Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಚಟ್ನಿಯನ್ನು ತಿಂಗಳುಗಟ್ಟಲೆ ಇಟ್ಟರೂ ಹಾಳಾಗುವುದಿಲ್ಲ!
ಸಾಮಾನ್ಯವಾಗಿ ನಾವು ತಯಾರಿಸುವ ಚಟ್ನಿಯನ್ನು ತುಂಬಾ ಸಮಯದವರೆಗೆ ಇಡಲು ಸಾಧ್ಯವಿಲ್ಲ, ತೆಂಗಿನಕಾಯಿ ಚಟ್ನಿಯಾದರೆ ಒಂದೇ ದಿನದಲ್ಲಿ ಹಾಳಾಗುತ್ತದೆ, ಅದೇ ಒಣ ಮೆಣಸು ಹಾಗೂ ಹುಣಸೆ ಹಣ್ಣನ್ನು ಬಳಸಿ ಮಾಡಿದ ಚಟ್ನಿಯನ್ನು ಒಂದು ವಾರಗಳ ಇಡಬಹುದು. ಅದೇ ಕೊತ್ತಂಬರಿ ಸೊಪ್ಪಿನಿಂದ ಮಾಡಿದ ಚಟ್ನಿಯನ್ನು ತಿಂಗಳುಗಟ್ಟಲೆ ಇಡಬಹುದು!
ಕೊತ್ತಂಬರಿ ಸೊಪ್ಪಿನ ಚಟ್ನಿ ಆಂಧ್ರಶೈಲಿಯ ಅಡುಗೆಯಾಗಿದೆ. ಈ ಚಟ್ನಿಯನ್ನು ಅನ್ನದ ಜೊತೆ ತಿನ್ನಲು ಬಲುರುಚಿ. ಇದನ್ನು ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಪದಾರ್ಥಗಳು
ಕೊತ್ತಂಬರಿ ಸೊಪ್ಪು 200 ಗ್ರಾಂ
ಒಣ ಮಣಸು 5 (ಖಾರಕ್ಕೆ ತಕ್ಕಂತೆ)
ಸ್ವಲ್ಪ ಇಂಗು
ಸ್ವಲ್ಪ ಹುಣಸೆ ಹಣ್ಣು
ಎಣ್ಣೆ 1 ಚಮಚ
ಉದ್ದಿನ ಬೇಳೆ 2 ಚಮಚ
ಸಾಸಿವೆ 1 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ
* ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ ಉರಿ ಮೇಲೆ ಇಡಿ. ಎಣ್ಣೆ ಬಿಸಿಯಾದಾಗ ಒಣ ಮೆಣಸನ್ನು ಹಾಕಿ ಉರಿದು, ಒಣ ಮೆಣಸನ್ನು ತೆಗೆದು ಮತ್ತೊಂದು ಬಟ್ಟಲಿಗೆ ಹಾಕಿಡಿ.
* ಈಗ ಅದೇ ಎಣ್ಣೆಗೆ ಸಾಸಿವೆ, ಉದ್ದಿನ ಬೇಳೆ ಹಾಕಿ ಎರಡು ನಿಮಿಷ ಹುರಿದು, ಕೊತ್ತಂಬರಿ ಸೊಪ್ಪು ಮತ್ತು ಹುಣಸೆ ಹಣ್ಣು ಹಾಕಿ 5 ನಿಮಿಷ ಹುರಿಯಿರಿ. ಸೊಪ್ಪು ಸ್ವಲ್ಪ ಮೆತ್ತಗಾಗುವಾಗ ಸೌಟ್ ನಿಂದ ಕುಟ್ಟಿ ಪೇಸ್ಟ್ ರೀತಿ ಮಾಡಿ. ಉಪ್ಪು ಸೇರಿಸಿ, ನುಣ್ಣನೆ ಪೇಸ್ಟ್ ರೀತಿ ಆಗುವವರೆಗೆ ಕುಟ್ಟಿ, ನಂತರ ಇಂಗು ಸೇರಿಸಿ ಮಿಕ್ಸ್ ಮಾಡಿ. (ಇದನ್ನು ರುಬ್ಬಬಹುದು, ಆದರೆ ಸೌಟ್ ನಿಂದ ಕುಟ್ಟಿ ಪೇಸ್ಟ್ ರೀತಿ ಮಾಡಿದರೆ ರುಚಿ ಹೆಚ್ಚು).
* ಈಗ ಈ ಚಟ್ನಿಯನ್ನು ಗಾಳಿಯಾಡದ ಡಬ್ಬದಲ್ಲಿಟ್ಟು ಬೇಕಾದಾಗ ಬಳಸಿ.
ಈ ಚಟ್ನಿಯನ್ನು ತಿಂಗಳುಗಟ್ಟಲೆ ಇಟ್ಟು ಅನ್ನದ ಜೊತೆ ತಿನ್ನಬಹುದು.



Click it and Unblock the Notifications
