Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಮೊಸರು ಬಳಸಿ ಮಾಡುವ ಕೊತ್ತಂಬರಿ ಚಟ್ನಿ ರೆಸಿಪಿ
ಚಟ್ನಿಯನ್ನು ನೂರಕ್ಕೂ ಹೆಚ್ಚು ಬಗೆಯಲ್ಲಿ ತಯಾರಿಸಬಹುದು. ಇಲ್ಲಿ ನಾವು ಕೊತ್ತಂಬರಿ ಸೊಪ್ಪಿನಿಂದ ತಯಾರಿಸುವ ಚಟ್ನಿಯ ರೆಸಿಪಿ ನೀಡಿದ್ದೇವೆ. ಈ ಚಟ್ನಿಯ ವಿಶೇಷತೆ ಅಂದರೆ ಇದನ್ನು ಮೊಸರು ಬಳಸಿ ತಯಾರಿಸಲಾಗುವುದು.
ಇದರಿಂದಾಗಿ ಸಾಮಾನ್ಯವಾದ ಕೊತ್ತಂಬರಿ ಸೊಪ್ಪಿನ ಚಟ್ನಿಗಿಂತ ಅಧಿಕ ರುಚಿಕರವಾಗಿರುತ್ತದೆ. ಈ ವಿಶೇಷ ಚಟ್ನಿಯನ್ನು ಮಾಡುವ ವಿಧಾನ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು:
ಕೊತ್ತಂಬರಿ ಸೊಪ್ಪು 1 ಕಟ್ಟು
ಮೊಸರು ಅರ್ಧ ಕಪ್
ಬೆಳ್ಳುಳ್ಳಿ ಎಸಳು 7-10
ಈರುಳ್ಳಿ 2
ಹಸಿಮೆಣಸಿನ ಕಾಯಿ 5-6
ರುಚಿಗೆ ತಕ್ಕ ಉಪ್ಪು
ಜೀರಿಗೆ 1 ಚಮಚ
ಅರ್ಧ ನಿಂಬೆ ಹಣ್ಣಿನ ರಸ
1 ಚಮಚ ಎಣ್ಣೆ
ತಯಾರಿಸುವ ವಿಧಾನ:
* ತವಾದಲ್ಲಿ ಜೀರಿಗೆ ಹಾಕಿ ರೋಸ್ಟ್ ಮಾಡಬೇಕು.
* ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ನಂತರ ಅದರಲ್ಲಿ ಬೆಳ್ಳುಳ್ಳಿಯನ್ನು ಹಾಕಿ ಸ್ವಲ್ಪ ಕಂಡು ಬಣ್ಣ ಬರುವವರೆಗೆ ಹುರಿಯಬೇಕು. ಈ ರೀತಿ ಮಾಡಿದರೆ ಚಟ್ನಿ ರುಚಿಯ ಜೊತೆಗೆ ಪರಿಮಳಭರಿತವಾಗಿರುತ್ತದೆ.
* ಈಗ ಕೊತ್ತಂಬರಿ ಸೊಪ್ಪನ್ನು ಶುಚಿ ಮಾಡಿ ಒಂದು ಬಟ್ಟಲಿನಲ್ಲಿ ಹಾಕಬೇಕು. ಅದಕ್ಕೆ ಕತ್ತರಿಸಿದ ಮೆಣಸಿನ ಕಾಯಿ, ಕತ್ತರಿಸಿದ ಈರುಳ್ಳಿ, ರೋಸ್ಟ್ ಮಾಡಿದ ಜೀರಿಗೆ, ಫ್ರೈ ಮಾಡಿದ ಬೆಳ್ಳುಳ್ಳಿ ಹಾಗೂ ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಮೊಸರು ಹಾಕಿ ನುಣ್ಣಗೆ ರುಬ್ಬಬೇಕು.
* ಈಗ ರೆಡಿಯಾದ ಕೊತ್ತಂಬರಿ ಚಟ್ನಿಗೆ ಸ್ವಲ್ಪ ನಿಂಬೆ ರಸ ಹಿಂಡಿ ಚಟ್ನಿಯ ರುಚಿ ನೋಡಿ, ಒಂದು ತುತ್ತು ಅನ್ನ ಅಧಿಕವೇ ಹೊಟ್ಟೆಯನ್ನು ಸೇರುತ್ತದೆ.



Click it and Unblock the Notifications
