Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ವರ್ಷದವರೆಗೆ ಬಾಳಿಕೆ ಬರುವ ಟೊಮೆಟೊ ಉಪ್ಪಿನಕಾಯಿ
ಹೆಚ್ಚಾಗಿ ನಾವು ನೆಲ್ಲಿಕಾಯಿ, ಮಾವಿನಕಾಯಿ ಅಂತ ಉಪ್ಪಿನಕಾಯಿ ಹಾಕುತ್ತೇವೆ ವಿನಃ ಟೊಮೆಟೊ ಬಳಸಿ ಉಪ್ಪಿನಕಾಯಿ ಹಾಕಬಹುದು ಎಂದು ಯೋಚಿಸಲು ಕೂಡ ಹೋಗಿರುವುದಿಲ್ಲ. ಟೊಮೆಟೊದಿಂದ ಉಪ್ಪಿನಕಾಯಿ ಮಾಡಿದರೆ ರುಚಿಯ ಜೊತೆಗೆ ಒಂದು ವರ್ಷದವರೆಗೆ ಕೂಡ ಇಡಬಹುದು. ಒಂದು ವರ್ಷ ಇಡಬಹುದು ಎಂದಾಗ ಹಾಗಾದರೆ ಟೊಮೆಟೊ ಉಪ್ಪಿನಕಾಯಿ ಮಾಡಿದರೆ ಹೇಗೆ ಎಂದು ಯೋಚಿಸುತ್ತಿರಬಹುದಲ್ಲವೇ? ಇಲ್ಲಿದೆ ನೋಡಿ ರೆಸಿಪಿ.

ಬೇಕಾಗುವ ಸಾಮಗ್ರಿಗಳು:
* ಟೊಮೆಟೊ ಅರ್ಧ ಕೆಜಿ
* ಹಸಿ ಮೆಣಸಿನಕಾಯಿ 10-15
* ಒಂದು ಇಂಚಿನಷ್ಟು ದೊಡ್ಡದಿರುವ ಶುಂಠಿ
* 10-15 ಎಸಳು ಬೆಳ್ಳುಳ್ಳಿ
* ಅರಿಶಿಣ ಪುಡಿ 1 ಚಮಚ
* ಕೆಂಪು ಮೆಣಸಿನ ಪುಡಿ 1 ಚಮಚ
* ಸಾಸಿವೆ 1 ಚಮಚ
* ಮೆಂತೆ ಕಾಳು 1 ಚಮಚ
* ವಿನಿಗರ್ 2 ಚಮಚ
* ರುಚಿಗೆ ತಕ್ಕ ಉಪ್ಪು
* ಎಣ್ಣೆ ಅರ್ಧ ಕಪ್
ತಯಾರಿಸುವ ವಿಧಾನ:
1. ಟೊಮೆಟೊವನ್ನು ಕತ್ತರಿಸಿ ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಅರಿಶಿಣ ಪುಡಿ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಮಿಶ್ರಣ ಮಾಡಿ ವಿನಿಗರ್ ಹಾಕಿ 2 ಗಂಟೆಗಳ ಕಾಲ ಇಡಬೇಕು.
2. ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಮತ್ತು ಸ್ವಲ್ಪ ಸಾಸಿವೆಯನ್ನು ಹಾಕಿ ಪೇಸ್ಟ್ ರೀತಿ ಮಾಡಬೇಕು.
3. ನಂತರ ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಒಂದು ಚಮಚ ಸಾಸಿವೆಯನ್ನು ಹಾಕಬೇಕು. ಸಾಸಿವೆ ಚಟಾಪಟ ಶಬ್ದ ಬರುವಾಗ ಮೆಂತೆ ಕಾಳನ್ನು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ, ಸಾಸಿವೆ ಹಾಕಿ ತಯಾರಿಸಿದ ಪೇಸ್ಟ್ ಅನ್ನು ಬಿಸಿಯಾದ ಎಣ್ಣೆಗೆ ಹಾಕಬೇಕು. ಗ್ಯಾಸ್ ಉರಿ ಸ್ವಲ್ಪ ಕಮ್ಮಿ ಮಾಡಿ ಈ ಮಿಶ್ರಣವನ್ನು 3-4 ನಿಮಿಷ ಕಾಲ ಹುರಿಯಬೇಕು.
4. ಈಗ ವಿನಿಗರ್ ಜೊತೆ ಮಿಶ್ರಣ ಮಾಡಿಟ್ಟ ಟೊಮೆಟೊವನ್ನು ಹಾಕಬೇಕು. ಟೊಮೆಟೊ ಚೆನ್ನಾಗಿ ಬೆಂದು ಮೆತ್ತಗಾದ ಮೇಲೆ ಸೌಟ್ ನಿಂದ ಪೇಸ್ಟ್ ರೀತಿ ಮಾಡಬೇಕು. ಟೊಮೆಟೊದ ಮೇಲೆ ಎಣ್ಣೆ ತೇಲುವವರೆಗೆ ಕುದಿಸಬೇಕು. ನಂತರ ಉರಿಯಿಂದ ತೆಗೆದು ತಣ್ಣಗಾಗಲು ಇಡಬೇಕು. ಈ ರೀತಿ ಮಾಡಿದರೆ ಟೊಮೆಟೊ ಉಪ್ಪಿನಕಾಯಿ ರೆಡಿ.
ಇದನ್ನು ಗಾಳಿ ಸೇರದ ಗಾಜಿನ ಡಬ್ಬದಲ್ಲಿ ಹಾಕಿಟ್ಟರೆ ಒಂದು ವರ್ಷದವರೆಗೂ ಇಡಬಹುದು. ಇದನ್ನು ದೋಸೆ, ರೊಟ್ಟಿ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
