Latest Updates
-
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್! -
ಮುರಾಸು ಚಂಡಮಾರುತದ ಎಚ್ಚರಿಕೆ: ಚೆನ್ನೈ, ತಿರುವಳ್ಳೂರಿನಲ್ಲಿ ಶಾಲೆಗಳಿಗೆ ರಜೆ, ಪೋಷಕರು ಮತ್ತು ಪ್ರಯಾಣಿಕರು ತಿಳಿಯಲೇಬೇಕಾದ ವಿಷಯಗಳು
ಟೊಮೆಟೊ ಈರುಳ್ಳಿ ಚಟ್ನಿ
ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಕೊತ್ತಂಬರಿಯಿಂದ ಹಿಡಿದು ಬೆಳ್ಳುಳ್ಳಿಯವರೆಗೆ ಹಲವನ್ನು ಬಳಸಿ ಚಟ್ನಿಯನ್ನು ತಯಾರಿಸಲಾಗುತ್ತದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ.
ಭಾರತೀಯ ಅಡುಗೆಯಲ್ಲಿ ಚಟ್ನಿಯು ಬಲು ಪ್ರಸಿದ್ಧ. ಎಲೆಯಂಚಿಗೆ ಬಡಿಸುವ ಪಲ್ಯ, ಕೋಸಂಬರಿ, ಗೊಜ್ಜಿನೊಂದಿಗೆ ಚಟ್ನಿಗೆ ಕೂಡ ವಿಶೇಷ ಸ್ಥಾನವಿದೆ. ಚಪಾತಿ, ದೋಸೆ, ರೊಟ್ಟಿ ಅಥವ ಅನ್ನದೊಂದಿಗೆ ಇದನ್ನು ಬಡಿಸಿಕೊಂಡು ತಿನ್ನಲು ರುಚಿಕರವಾಗಿರುತ್ತದೆ. ಸಿಹಿ ಮತ್ತು ಖಾರ ಎರಡೂ ಬಗೆಯ ಚಟ್ನಿಗಳನ್ನು ಮಾಡಲಾಗುತ್ತದೆ.
ನಾವಿಂದು ಟೊಮೊಟೊ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಬಳಸಿಕೊಂಡು ಮಾಡಬಹುದಾದ ಸಿಂಪಲ್ ಚಟ್ನಿಯ ಬಗ್ಗೆ ನಿಮಗೆ ಹೇಳಿಕೊಡುತ್ತೇವೆ. ಇದನ್ನು ಬಹಳ ಸುಲಭವಾಗಿ ಮತ್ತು ಬಹಳ ಬೇಗ ಮಾಡಿಬಿಡಬಹುದು.

ಬೇಕಾಗುವ ಸಾಮಗ್ರಿಗಳು:
1. ಈರುಳ್ಳಿ- 2
2. ಟೊಮೆಟೊ- 4-5
3. ಹಸಿಮೆಣಸಿನ ಕಾಯಿ- 2
4. ಉಪ್ಪು- ರುಚಿಗೆ ತಕ್ಕಷ್ಟು
5. ಅಚ್ಚ ಖಾರದ ಪುಡಿ- 1 ಟೀಚಮಚ
6. ಎಣ್ಣೆ- 1 ಟೀಚಮಚ
7. ಸಾಸಿವೆ- 1 ಟೀಚಮಚ
ಮಾಡುವ ವಿಧಾನ
1. ಈರುಳ್ಳಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ.
2. ಟೊಮೆಟೊವನ್ನು ಸಣ್ಣ ತುಂಡುಗಳಾಗಿ ಮಾಡಿಕೊಳ್ಳಿ.
3. ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಉಪ್ಪು ಮತ್ತು ಖಾರದ ಪುಡಿಯನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿಕೊಳ್ಳಿ.
4. ಟೊಮೆಟೊ ನೀರು ಬಿಟ್ಟುಕೊಳ್ಳುವುದರಿಂದ ನೀರು ಹಾಕುವ ಅಗತ್ಯವಿಲ್ಲ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ.
5. ನಂತರ ಪಾತ್ರೆಗೆ ಹಾಕಿಕೊಳ್ಳಿ.
6. ಬಾಣಲಿಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಒಗ್ಗರಣೆ ಹಾಕಿ ಇದನ್ನು ಚಟ್ನಿಗೆ ಹಾಕಿ ಕಲಸಿ.
ಈರುಳ್ಳಿ ಟೊಮೆಟೊ ಚಟ್ನಿಯನ್ನು ದೋಸೆ, ಚಪಾತಿ ಅಥವ ಅನ್ನದೊಂದಿಗೆ ತಿನ್ನಲು ರುಚಿಕರವಾಗಿರುತ್ತದೆ.



Click it and Unblock the Notifications
