Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಊಟದ ರುಚಿ ಹೆಚ್ಚಿಸುವ ಶುಂಠಿ ತೊಕ್ಕು

ತೊಕ್ಕನ್ನು ಮಾವಿನ ತೊಕ್ಕು, ಹುಣಸೆ ತೊಕ್ಕು ಹೀಗೆ ಅನೇಕ ಬಗೆಯಲ್ಲಿ ತಯಾರಿಸಬಹುದಾಗಿದ್ದು, ಮಳೆಗಾಲದಲ್ಲಿ ಶುಂಠಿ ಹಾಕಿ ತಯಾರಿಸುವ ಆಹಾರ ತುಂಬಾ ಆರೋಗ್ಯಕರವಾಗಿರುವುದರಿಂದ ಇವತ್ತು ನಾವು ಶುಂಠಿ ತೊಕ್ಕು ಮಾಡುವ ವಿಧಾನ ತಿಳಿಯೋಣ:
ಬೇಕಾಗುವ ಸಾಮಗ್ರಿಗಳು
* 1 ಬಟ್ಟಲು ಶುಂಠಿ (ಸಣ್ಣಗೆ ಹೆಚ್ಚಿದ ಶುಂಠಿ)
* 2 ರಿಂದ 3 ದೊಡ್ಡ ಚಮಚ ಎಣ್ಣೆ
* ಸಾಸಿವೆ
* 2 ಹಸಿಮೆಣಸಿನಕಾಯಿ (ಕತ್ತರಿಸಿದ)
* 1 ಚಮಚ ಮೆಂತ್ಯದ ಪುಡಿ
* 2 ಚಮಚ ಖಾರದ ಪುಡಿ
* ಅರ್ಧ ಚಮಚ ಅರಿಶಿಣ ಪುಡಿ
* ಅರ್ಧ ಚಮಚ ಇಂಗು
* 1 ಬಟ್ಟಲು ಹುಣಸೆರಸ
* ರುಚಿಗೆ ತಕ್ಕಷ್ಟು ಉಪ್ಪು
* ಬೆಲ್ಲ
* ಕರಿಬೇವು
ತಯಾರಿಸುವ ವಿಧಾನ
1. ಬಾಣಲೆಗೆ 3 ದೊಡ್ಡ ಚಮಚ ಎಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಸಾಸಿವೆ ಹಾಕಬೇಕು. ಸಾಸಿವೆ ಚಟಾಪಟ ಅಂದ ಮೇಲೆ ಸಣ್ಣಗೆ ಹೆಚ್ಚಿದ ಶುಂಠಿಯನ್ನು ಹಾಕಿ 2 ರಿಂದ 3 ನಿಮಿಷ ಮಾಡಬೇಕು.
2. ನಂತರ ಇದಕ್ಕೆ ಕತ್ತರಿಸಿದ 2 ಹಸಿಮೆಣಸಿನಕಾಯಿ, ಕರಿಬೇವು ಹಾಕಿ ಇದಕ್ಕೆ 1 ಚಮಚ ಮೆಂತ್ಯದ ಪುಡಿ, ಅರ್ಧ ಚಮಚ ಇಂಗು, ರುಚಿಗೆ ತಕ್ಕಷ್ಟು ಬೆಲ್ಲ, 1 ಬಟ್ಟಲು ಹುಣಸೆ ರಸ, 2 ಚಮಚ ಖಾರದ ಪುಡಿ, ಅರ್ಧ ಚಮಚ ಅರಿಶಿಣ ಪುಡಿ, ಹಾಕಿ ಚೆನ್ನಾಗಿ ಕುದಿಸಬೇಕು, ನಂತರ ರುಚಿಗೆ ತಕ್ಕ ಉಪ್ಪು ಹಾಕಿ ಸೌಟ್ ನಿಂದ ಆಗಾಗ ಆಡಿಸುತ್ತಾ ಇರಬೇಕು.
3. ಈ ರೀತಿ ಕುದಿಸಿದಾಗ ಎಣ್ಣೆ ಮೇಲೆ ತೇಲಲು ಪ್ರಾರಂಭಿಸುತ್ತದೆ. ಆಗ ಇದನ್ನು ಉರಿಯಿಂದ ತೆಗೆಯಬೇಕು.
ಈ ರೀತಿಯ ಶುಂಠಿ ತೊಕ್ಕನ್ನು ಅನ್ನ, ಚಪಾತಿ ಜೊತೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ.



Click it and Unblock the Notifications
