Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಹೀರೇಕಾಯಿ ಚಟ್ನಿ ರುಚಿ ನೋಡಿದ್ದೀರಾ?
ಕೆಲವರಿಗೆ ಕಾಯಿ ಚಟ್ನಿ ಇಷ್ಟವಾದರೆ ಮತ್ತೆ ಕೆಲವರಿಗೆ ಕಡಲೆ ಚಟ್ನಿ, ಟೊಮೆಟೊ ಚಟ್ನಿ ಇಷ್ಟವಾಗುತ್ತದೆ. ಚಟ್ನಿ ಮಾಡುವ ವಿಧಾನ ಸುಮಾರಾಗಿ ಒಂದೇ ರೀತಿಯಿದ್ದರೂ ಅದಕ್ಕೆ ಬಳಸುವ ಸಾಮಾಗ್ರಿಗಳು ಬದಲಾದರೆ ರುಚಿಕರವಾದ ಅನೇಕ ಬಗೆಯ ಚಟ್ನಿ ರೆಡಿಯಾಗುತ್ತದೆ. ಇಲ್ಲಿ ನಾವು ಹೀರೇಕಾಯಿಯಿಂದ ಚಟ್ನಿ ಮಾಡುವ ಸುಲಭ ವಿಧಾನ ನೀಡಲಾಗಿದೆ. ಈ ಅಡುಗೆ ಟ್ರೈ ಮಾಡಿ, ಈ ಚಟ್ನಿ ರುಚಿ ನಿಮಗೆ ಇಷ್ಟವಾಯಿತೇ ಎಂದು ತಿಳಿಸಿ.

ಬೇಕಾಗುವ ಪದಾರ್ಥಗಳು:
* ಸಿಪ್ಪೆ ತೆಗೆಯದ ಹೀರೇಕಾಯಿ 1 ಕಪ್
* ಹಸಿಮೆಣಸಿನಕಾಯಿ 5
* ತುಂಡು ಬೆಲ್ಲ, ಹುಣಸೆಹಣ್ಣು
* ರುಚಿಗೆ ಉಪ್ಪು
* ಒಗ್ಗರಣೆಗೆ: ಎಣ್ಣೆ, ಸಾಸಿವೆ, ಕರಿಬೇವು, ಕಡಲೆಬೇಳೆ
ಮಾಡುವ ವಿಧಾನ:
1. ಹೀರೇಕಾಯಿ ಚೆನ್ನಾಗಿ ತೊಳೆದು ಹೀರೆಕಾಯಿಯ ಚೂಪಾದ ತುದಿಗಳನ್ನು ಚಾಕುವಿನಿಂದ ತೆಗೆಯಬೇಕು.
2. ನಂತರ ಸಣ್ಣ ಹೋಳುಗಳನ್ನಾಗಿ ಕತ್ತರಿಸಿ (ಕಾಯಿ ಬಲಿತಿದ್ದರೆ ಮಾತ್ರ ಬೀಜ ಮತ್ತು ಬಿಳಿಯಾದ ಅಂಶವನ್ನು ತೆಗೆದುಹಾಕಬೇಕು).
3. ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು.
4. ಈಗ, ಹೀರೇಕಾಯಿ, ಹಸಿಮೆಣಸಿನಕಾಯಿ, ತುಂಡು ಬೆಲ್ಲ, ಹುಣಸೆ ಹಣ್ಣು, ರುಚಿಗೆ ತಕ್ಕ ಉಪ್ಪು ಹಾಕಿ ಅರೆಯಬೇಕು.
5. ನಂತರ ಹೀರೇಕಾಯಿ ಚಟ್ನಿಗೆ ಸಾಸಿವೆ, ಕರಿಬೇವು, ಕಡಲೆ ಬೇಳೆ ಹಾಕಿ ಒಗ್ಗರಣೆ ಮಾಡಿದರೆ ರುಚಿಕರವಾದ ಹೀರೇಕಾಯಿ ಚಟ್ನಿ ರೆಡಿ.



Click it and Unblock the Notifications
