ, ಅದಕ್ಕೆ ತೆಂಗಿನಕಾಯಿಯನ್ನು ಸೇರಿಸಿ.
- 2 ನಿಮಿಷ ಅಥವಾ ತೆಂಗಿನಕಾಯಿ ಸುವಾಸನೆ ಹೋಗುವವರೆಗೆ ಹುರಿಯಿರಿ. ತೆಂಗಿನಕಾಯಿ ಕಂದುಬಣ್ಣವಾಗದಂತೆ ನೋಡಿಕೊಳ್ಳಿ.
- ಈಗ 2½ ಕಪ್ ಬೆಲ್ಲವನ್ನು ಅದಕ್ಕೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಬೆಲ್ಲವು ಕರಗಿ ಚೆನ್ನಾಗಿ ಸೇರಿಕೊಳ್ಳುವವರೆಗೆ ಬೇಯಿಸುತ್ತಿರಿ.
- ಮತ್ತೊಂದು, ಬಾಣಲೆಯಲ್ಲಿ 1 ಟೀಸ್ಪೂನ್ ತುಪ್ಪವನ್ನು ಬಿಸಿ ಮಾಡಿ, ಅದಕಕೆ ¼ ಕಪ್ ಹಾಲು ಸೇರಿಸಿ ಜೊತೆಗೆ ½ ಕಪ್ ಹಾಲಿನ ಪುಡಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಮಿಶ್ರಣವು ಪ್ಯಾನ್ ಬಿಡಲು ಪ್ರಾರಂಭವಾಗುವವರೆಗೆ ಬೆರೆಸಿ.
- ಇದನ್ನು ತೆಂಗಿನ ಬೆಲ್ಲದ ಮಿಶ್ರಣಕ್ಕೆ ವರ್ಗಾಯಿಸಿ, ಮಿಶ್ರಣವು ಆಕಾರವನ್ನು ಹಿಡಿದಿಡಲು ಪ್ರಾರಂಭಿಸುವವರೆಗೆ ಬೇಯಿಸುವುದನ್ನು ಮುಂದುವರಿಸಿ.
- ಈಗ ½ ಟೀಸ್ಪೂನ್ ಏಲಕ್ಕಿ ಪುಡಿ ಮತ್ತು 1 ಟೀಸ್ಪೂನ್ ತುಪ್ಪ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
- ಇದನ್ನು ಬೇಕಿಂಗ್ ಪೇಪರ್ನಿಂದ ಮುಚ್ಚಿದ ಟ್ರೇಗೆ ವರ್ಗಾಯಿಸಿ, ಒತ್ತಿ, ಲೆವೆಲ್ ಅಪ್ ಮಾಡಿ ಮತ್ತು 2 ಗಂಟೆಗಳ ಕಾಲ ಬಿಡಿ.
- 2 ಗಂಟೆಗಳ ನಂತರ, ಬರ್ಫಿಯನ್ನು ಬಿಡಿಸಿ, ತುಂಡುಗಳಾಗಿ ಕತ್ತರಿಸಿದರೆ, ಸವಿಯಲು ಸಿದ್ಧ.
Instructions
Nutritional Information
- People - 2
- ಕ್ಯಾಲೋರಿಗಳು: - 188 ಕೆ.ಕೆ.ಎಲ್
- 1 ಗ್ರಾಂ - 8 ಗ್ರಾಂ
- ಪ್ರೋಟೀನ್: - 1 ಗ್ರಾಂ
- ಕಾರ್ಬೋಹೈಡ್ರೇಟ್ಗಳು: - 28 ಗ್ರಾಂ
Comments
[ 5 of 5 - 92 Users]
Story first published: Wednesday, December 22, 2021, 10:45 [IST]
Other articles published on Dec 22, 2021



Click it and Unblock the Notifications